ಹುನಗುಂದದ ಗುಡೂರ (ಎಸ್.ಸಿ)ನಲ್ಲಿ ಹುಲ್ಲೇಶ್ವರ ಚಂದಾಲಿಂಗೇಶ್ವರ ಜಾತ್ರೆ
ಗುಡೂರ (ಎಸ್.ಸಿ) ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ಹುಲ್ಲೇಶ್ವರ ಚಂದಾಲಿಂಗೇಶ್ವರ ಜಾತ್ರೆ| ಮಳಿಯಪ್ಪಜ್ಜನ ಕಟ್ಟೆಯಲ್ಲಿರುವ ಬನ್ನಿಮಹಾಂಕಾಳಿ ದೇವಿ, ಬಸವಣ್ಣ ದೇವರಿಗೆ ಪೂಜೆ| ಬಸವಣ್ಣ ದೇವರ ಕಿವಿ ಸ್ಪರ್ಶಿಸಿ ಹೊಯ್ತ್ ಹಿಂಗಾರಿ ಮುಂಗಾರಿ ಟಕಟಮಸ್ನ ಎಂದು ದೇವನುಡಿ ಹೇಳಿದರು| ಕೇಳಿದ ಕೃಷಿಕ ಭಕ್ತರೆಲ್ಲರೂ ಸಂತಸ ಸಂಭ್ರಮ ಹಂಚಿಕೊಂಡರು| ಸುತ್ತಮುತ್ತಲ ಗ್ರಾಮಗಳು, ನಗರ ಪಟ್ಟಣಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು|
ಅಮೀನಗಡ(ಅ.19): ಸಮೀಪದ ಗುಡೂರ (ಎಸ್.ಸಿ) ಗ್ರಾಮದ ಆರಾಧ್ಯ ದೈವ ಹುಲ್ಲೇಶ್ವರ ಚಂದಾಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಗಿರಿಯಪ್ಪ ಮಳ್ಳಯಜ್ಜನವರು ಹುನಗುಂದ ರಸ್ತೆ ಬದಿ ಇರುವ ಮಳಿಯಪ್ಪಜ್ಜನ ಕಟ್ಟೆಯಲ್ಲಿರುವ ಬನ್ನಿಮಹಾಂಕಾಳಿ ದೇವಿ, ಬಸವಣ್ಣ ದೇವರಿಗೆ ಪೂಜೆ ಜರುಗಿತು. ಬಸವಣ್ಣ ದೇವರ ಕಿವಿ ಸ್ಪರ್ಶಿಸಿ ಹೊಯ್ತ್ ಹಿಂಗಾರಿ ಮುಂಗಾರಿ ಟಕಟಮಸ್ನ ಎಂದು ದೇವನುಡಿ ಹೇಳಿದರು. ಕೇಳಿದ ಕೃಷಿಕ ಭಕ್ತರೆಲ್ಲರೂ ಸಂತಸ ಸಂಭ್ರಮ ಹಂಚಿಕೊಂಡರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುತ್ತಮುತ್ತಲ ಗ್ರಾಮಗಳು, ನಗರ ಪಟ್ಟಣಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಡೊಳ್ಳು, ಕೆಲೂರಿನ ರಾಜೋತ್ಸವ ಪ್ರಶಸ್ತಿ ಪುರಸೃತ ಕಲಾವಿದ ಸಂಗಪ್ಪ ಹೂಗಾರ ಸಂಬಾಳ, ಖಣಿ ನಾದ, ಶಹನಾಯಿ, ಕಲೆಯೊಂದಿಗೆ ಹುಲ್ಲೇಶ್ವರ ವೀರಭದ್ರಸ್ವಾಮಿ ಮಹಾಮೂರ್ತಿ ಹೊತ್ತ ಪಲ್ಲಕ್ಕಿಯೊಂದಿಗೆ ಘಂಟೆ ಜಾಗಟೆ ಕೊಂತ ಗಂಡಾರತಿ ಕಳಸ ಕನ್ನಡಿಯೊಂದಿಗೆ ಬಾಬುದಾರರಾದ ಪೂಜಾರರು, ಕಂಚೇರರು, ಮಂತ್ರಿಯವರು, ಕುಲಕರ್ಣಿಯವರು, ವೀರಗಾರರು, ಕುದರಿಕಾರರು, ಹೀಗೆ ವಿವಿಧ ವಾಧ್ಯ-ವೈಭವದೊಂದಿಗೆ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ಮಳಿಯಪ್ಪಜ್ಜನ ಕಟ್ಟೆತಲುಪಿ ಅಲ್ಲಿ ನುಡಿ ಹೇಳಿ ಮರಳಿ ದೇವಸ್ಥಾನ ತಲುಪಿದರು.
