ಬಾಗಲಕೋಟೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಆರಂಭಕ್ಕೆ ಆಗ್ರಹ

ಮಂಜೂರಾಗಿರುವ ಮೆಡಿಕಲ್ ಕಾಲೇಜು ಆರಂಭಿಸಿ| ಸರ್ಕಾರದ ಮೇಲೆ ಒತ್ತಡ ತರಲು ಜನಪ್ರತಿನಿಧಿಗಳಿಗೆ ಡಾ.ಎಂ.ಪಿ.ನಾಡಗೌಡ ಆಗ್ರಹ|ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಒಂದಕ್ಕಿಂತ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ|ಮೆಡಿಕಲ್ ಕಾಲೇಜ ಸ್ಥಾಪನೆಗೆ ಅಂದಾಜು 600 ಕೋಟಿ ಬೇಕಾಗಿದ್ದು ಸರ್ಕಾರ ಹಣ ಬಿಡುಗಡೆ ಮಾಡಬೇಕು|

M P Nadagouda Demand to Government for Start Bagalkot Medical College

ಬಾಗಲಕೋಟೆ(ನ.14): ಐದು ವರ್ಷಗಳ ಹಿಂದೆಯೇ ಬಾಗಲಕೋಟೆಗೆ ಮಂಜೂರು ಆಗಿರುವ ಸರ್ಕಾರಿ ಮೆಡಿಕಲ್ ಕಾಲೇಜ ಆರಂಭಕ್ಕೆ ರಾಜ್ಯ ಸರ್ಕಾರ ಆಸಕ್ತಿ ವಹಿಸಬೇಕೆಂದು ಆಗ್ರಹಿಸಿರುವ ವಿಧಾನ ಪರಿಷತ್ ನ ಮಾಜಿ ಸದಸ್ಯ ಡಾ. ಎಂ.ಪಿ.ನಾಡಗೌಡ ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಮನವಿ ಮಾಡಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2014-15 ರ ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ ಮಂಜೂರಾಗಿದೆ, 2005 ರಲ್ಲಿ ಧರ್ಮಸಿಂಗ್ ಸರ್ಕಾರವು ಜಿಲ್ಲೆಗೊಂದು ಮೆಡಿಕಲ್ ಕಾಲೇಜ ಆರಂಭಿಸಲು ನಿರ್ಧರಿಸಿದ ಪರಿಣಾಮ ರಾಜ್ಯದಲ್ಲಿ ಹೊಸ ಮೆಡಿಕಲ್ ಕಾಲೇಜುಗಳ ಆರಂಭಗೊಂಡಿದ್ದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿಯೂ ಬಾಗಲಕೋಟೆ ಇನ್ಸ್‌ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರಿನಲ್ಲಿ ಆರಂಭ ಮಾಡಲು ಸರ್ಕಾರ ನಿರ್ಧರಿಸಿದ್ದರೂ ಇವರೆಗೆ ಆ ಕುರಿತು ಪ್ರಕ್ರಿಯೆಗಳು ನಡೆದಿಲ್ಲಾ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಾಗಲಕೋಟೆ ನವನಗರದಲ್ಲಿ 350 ಹಾಸಿಗೆಯ ಜಿಲ್ಲಾಸ್ಪತ್ರೆ ಇದೆ. ಅದಕ್ಕೆ ಹೊಂದಿಕೊಂಡತೆ ಸೆಕ್ಟರ್ ನಂ 11 ರಲ್ಲಿ ಮೆಡಿಕಲ್ ಕಾಲೇಜಿಗಾಗಿ 20 ಎಕರೆ ಜಮೀನು ಮೀಸಲಿಡಲಾಗಿದೆ. ಹೀಗಿದ್ದರೂ ಕಾಲೇಜು ಆರಂಭಕ್ಕೆ ಯಾಕೆ ವಿಳಂಬ ಧೋರಣೆ ಎಂದು ಪ್ರಶ್ನಿಸಿದ ಅವರು ಈ ಕುರಿತು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾಂಗ್ರೆಸ್ ನ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮನವಿ ಮಾಡುವೆ.ಮೆಡಿಕಲ್ ಕಾಲೇಜ ಈ ಭಾಗದಲ್ಲಿ ಸ್ಥಾಪಿತವಾದರೆ ಬಡವರಿಗೆ ವರದಾನಾಗಲಿದೆ ಎಂದರು. 

ಮೆಡಿಕಲ್ ಕಾಲೇಜ ಸ್ಥಾಪನೆಗೆ ಅಂದಾಜು 600 ಕೋಟಿ ಬೇಕಾಗಿದ್ದು ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆ ಮೂಲಕ ಈ ಭಾಗದ ರೈತರ ಆರೋಗ್ಯದ ಜೊತೆಗೆ ಕಾಲೇಜಿನಿಂದ ಇತರ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಬಾಗಲಕೋಟೆಯಲ್ಲಿ ಈಗಾಗಲೇ ಇರುವ ಖಾಸಗಿ ಮೆಡಿಕಲ್ ಕಾಲೇಜಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ತೊಂದರೆ ಯಾಗುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಒಂದಕ್ಕಿಂತ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ ಎಂದರು. 

ನಾಡಗೌಡ ಟೀಕೆ: 

ಮೊದಲೆಲ್ಲಾ ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋಗಿ (ಹೋರಾಟ ಚಳುವಳಿಗಳು) ನಂತರ ಬಂದು ಚುನಾವಣೆಗೆ ನಿಂತು ಶಾಸಕ, ಸಂಸದರಾಗಿ ಸೇವೆ ಸಲ್ಲಿಸಿ ಮನೆ ಕಟ್ಟಿಸಿಕೊಂಡು ಮಕ್ಕಳಿಗೆ ಒಂದಿಷ್ಟು ಆಸ್ತಿ ಮಾಡಿರುತ್ತಿದ್ದರು, ಆದರೆ ಈಗ ಹಾಗಲ್ಲ ಮೊದಲು ಶಾಸಕ, ಸಂಸದರಾಗಿ ಆಸ್ತಿ, ಮನೆ ಎಲ್ಲವನ್ನು ಮಾಡಿದ ನಂತರ ಜೈಲಿಗೆ ಹೋಗುತ್ತಿದ್ದಾರೆ ಎಂದರು.  
 

Latest Videos
Follow Us:
Download App:
  • android
  • ios