ಹುಬ್ಬಳ್ಳಿ ಗಲಾಟೆ ಪ್ರಕರಣ, ಬಾಗಲಕೋಟೆಯಲ್ಲಿ ಸಚಿವ ಸುನೀಲಕುಮಾರ್ ವಾರ್ನಿಂಗ್

  • ಹುಬ್ಬಳ್ಳಿ ಗಲಾಟೆ ಪ್ರಕರಣ ಬಾಗಲಕೋಟೆಯಲ್ಲಿ ಸಚಿವ ಸುನೀಲಕುಮಾರ್ ವಾರ್ನಿಂಗ್
  • ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡೋರಿಗೆ ಸಚಿವ ಸುನೀಲಕುಮಾರ್ ಖಡಕ್ ವಾರ್ನಿಂಗ್
  • ಶಾಂತಿಗೆ ಸಹಕರಿಸಿ ಇಲ್ಲವೆ ಬೋಲ್ಡೇಜರ್ ಗೆ ಸಹಕರಿಸಿ ಎಂದ ಸಚಿವ ಸುನೀಲಕುಮಾರ್
minister v Sunil Kumar warning against who created violence in Karnataka gow

ವರದಿ: ಮಲ್ಲಿಕಾರ್ಜುನ ಹೊಸಮನಿ ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಏ.19): ಹುಬ್ಬಳ್ಳಿ (Hubballi) ಗಲಾಟೆ ಪ್ರಕರಣ ಬೆನ್ನಲ್ಲೆ,  ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವಂತವರಿಗೆ ಸಚಿವ ಸುನೀಲಕುಮಾರ್ (v Sunil Kumar) ಖಡಕ್ ವಾರ್ನಿಗ್ ಮಾಡುವುದರ ಜೊತೆಗೆ ಶಾಂತಿಗೆ ಸಹಕರಿಸಿ ಇಲ್ಲವೆ ಬೋಲ್ಡೇಜರ್ ಗೆ ಸಹಕರಿಸಿ ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅವರು ಬಾಗಲಕೋಟೆಯಲ್ಲಿ ಒಂದು ದಿನದ ಪ್ರವಾಸ ಕೈಗೊಂಡ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹುಬ್ಬಳ್ಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನವರ ಅವಧಿಯಲ್ಲಿ PFI  ಸಂಘಟನೆಯ ಒಂದೂವರೆ ಸಾವಿರ ಜನರ ಕೇಸ್ ಹಿಂಪಡೆಯಲಾಯಿತು ಅಂದು ಬಿತ್ತಿದ ವಿಷ ಬೀಜ ಇಂದು ಹೆಮ್ಮರವಾಗಿ ನಿಂತಿದೆ.  ಇನ್ನು ಹುಬ್ಬಳ್ಳಿ ಘಟನೆಯನ್ನು ಈಗಾಗಲೇ ನಮ್ಮ ಅಧಿಕಾರಿಗಳು  ಘಟನೆ ನಡೆದು 24 ಗಂಟೆಯಲ್ಲಿ ಹದ್ದುಬಸ್ತಿಗೆ ತಂದಿದ್ದಾರೆ.

ಇಂತಹ ಕಾನೂನು ಬಾಹೀರ ಚಟುವಟಿಕೆ ತಡೆದುಕೊಳ್ಳವಂತಹ ಪ್ರಶ್ನೆ ಈ ಸಕಾ೯ರಕ್ಕೆ ಇಲ್ಲವೇ ಇಲ್ಲ, ಹೀಗಾಗಿ ಅಂತವರನ್ನು ನಾವು ಬಗ್ಗು ಬಡಿಯುತ್ತೇವೆ ಎಂದರಲ್ಲದೆ ನಾವು ಯಾವುದನ್ನು ಸಹಿಸೋದಿಲ್ಲ ಎಂದರು. ಇನ್ನು ಮಂಗಳೂರಿನ ಘಟನೆಗಳು, ಬೆಂಗಳೂರಿನ ಘಟನೆಗಳಂತೆ ಯಾರೋ ಕೆಲವರು ಉದ್ದೇಶಪೂವ೯ಕವಾಗಿ ಅಶಾಂತಿ ಉಂಟು ಮಾಡೋ ಕೆಲಸ ಘಟನೆಗಳನ್ನ ಮಾಡುತ್ತಿದ್ದಾರೆ.

