ಜಮಖಂಡಿ(ಅ.11): ಪ್ರವಾಹ ಪೀಡಿತ ಸಂತ್ರಸ್ತರಿಗೆ ಎಕರೆ ಜಮೀನಿಗೆ 70-80 ಸಾವಿರ ಪರಿಹಾರ ನೀಡಬೇಕು ಹಾಗೂ ಬೆಳೆಹಾನಿ ಪರಿಹಾರ ಮತ್ತು ಎಲ್ಲ ರೀತಿಯಿಂದ ಸಾಲಮನ್ನಾ ಮಾಡಬೇಕು. ಪ್ರವಾಹ ಪೀಡಿತ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ರಾಜ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯ ದಲಿತ ವೇದಿಕೆಯ ಜಿಲ್ಲಾಧ್ಯಕ್ಷ ದೀಲಿಪ ದಾಶ್ಯಾಳ ಹಾಗೂ ದಲಿತ ವೇದಿಕೆ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಗುರುವಾರ ಇಲ್ಲಿನ ಎ.ಜಿ.ದೇಸಾಯಿ ವೃತ್ತದಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ಪ್ರವಾಹಕ್ಕೀಡಾದ ಸುತ್ತ ಮುತ್ತಲಿನ ಗ್ರಾಮದ ನೂರಾರು ಮಹಿಳೆ ಸೇರಿ ಬೃಹತ ಪ್ರತಿಭಟನೆ ಮುಖಾಂತರ ಸರ್ಕಾರದ ವಿರುದ್ಧ ಘೋಷಣಿಯನ್ನು ಕೂಗಿ, ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ, ತಹಸೀಲ್ದಾರ್‌ ಡಿ.ಜಿ.ಮಹಾತ ಅವರಿಗೆ ಮನವಿ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಮಾತನಾಡಿದ ಅವರು, ತಾಲೂಕಿನ ಸುಮಾರು 25 ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಬಹುತೇಕ ಮನೆಗಳು ಬಿದ್ದು ಹೋಗಿವೆ. ಗ್ರಾಮಸ್ಥರು ಗ್ರಾಮದ ಶಾಲೆ, ಅಂಗನವಾಡಿಗಳಲ್ಲಿ ವಾಸಿಸುತ್ತಿದ್ದು, ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಸರ್ಕಾರ ಪ್ರವಾಹ ಸಂತ್ರಸ್ತರಿಗೆ 10 ಸಾವಿರ ಪರಿಹಾರ ನೀಡಿದ್ದು, ಯಾವುದಕ್ಕೆ ಸಾಲದು, ದನ-ಕರುಗಳಿಗೆ ಮೇವು ಸಿಗದೆ ಉಪವಾಸ ಬಿದ್ದಿವೆ.ಸರ್ಕಾರ 1 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗುವದು ಎಂದು ನೆರೆ ಸಂತ್ರಸ್ತರಿಗೆ ಸುಳ್ಳು ಭರವಸೆ ನೀಡುತ್ತಿದೆ. ಅತಿವೃಷ್ಟಿಯಿಂದ ಬೆಳೆ ನಾಶ,ತೋಟ ಹಾನಿವಾಗಿ ಭೂ ಕುಸಿತದಿಂದ ಬೆಳೆಗಾರರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಭೂ ಕುಸಿತದಿಂದ ಬೆಳೆಗಾರರು ಜೀವನ ಸಾಗಿಸುವುದು ಕಷ್ಟವಾಗಿದೆ. ಪ್ರವಾಹ ಪೀಡಿತ ಸಂತ್ರಸ್ತರ ಬೇಡಿಕೆಗಳನ್ನು ಮತ್ತು ಪರಿಹಾರವನ್ನು ಕೂಡಲೇ ನೀಡಬೇಕು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ರಾಜ್ಯ ದಲಿತ ವೇದಿಕೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಶಿಕಾಂತ ತೇರದಾಳ, ತಾಲೂಕಾಧ್ಯಕ್ಷ ಮಹದೇವ ಕೊಯ ನಾಗೋಳ, ಪರುಶುರಾಮ ಲಗಳಿ,ಸಂಜಯ ಕಾಳೆ, ಪರುಶುರಾಮ ಚವ್ಹಾಣ, ನಂದೇಪ್ಪ ರೋಡಕರ, ಸಿದ್ದು ಶಂಕ್ರೆಪ್ಪಗೋಳ, ಬಶೀರ ಪಠಾಣ, ಮೊಹಮ್ಮದ ಮೊಗಲ, ಪ್ರಭು ಲಗಳಿ, ಸುಭಾಶ ತಳವಾರ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.