World Aids Day: ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅತ್ಯಗತ್ಯ ನ್ಯಾಯಾಧೀಶೆ ಪಸ್ತಾಪೂರ ಸಲಹೆ

ಎಚ್.ಐ.ವಿ ಪೀಡಿತರನ್ನು ಸಮಾನವಾಗಿ ಕಾಣಬೇಕು. ಪ್ರಾರಂಭದಲ್ಲಿಯೇ ಪರೀಕ್ಷೆಗೆ ಒಳಪಡಿದಾಗ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಚಿಕಿತ್ಸೆಯಿಂದ ಗುಣಮುಖವಾಗಿ ಇರುವವರು ಇತರರಿಗೆ ಮಾದರಿಯಾಗಬೇಕು.

Justice Pastapur suggests awareness is essential for controlling HIV

ಬಾಗಲಕೋಟೆ (ಡಿ.1) : ಎಚ್ಐವಿ ಅಥವಾ ಏಡ್ಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಅದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾದ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಸಲಹೆ ನೀಡಿದರು.

ನಗರದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಚ್.ಐ.ವಿ ಪೀಡಿತರನ್ನು ಸಮಾನವಾಗಿ ಕಾಣಬೇಕು. ಪ್ರಾರಂಭದಲ್ಲಿಯೇ ಪರೀಕ್ಷೆಗೆ ಒಳಪಡಿದಾಗ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಚಿಕಿತ್ಸೆಯಿಂದ ಗುಣಮುಖವಾಗಿ ಇರುವವರು ಇತರರಿಗೆ ಮಾದರಿಯಾಗಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ತಾಯಿಗೆ ಎಚ್.ಐ.ವಿ ಬಂದಲ್ಲಿ ಅವಳ ಮಗ ಮನೆಯಿಂದ ಹೊರಹಾಕಿದ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಆ ರೀತಿಯಾಗದಂತೆ ಜನರಲ್ಲಿ ಜಾಗೃತಿ ತರುವುದು ಅಗತ್ಯವಾಗಿದೆ ಎಂದು ತಿಳಿಸಿದರು.

World AIDS Day: ಸೋಂಕಿನ ಲಕ್ಷಣ ನಿವಾರಿಸುತ್ತೆ ಆಯುರ್ವೇದ ಚಿಕಿತ್ಸೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ಎಚ್.ಐವಿ ಕಂಡು ಬಂದ ರೋಗಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವಾಗಬೇಕು. ಕಳೆದ 22 ವರ್ಷಗಳಿಂದ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣಕ್ಕಾಗಿ ಶ್ರಮಿಸಲಾಗುತ್ತಿದೆ. ಎಲ್ಲ ರೀತಿಯ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಸಹ ಕೈಜೋಡಿಸಬೇಕು. ಸಮಾಜದಲ್ಲಿ ಎಲ್ಲರೂ ಆರೋಗ್ಯವಂತರಾಗಿ ಬದುಕಬೇಕಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 91,869 ಜನರನ್ನು ಎಚ್‍ಐವಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 570 ಜನರಲ್ಲಿ ಮಾತ್ರ ಪಾಜಿಟಿವ್ ಕಂಡುಬಂದಿರುವುದಾಗಿ ತಿಳಿಸಿದರು.

ಖಾಸಗಿ ವೈದ್ಯರಾದ ಡಾ.ಶೇಖರ ಮಾನೆ ಮಾತನಾಡಿ, ಕಳೆದ 20 ವರ್ಷಗಳಿಂದ ಎಚ್.ಐ.ವಿ ನಿಯಂತ್ರಣ ಕಾರ್ಯ ನಡೆಯುತ್ತಿದೆ. ಜನಸಾಮಾನ್ಯರಿಗೆ ಈ ರೋಗದ ಬಗ್ಗೆ ಅರಿವು ಮೂಡಿದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದಂತಾಗುತ್ತದೆ. ರೋಗಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯವಾಗಬೇಕು ಎಂದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಶ್ರೀನಿವಾಸ ಪಾಟೀಲ ಅವರು ಎಚ್.ಐ.ವಿ ರೋಗದ ಲಕ್ಷಣ, ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

World Aids Day: ವಿಶ್ವ ಏಡ್ಸ್‌ ದಿನ ಏಕೆ ಆಚರಿಸಲಾಗುತ್ತದೆ? ಈ ರೋಗ ಮೊದಲು ಕಂಡು ಬಂದದ್ದೆಲ್ಲಿ?

ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ ನಾಟೆಕಾರ ಸೇರಿದಂತೆ  ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎಮ್.ಎಚ್.ಸುಬೇದಾರ,  ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಗೆ ಸನ್ಮಾನ: ರಕ್ತದಾನ ಮಾಡುವಲ್ಲಿ ಯುವಜನರನ್ನು ಪ್ರೇರೇಪಿಸಿದ ಜಗದ್ಗುರು ಗುರು ಸಿದ್ದೇಶ್ವರ ಬೃಹನ್ಮಠ ಗುಳೇದಗುಡ್ಡ, ಮರಾಠ ಹಿತಚಿಂತಕರ ಸಂಘ, ಬಾಗಲಕೋಟೆ, ಮಾಜಿ ಸೈನಿಕ ಕ್ಷೇಮಾಭಿವೃದ್ದಿ ಸಂಘ, ಚೊಳಚಗುಡ್ಡ, ಏಡ್ಸ್ ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ಲೋಕಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜ, ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ, ಹುನಗುಂದ ವಿಎಂಎಸ್‍ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮುಖ್ಯಸ್ಥರನ್ನು ಗೌರವಿಉಸಲಾಯಿತು. ಐಸಿಟಿಸಿ ಕೇಂದ್ರಗಳಾದ ಜಿಲ್ಲಾ ಆಸ್ಪತ್ರೆ, ಇಲಕಲ್ಲ ಸಾರ್ವಜನಿಕ ಆಸ್ಪತ್ರೆ, ಬಾದಾಮಿ ತಾಲೂಕಾ ಆಸ್ಪತ್ರೆ ರಕ್ತ ಸಂಗ್ರಹಣಾ ಘಟಕ, ಜಮಖಂಡಿ ಟಿಐ ಚೈತನ್ಯ ಮಹಿಳಾ ಸಂಘ ಮುಧೋಳ, ಬಾಗಲಕೋಟೆ ಕೆ.ಎಚ್.ಪಿಟಿಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. 

ಯಾವುದೇ ಮಹಿಳೆ ಇಷ್ಟಪಟ್ಟು ಲೈಂಗಿಕ ವೃತ್ತಿಗೆ ಬರುವುದಿಲ್ಲ

ನಗರದ ವಿವಿಧೆಡೆ ಜಾಗೃತಿ ಜಾಥಾ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಆಸ್ಪತ್ರೆಯಿಂದ ಹಮ್ಮಿಕೊಂಡ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಚಾಲನೆ ನೀಡಿದರು. ಜಾಗೃತಿ ಜಾಥಾ ಎಲ್.ಐ.ಸಿ ಸರ್ಕಲ್ ವರೆಗೆ ನಡೆಸಲಾಯಿತು. ಜಾಥಾದಲ್ಲಿ ಅರುಣೋಧಯ ಪ್ಯಾರಾಮೆಡಿಕಲ್, ಡೆಂಟಲ್ ಕಾಲೇಜು, ಹೋಮಿಯೋಪತಿ ಮೆಡಿಕಲ್ ಕಾಲೇಜು ಸೇರಿದಂತೆ ಇತರೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಥಾದುದ್ದಕ್ಕೂ ಘೋಷಣೆಗಳನ್ನು ಕೂಗಲಾಯಿತು.
 

Latest Videos
Follow Us:
Download App:
  • android
  • ios