Asianet Suvarna News Asianet Suvarna News

NHB Recruitment 2021 : ವಿವಿಧ ಸ್ತರದ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

* ನ್ಯಾಷನಲ್ ಹೌಸಿಂಗ್ ಬ್ಯಾಂಕ್(NHB)ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
* ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021, ಡಿಸೆಂಬರ್ 30 ಕೊನೆಯ ದಿನ
* ಎನ್‌ಎಚ್‌ಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ!

NHB is recruiting its various types of manger posts and check details
Author
Bengaluru, First Published Dec 11, 2021, 4:51 PM IST

(ನವದೆಹಲಿ ಡಿ.11) ಪದವಿ ಮುಗಿಸಿ ಬಹಳ ದಿನಗಳಿಂದ ಕೆಲಸ ಹುಡುಕುತ್ತಿದ್ದೀರಾ? ಅದರಲ್ಲೂ ಬ್ಯಾಂಕ್ ನಲ್ಲಿ ಜಾಬ್ ಬೇಕು ಅಂತ ಕಾಯುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಅದು ರಾಷ್ಟ್ರೀಯ ‌ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರುವ ಗುಡ್ ಆಫರ್ ಇದಾಗಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್‌(National Housing Bank)ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ತಿಳಿದು ಕೊಳ್ಳಲು ಅಭ್ಯರ್ಥಿಗಳು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ www.nhm.org.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಸೀನಿಯರ್ ಮ್ಯಾನೇಜ್ಮೆಂಟ್‌ ಗ್ರೇಡ್‌ ಸ್ಕೇಲ್‌-IV (ರೀಜನಲ್ ಮ್ಯಾನೇಜರ್ (Regional Manager), ರಿಸ್ಕ್‌ ಮ್ಯಾನೇಜ್ಮೆಂಟ್‌ (Risk Management), ಮಿಡಲ್ ಮ್ಯಾನೇಜ್ಮೆಂಟ್ ಗ್ರೇಡ್‌ ಸ್ಕೇಲ್ 2 ಅಂದರೆ ಡೆಪ್ಯೂಟಿ ಮ್ಯಾನೇಜರ್(Deputy Manager) ಮತ್ತು ಜೂನಿಯರ್ ಮ್ಯಾನೇಜ್ಮೆಂಟ್‌ ಸ್ಕೇಲ್‌ ಅಂದರೆ ಅಸಿಸ್ಟಂಟ್‌ ಮ್ಯಾನೇಜರ್ (Assistant Manager) ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

National Housing Bankನ ಈ ಹುದ್ದೆಗಳಿಗೆ ಸೇರಲು ಬಯಸುವ ಅಭ್ಯರ್ಥಿಯು ಪದವಿ /  ಕಾಮರ್ಸ್‌ / ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್‌ ಮಾಡಿರಬೇಕು. ತಮ್ಮ ಅಂತಿಮ ಫಲಿತಾಂಶಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬುದನ್ನು ಗಮನಿಸಬೇಕು. ಎಲ್ಲಾ ದಾಖಲೆಗಳನ್ನು ಡಿಸೆಂಬರ್ 1 ರಂದು ಅಥವಾ ಅದಕ್ಕೂ ಮೊದಲು ಘೋಷಿಸಿರಬೇಕು. ಈ ನೇಮಕಾತಿಗಳ ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Bank of Baroda Recruitment 2021: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ, ತಿಂಗಳಿಗೆ 63,840 ರೂ ಸಂಬಳ

ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕ

ಅಸಿಸ್ಟಂಟ್ ಮ್ಯಾನೇಜರ್ ( Assistant Manager ಸ್ಕೇಲ್‌-1)  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷದ ಒಳಗಿರಬೇಕು. ಡೆಪ್ಯೂಟಿ ಮ್ಯಾನೇಜರ್ (Deputy Manager ಸ್ಕೇಲ್‌-2) ಹುದ್ದೆಗೆ ಕನಿಷ್ಠ 23 ವರ್ಷದಿಂದ ಗರಿಷ್ಠ 32 ವರ್ಷ ವಯಸ್ಸಿನೊಳಗಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೇ ರೀಜನಲ್ ಮ್ಯಾನೇಜರ್ (Regional Manager ಸ್ಕೇಲ್‌ 4) - ರಿಸ್ಕ್‌ ಮ್ಯಾನೇಜ್ಮೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಕನಿಷ್ಠ 30 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು. 

ಅಭ್ಯರ್ಥಿಗಳು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ www.nhm.org.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್‌ ಪರೀಕ್ಷೆ!

ಅಸಿಸ್ಟಂಟ್ ಮ್ಯಾನೇಜರ್ (Assistant Manager ಸ್ಕೇಲ್‌-1)-14 ಹುದ್ದೆಗಳು, ಡೆಪ್ಯೂಟಿ, ಮ್ಯಾನೇಜರ್ (Deputy Manaher ಸ್ಕೇಲ್‌-2)- 02 ಹುದ್ದೆಗಳು, ರೀಜನಲ್, ಮ್ಯಾನೇಜರ್ (Regional Manager ಸ್ಕೇಲ್‌ 4) - ರಿಸ್ಕ್‌ ಮ್ಯಾನೇಜ್ಮೆಂಟ್‌(Risk Management)- 01 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್‌ ಪರೀಕ್ಷೆ  ಎದುರಿಸಬೇಕಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಜನವರಿ ಅಥವಾ ಫೆಬ್ರವರಿ 2022 ರಲ್ಲಿ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್, ಸಾಮಾನ್ಯ ಅರಿವು ಮತ್ತು ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕುರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ.  200 ಅಂಕಗಳ ಪರೀಕ್ಷೆ ಇದಾಗಿದ್ದು, 3 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಆಕಾಂಕ್ಷಿಗಳು ಅರ್ಜಿಯನ್ನು ಮುಂದುವರಿಸುವ ಮೊದಲು ಅರ್ಹತಾ ಮಾನದಂಡಗಳು, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು NHB ಯ ಆಯ್ಕೆ ಪ್ರಕ್ರಿಯೆಯ ಮೂಲಕ ಹೋಗಬೇಕು.

IOCL Recruitment 2021: 300 ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಆಯಿಲ್

ಆಯ್ಕೆಯಾದವರಿಗೆ  ಭರ್ಜರಿ ವೇತನ

ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ (Regional Manager ಸ್ಕೇಲ್‌ 4)  ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.1,26,954, ಡೆಪ್ಯೂಟಿ ಮ್ಯಾನೇಜರ್ (Deputy Manaher ಸ್ಕೇಲ್‌-2)- 02 ಹುದ್ದೆಗೆ ರೂ.79,62 ವೇತನ, ಅಸಿಸ್ಟಂಟ್ ಮ್ಯಾನೇಜರ್ (Assistant Manager ಸ್ಕೇಲ್‌-1) ಹುದ್ದೆಗೆ ಆಯ್ಕೆಯಾದವರಿಗೆ 60,056 ರೂ. ವೇತನ ಸಿಗಲಿದೆ. ಇದಲ್ಲದೆ, ಪೋಸ್ಟ್ ಬ್ಯಾಂಕಿನ ವಸತಿ, ವೈದ್ಯಕೀಯ ವೆಚ್ಚಗಳ ಮರುಪಾವತಿ, ಆಸ್ಪತ್ರೆಗೆ, ದೂರವಾಣಿ/ಮೊಬೈಲ್ ಮುಂತಾದ ಇತರ ಸೌಲಭ್ಯಗಳು ದೊರೆಯಲಿವೆ.

Follow Us:
Download App:
  • android
  • ios