ರಾತ್ರಿ ಮಳಿಯಪ್ಪಜ್ಜನವರ ನೇತೃತ್ವದಲ್ಲಿ ಲಿಂಗಮುದ್ರೆ ಕಲ್ಲಿಗೆ ಹುಲ್ಲಪ್ಪ ವಗ್ಗಯ್ಯಜ್ಜನವರು ಒಂದು ಏಟಿಗೆ ’ಸರಪಳಿ ಹರಿಯುವ’ ಪವಾಡ ಜರುಗಿತು. ಜಾತ್ರಾ ಮಹೋತ್ಸವ ವರ್ಷದಲ್ಲಿ ಎರಡು ಬಾರಿ ನಡೆಯುವುದು ಇಲ್ಲಿಯ ವಿಶೇಷ. ಹುಲ್ಲಪ್ಪ ದೇವರ ಸರಪಳಿ ಈ ಬಾರಿ ಒಂದು ಏಟಿಗೆ ಹರಿದರೆ ತಂದಿ ಚಂದಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತು ಏಟಿಗೆ ಸರಪಳಿ ಹರಿದು ಪವಾಡ ಸದೃಶ್ಯ ಬೆಸಸಂಖ್ಯೆಯಲ್ಲಿ ಹರಿದಿದ್ದರಿಂದ ಗ್ರಾಮ, ನಾಡಿಗೆ ಸಂಪೂರ್ಣ ಮಳೆ ಬೆಳೆ ಬೆಳೆದು ಒಳ್ಳೆಯದು ಆಗುವುದು ಎಂದು ಹಿರಿಯರ ಸಂಭ್ರಮದ ಬಲವಾದ ನಂಬಿಕೆ. ಈ ಜಾತ್ರಾ ಮಹೋತ್ಸವದ ದೇವರ ನುಡಿ ಸುಳ್ಳಾದರೆ ಈ ಜಗತ್ತಿಗೆ ಬಂದನ ಬಂಧಂತೆ ಎಂದು ನೆರೆದ ಜನ ಸಮೂಹ ಒಬ್ಬರಿಗೊಬ್ಬರು ಮಾತನಾಡುತ್ತಿದ್ದರು.
ಮಳೆಯಪ್ಪಜ್ಜನವರು ಭಕ್ತರಿಗೆ ಕೊಡುವ ಬನ್ನಿಬಂಗಾರ ಸ್ವೀಕರಿಸುವುದರೊಂದಿಗೆ ಭಕ್ತರಿಗೆ ಆಶೀರ್ವದಿಸಿದರು. ನವರಾತ್ರಿ 9 ದಿನಗಳ ವರೆಗೆ ಘಟಸ್ಥಾಪನೆ ನೆರವೇರಿಸಿ ವಿವಿಧ ನಿತ್ಯ ಪೂಜಾ ಕೈಂಕರ‍್ಯ ಹಮ್ಮಿಕೊಂಡಿದ್ದರು. ಏಳು ಕೋಟಿ ಏಳು ಕೋಟಿ ಏಳು ಕೋಟಿಗೋ ಎಂದು ಶುಭ ಸಂಕೇತ ಶಂಖ ನೀನಾದದೊಂದಿಗೆ ಸ್ವಯಂಘೋಷ ಸಾರಿದರು. ಈ ಎಲ್ಲ ಕಾರ್ಯಕ್ರಮಗಳು ಸರಕಾರದ ನೇತೃತ್ವದಲ್ಲಿ ಜರುಗಿದ ಜಾತ್ರೆ ಅಮೀನಗಡ ಹೋಬಳಿ ವ್ಯಾಪ್ತಿಯ ನಾಡ ಕಾರ್ಯಾಲಯ ಉಪತಹಶೀಲ್ದಾರ ಎಸ್.ಎ ಕುಂದರಗಿ. ಗ್ರಾಮ ಲೆಕ್ಕಾಧಿಕಾರಿ ಸಿ.ಎಸ್ ಕೊಣ್ಣೂರ ಪೋಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿ ಉಪಸ್ಥಿತರಿದ್ದರು.
ಬಾದಾಮಿ ತಾಲೂಕ ಹೆಬ್ಬಳ್ಳಿ ಗ್ರಾಮದ ನಿಂಗನಗೌಡ ಭೀಮನಗೌಡ ಹಿರೇಗೌಡರ ಬಂಧುಗಳಿಂದ ಮಹಾದಾಸೋಹ ಭಕ್ತಿ ಸೇವೆಯೊಂದಿಗೆ ಸಂಪನ್ನಗೊಳಿಸಿದರು.