Asianet Suvarna News Asianet Suvarna News

ಬ್ಯಾಂಕ್ ಉದ್ಯೋಗ ಅರಸುತ್ತಿರುವವರಿಗೆ ಖುಷಿ ಸುದ್ದಿ, ಐಬಿಪಿಎಸ್‌ನಲ್ಲಿ 9ಸಾವಿರ ಹುದ್ದೆಗಳಿಗೆ ನೇಮಕಾತಿ

ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 9,923 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್‌ 27 ಕೊನೆಯ ದಿನವಾಗಿದೆ.

IBPS RRB  recruitment 2024  Notification for  than nine  thousand post gow
Author
First Published Jun 14, 2024, 11:40 AM IST

ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 9,923 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್‌ 27 ಕೊನೆಯ ದಿನವಾಗಿದೆ.

ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವವರಿಗೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (Institute of Banking Personnel Selection) ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 9,923 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. (IBPS RRB Recruitment 2024). ಆಫೀಸರ್, ಕಚೇರಿ ಸಹಾಯಕ ಸೇರಿ ವಿವಿಧ ಹುದ್ದೆಗಳಿದ್ದು, ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸರ್ಕಾರದಿಂದ ಕಾನೂನು ಪದವೀಧರರ ತರಬೇತಿಗಾಗಿ ಅರ್ಜಿ ಆಹ್ವಾನ

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ: ಕಚೇರಿ ಸಹಾಯಕ – 5,538 ಹುದ್ದೆ, ಆಫೀಸರ್ ಸ್ಕೇಲ್ 1 – 2,485 ಹುದ್ದೆ, ಆಫೀಸರ್ ಸ್ಕೇಲ್ 2 – 315 ಹುದ್ದೆ, ಆಫೀಸರ್ ಸ್ಕೇಲ್ 2 – 68 ಹುದ್ದೆ, ಆಫೀಸರ್ ಸ್ಕೇಲ್ 2 – 21 ಹುದ್ದೆ, ಆಫೀಸರ್ ಸ್ಕೇಲ್ 2 – 24 ಹುದ್ದೆ, ಆಫೀಸರ್ ಸ್ಕೇಲ್ 2 – 8 ಹುದ್ದೆ, ಆಫೀಸರ್ ಸ್ಕೇಲ್ 2 – 3 ಹುದ್ದೆ, ಆಫೀಸರ್ ಸ್ಕೇಲ್ 2 – 59 ಹುದ್ದೆ, ಆಫೀಸರ್ ಸ್ಕೇಲ್ 3 – 73 ಹುದ್ದೆಗಳಿವೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಾರ್ಷಿಕ 1 ಕೋಟಿಗೂ ಅಧಿಕ ಪ್ಯಾಕೇಜ್‌ ಪಡೆಯುವ ಇನ್ಫೋಸಿಸ್‌ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ!

ವಯೋಮಿತಿ: ಆಫೀಸರ್ ಸ್ಕೇಲ್ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಆಫೀಸರ್ ಸ್ಕೇಲ್ 2 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 32 ವರ್ಷ. ಆಫೀಸರ್ ಸ್ಕೇಲ್ 3 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷ. ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಲಭ್ಯ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 850 ರು. ಮತ್ತು ಪ.ಜಾ. / ಪ.ಪಂ. / ಅಂಗವಿಕಲ ಅಭ್ಯರ್ಥಿಗಳು 175 ರು. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್‌ಲೈನ್‌ ಮೂಲಕ ಪಾವತಿಸಬಹುದು.

Latest Videos
Follow Us:
Download App:
  • android
  • ios