ನಾನು ಎಚ್ಚರಿಕೆ ಕೊಡೋದು ಏನೆಂದರೆ, ಈ ಸರ್ಕಾರವೇನು ಕೈಕಟ್ಟಿ ಕೂರೋದಿಲ್ಲ,  ಘಟನೆ ನಡೆದು 24 ಗಂಟೆಯಲ್ಲಿ 100 ಜನರನ್ನ ಬಂಧಿಸಿದ್ದೇವೆ, ಮೊಕದ್ದಮೆ ದಾಖಲಿಸಿದ್ದೇವೆ. ಅಲ್ಲದೆ ಅಲ್ಲಿ ಶಾಂತಿ ಕದಡದಂತೆ ಎಚ್ಚರಿಕೆಯನ್ನ ನೀಡಲಾಗಿದೆ. ಇನ್ನು ಯಾರೂ ಈ ರೀತಿ ಗಲಭೆ ಸೃಷ್ಟಿ ಮಾಡುತ್ತಾರೆಯೋ, ಅವರು ತಿಳಿದುಕೊಳ್ಳಬೇಕು, ನೀವು ಶಾಂತಿಗೆ ಸಹಕರಿಸುತ್ತಿರೋ ಅಥವಾ ಬೋಲ್ಡೇಜರ್ ಗೆ ಸಹಕರಿಸುತ್ತಿರೋ ಅನ್ನೋದು ಅವರಿಗೆ ಬಿಟ್ಟಿದ್ದು ಎನ್ನುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿದರು.

Belagavi ಅಕ್ರಮ ಮರಳು ತೆರವಿಗೆ ಆಗ್ರಹಿಸಿದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡನ ಜೀವ ಬೇದರಿಕೆ!

ಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೆಯೇ ಹುಟ್ಟಿದ್ದು: ಮಠ ಮಾನ್ಯಗಳಲ್ಲೂ ಅನುದಾನಕ್ಕೆ ಕಮಿಷನ್ ಆರೋಪ ವಿಚಾರ ಮಾತನಾಡಿದ ಸಚಿವ ಸುನೀಲಕುಮಾರ್, ಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೆ ಹುಟ್ಟಿದ್ದು, ಒಟ್ಟೊಟ್ಟಿಗೆ ಕಳೆದ 70 ವರ್ಷಗಳಿಂದ ದೇಶದಲ್ಲಿ ಬೆಳೀತಾ ಬಂದಿವೆ. ಕಾಂಗ್ರೆಸ್ ಎಲ್ಲಿಯತನಕ ಬೆಳೆಯುತ್ತದೆಯೋ ಅಲ್ಲಿತನಕ ಕಮಿಷನ್ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ.

ಹೀಗಾಗಿ ತಮ್ಮ ಕಾಲಾವಧಿ ಸರ್ಕಾರದ ಎಲ್ಲ ಹಂತದಲ್ಲಿ ಕಮಿಷನ್ ಮುಖಾಂತರ ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದರು. ಇನ್ನು ಅದನ್ನ ಸರಿ ಮಾಡುವ ಪ್ರಯತ್ನ ನಮ್ಮ ಬಿಜೆಪಿ ಸರ್ಕಾರದಲ್ಲಿ ನಾವು ಮಾಡುತ್ತಿದ್ದೇವೆ. ನಾವು ಮೋದಿ ನೇತೃತ್ವದಲ್ಲಿ ನಡೆಸುತ್ತಿರುವ ಸರ್ಕಾರ ಇದು. ಹೀಗಾಗಿ ಯಾವುದೇ ಕಾರಣಕ್ಕೂ ಯಾವುದೇ ಹಂತದಲ್ಲಿ ಅವಕಾಶ ಕೊಡೋದಿಲ್ಲ. ಅದರ ನಿರೀಕ್ಷೆ ಮಾಡುವ ಪ್ರಶ್ನೆ ಇಲ್ಲ ಎಂದರು.

ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರರಿಗೆ ಆರ್ಥಿಕ ನೆರವು

ಇನ್ನು  ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯೊ ಅವರು ದೂರ ದೃಷ್ಟಿವುಳ್ಳ ಬಜೆಟ್ ಕೊಡೋ ಮುಖಾಂತರ ರಾಜ್ಯದ ಜನರನ್ನು ಅಭಿವೃದ್ಧಿ ಕಡೆ ತೆಗೆದುಕೊಂಡು ಹೋಗೋ ನವ ಕರ್ನಾಟಕ ನಿರ್ಮಾಣದ ಕಡೆಗೆ ಪ್ರಯತ್ನ ಮಾಡಿದ್ದಾರೆ. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ, ಅದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ ಎಂದರಲ್ಲದೆ, ಧರ್ಮದ ಕುರಿತಂತೆ ಸಾಧು ಸಂತರ ಬಗ್ಗೆ ನಮಗೆ ವಿಶೇಷವಾದ ಗೌರವ  ಇದೆ. ಹೀಗಾಗಿ ಯಾವುದನ್ನು ನೀವು ಬಹಿರಂಗವಾಗಿ ಹೇಳಿದ್ದಾರೋ ಆ ದಾಖಲೆಗಳನ್ನೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನೀವು ಬಹಿರಂಗವಾಗಿ ಕೊಡಬೇಕು. ಬಹಿರಂಗವಾಗಿ ಕೊಡೋಕೆ ಆಗಲ್ಲ ಎಂದರೆ, ಮುಖ್ಯಮಂತ್ರಿಗಳ ಹತ್ತಿರ ಬಂದು ಮಾತನಾಡಿ ದಾಖಲೆಗಳನ್ನ ಕೊಡಿ. ನಾವು ತನಿಖೆ ಮಾಡಲು ಸಿದ್ಧರಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

ಕಮಿಷನ್ ಬಗ್ಗೆ ಮಾತನಾಡೋ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಇನ್ನು ಕಮಿಷನ್ ವಿಚಾರವಾಗಿ ಮಾತನಾಡುವ ವೇಳೆ ಸಚಿವ ಸುನೀಲಕು‌ಮಾರ್ , ಕಾಂಗ್ರೆಸ್ ಗೆ ಕಮಿಷನ್ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲ ಎಂದರು.‌ ಕಮಿಷನ್ ಮತ್ತು ಕಾಂಗ್ರೆಸ್ ಒಂದೇ ರೀತಿಯಾಗಿ ಹುಟ್ಟಿದ್ದು, ಹೀಗಾಗಿ ಅವರು ಈ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದರಲ್ಲದೆ, ಅವತ್ತಿಂದ ಇವತ್ತಿನ ವರೆಗೂ ಯಾವ ಯಾವ ರಾಜ್ಯದಲ್ಲಿ ಕಮಿಷನ್ ವಿಪರೀತ ಹಂತಕ್ಕೆ ತೆಗೆದುಕೊಂಡು ಹೋಗಿ ವಿಸರ್ಜನೆ ಆಗಿದೆ. ಸಾಲದ್ದಕ್ಕೆ ಕರ್ನಾಟಕದಲ್ಲೂ ಕೂಡ ಇದೇ ರೀತಿಯ ವಾತಾವರಣ ಅವರ ಕಾಲಾವಧಿಯಲ್ಲಿ ಸೃಷ್ಟಿ ಮಾಡಿಕೊಂಡಿದ್ದರು. ಅದನ್ನ ಶೂನ್ಯಕ್ಕೆ ತರುವ ಪ್ರಯತ್ನ ಮಾಡುತ್ತಿದೇವೆ, ಇಂತಹ ಸಂದರ್ಭದಲ್ಲಿ ಜನರ ದಿಕ್ಕನ್ನು ಬೇರೆ ಕಡೆ ಸೆಳೆಯಬೇಕು ಅನ್ನೋ ಪ್ರಯತ್ನದಲ್ಲಿ ಆರೋಪ ಮಾಡ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸು ಕಾಣೋದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ಸಚಿವ ಸುನೀಲ್ ಕುಮಾರ್ ಹೇಳಿದರು.

Latest Videos
Follow Us:
Download App:
  • android
  • ios