ಎಸ್‌ಐಡಿಬಿಐ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಹುದ್ದೆಗಳಿಗೆ ನೇಮಕಾತಿ
ಸಹಾಯಕ ವ್ಯವಸ್ಥಾಪಕ (ಗ್ರೇಡ್-ಎ) ಹುದ್ದೆಯ ನೇಮಕಾತಿಗಾಗಿ ಎಸ್‌ಐಡಿಬಿಐ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ನವೆಂಬರ್ 28ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಸ್‌ಐಡಿಬಿಐ (ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ) ಸಂಸತ್ತಿನ ಕಾಯಿದೆಯ ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ ಹಣಕಾಸು ಸಂಸ್ಥೆಯಾಗಿದೆ. ಕಳೆದ ಏಳೂವರೆ ದಶಕಗಳಲ್ಲಿ ಭಾರತದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. ಇದು ಭಾರತದಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ, ಹಣಕಾಸು ಮತ್ತು ಅಭಿವೃದ್ಧಿ ಕೇಂದ್ರೀಕೃತ ವ್ಯಾಪಾರ ಡೊಮೇನ್ ಹೊಂದಿದ್ದು. ದೇಶದಾದ್ಯಂತ ಕೈಗಾರಿಕಾ ವಲಯದಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಚೈತನ್ಯಕ್ಕೆ ಕೊಡುಗೆ ನೀಡಿದೆ. ಇಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕ (ಗ್ರೇಡ್-ಎ ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರ
ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ : 50 ಹುದ್ದೆ
ಆರೋಗ್ಯ ಸೇವೆ ನಿರ್ದೇಶನಾಲಯದಲ್ಲಿ 487 ಗ್ರೂಪ್ ಬಿ ಮತ್ತು ಸಿ ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28-11-2023
ಗುಂಪು ಚರ್ಚೆ ಮತ್ತು ಸಂದರ್ಶನದ ತಾತ್ಕಾಲಿಕ ದಿನಾಂಕ: ಡಿಸೆಂಬರ್ 2023/ ಜನವರಿ 2024
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ/ ಓಬಿಸಿ/ಇ ಡ್ಬ್ಲೂಎಸ್ ಅಭ್ಯರ್ಥಿಗಳಿಗೆ: ರೂ. 1100
ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ರೂ. 175
ವಯಸ್ಸಿನ ಮಿತಿ (08-11-2023 ರಂತೆ)
ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು
ವೇತನ ಶ್ರೇಣಿ
ರೂ. 44500- 89150
ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಹೇಗೆ?
ಶೈಕ್ಷಣಿಕ ಅರ್ಹತೆ ಏನು?
1. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 60 ಅಂಕಗಳೊಂದಿಗೆ ಮತ್ತು ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಪಡೆದಿರಬೇಕು.
2 ಅಥವಾ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ .ಸಿ ಎ/ ಸಿ ಎಸ್ / ಸಿ ಡಬ್ಲ್ಯೂಎ/ ಸಿ ಎಫ್ ಎ/ ಸಿ ಎಂ ಎ ಪದವಿಯನ್ನು ಪಡೆದಿರಬೇಕು.
3. ಅಥವಾ ಅಭ್ಯರ್ಥಿಗಳು ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ / ಇಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಪದವಿ / ಸ್ನಾತಕೋತ್ತರ ಪದವಿಯನ್ನು ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 60 ಅಂಕಗಳೊಂದಿಗೆ ಮತ್ತು ಎಸ್ ಸಿ/ ಎಸ್ ಟಿ/ ಪಿ ಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ಆಯ್ಕೆ ವಿಧಾನ ಹೇಗೆ?
1. ಬ್ಯಾಂಕ್ ವ್ಯಕ್ತಿತ್ವ, ಸಂವಹನದ ಮಟ್ಟ, ಸ್ಪಷ್ಟತೆ ಮತ್ತು ಸಮಸ್ಯೆ - ಪರಿಹಾರವನ್ನು ನಿರ್ಣಯಿಸುವುದು, ನವೀನತೆ, ದಕ್ಷತೆಯ ಮಟ್ಟ ವಿಷಯದ ಮೇಲೆ ಆನ್‌ಲೈನ್ ಸೈಕೋಮೆಟ್ರಿಕ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಮಾತ್ರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
2. ಸೈಕೋಮೆಟ್ರಿಕ್ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ಸಂದರ್ಶನ ಹಾಜರಾಗಲು ಕರೆಯಲಾಗುತ್ತದೆ.
3. ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಗರಿಷ್ಠ ತಲಾ 100 ಅಂಕಗಳನ್ನು ನಿಗದಿ ಪಡಿಸಲಾಗಿದೆ.
4. ಅಂತಿಮವಾಗಿ ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಯು ಗಳಿಸಿದ ಸಂಯೋಜಿತ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ.
ವಿಶೇಷ ಸೂಚನೆ
1. ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಟ್ ಆಫ್ ಸ್ಕೋರ್ ಪಡೆದರೆ ಅವರಲ್ಲಿ ವಯಸ್ಸಿನ ಅವರೋಹಣ ಕ್ರಮದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
2. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
3. ಗುಂಪು ಚರ್ಚೆ ಮತ್ತು ಸಂದರ್ಶನವು ಲಕ್ನೋ, ಮುಂಬೈ, ನವದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ದಲ್ಲಿ ನಡೆಯಲಿದೆ
4. ಶಾರ್ಟ್‌ಲಿಸ್ಟ್ ಆದ ಅರ್ಹರಿಗೆ ನೇಮಕಾತಿ ತರಬೇತಿ / ಗುಂಪು ಚರ್ಚೆ / ಅಭ್ಯರ್ಥಿಗಳಿಗೆ ಕರೆ ಪತ್ರಗಳು, ಇ-ಮೇಲ್ ಮತ್ತು ಸಂದರ್ಶನ ಎಸ್ ಎಂ ಎಸ್ ಮೂಲಕ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ https://www.sidbi.in/en ವೆಬ್‌ಸೈಟ್ ವೀಕ್ಷಿಸಿರಿ.