ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 266 ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ನವದೆಹಲಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ದೇಶದಲ್ಇ 4500 ಕ್ಕೂ ಹೆಚ್ಚು ಪ್ಯಾನ್ ಇಂಡಿಯಾ ಶಾಖೆಯ ನೆಟ್‌ವರ್ಕ್ ಹೊಂದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು ವ್ಯವಹಾರ ರೂ. 6,65,000 ಕೋಟಿ ರೂಪಾಯಿ ಆಗಿದೆ. 33,000 ಕ್ಕೂ ಅಧಿಕ ನೌಕರರು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಿಯಮಿತ ಆಧಾರದ ಮೇಲೆ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ I ಹುದ್ದೆಯ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ದಿನಾಂಕ, ಶುಲ್ಕ. ಶೈಕ್ಷಣಿಕ ಅರ್ಹತೆ ಕುರಿತ ಈ ಲೇಖನದಲ್ಲಿ ನೋಡೋಣ. 

ಹುದ್ದೆ: ZONE BASED OFFICER (ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ I)

ಅರ್ಜಿ ಶುಲ್ಕ:  ಎಸ್‌ಸಿ/ ಎಸ್‌ಟಿ/PWBD/ಮಹಿಳಾ ಅಭ್ಯರ್ಥಿಗಳು 175+ಜಿಎಸ್‌ಟಿ ಪಾವತಿಸಬೇಕು. ಇತರೆ ಎಲ್ಲಾ ಅಭ್ಯರ್ಥಿಗಳು 850 ರೂಪಾಯಿ + ಜಿಎಸ್‌ಟಿ ಪಾವತಿಸಬೇಕು. ಫೆಬ್ರವರಿ 24, 2025ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು 21/01/2025 ರಿಂದ 09/02/2025 ಅರ್ಜಿ ಶುಲ್ಕದ ಪಾವತಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ21-01-2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ09-02-2025
ಆನ್‌ಲೈನ್ ಪರೀಕ್ಷೆಮಾರ್ಚ್ -2025
ಸಂದರ್ಶನನಂತರ ಪ್ರಕಟಿಸಲಾಗುತ್ತದೆ.

ವಯೋಮಿತಿ
ಕನಿಷ್ಠ: 21 ವರ್ಷ
ಗರಿಷ್ಠ: 32 ವರ್ಷ

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಸೇರಿದಂತೆ ಸರ್ಕಾರ ಅಭ್ಯರ್ಥಿಗಳು, ವೈದ್ಯಕೀಯ, ಇಂಜಿನಿಯರಿಂಗ್, ಚಾರ್ಟರ್ಡ್ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರುತ್ತಾರೆ. ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಕೂಡ ಅರ್ಹರಾಗಿರುತ್ತಾರೆ.

ಒಟ್ಟು ಹುದ್ದೆಗಳು: 266

ಹುದ್ದೆಯ ವಲಯವಾರು ವಿವರ

ವಲಯ (Zone)ಹುದ್ದೆಗಳ ಸಂಖ್ಯೆ
ಅಹಮದಾಬಾದ್123
ಚೆನ್ನೈ58
ಗುವಾಹಟಿ 43
ಹೈದರಾಬಾದ್42

ಪರೀಕ್ಷಾ ಕೇಂದ್ರ: ದೇಶದ 30 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು, ಹುಬ್ಬಳ್ಳಿ/ಧಾರವಾಡ ಆಯ್ಕೆ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ಬರೆಯಲು ಇಚ್ಛಿಸುವ ನೀಡಲಾದ ಒಂದು ನಗರವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಧಿಸೂಚಿತ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಅಂತಹ ಕೇಂದ್ರ ಹತ್ತಿರದ ಕೇಂದ್ರದೊಂದಿಗೆ ವಿಲೀನಗೊಳಿಸಬಹುದು.

ಸಂಬಳ: Basic: 48480-2000/7-62480-2340/2-67160-2680/7-85920

ಇದನ್ನೂ ಓದಿ: ಹೆಚ್ಚು ಸಂಬಳದ ಉದ್ಯೋಗ ಪಡೆಯಲು ಈ ಕೋರ್ಸ್‌ಗಳನ್ನು ಮಾಡ್ಕೊಳ್ಳಿ

ಈ ಹುದ್ದೆಯ ಹೆಚ್ಚಿನ ಮಾಹಿತಿ ಕೆಳಗಿನ ಪಿಡಿಎಫ್‌ ಫೈಲ್‌ನಲ್ಲಿದೆ.