ಮಲ್ಲಿಕಾರ್ಜುನ ಹೊಸಮನಿ

ಹುನಗುಂದ(ಅ.12): ಅವರೆಲ್ಲಾ ಅಂದು ತುಂಟಾಟ ಆಡ್ತಿದ್ದ ಶಾಲಾ ಮಕ್ಕಳು, ಅದರಲ್ಲಿ ಕೆಲವರು ಓದಿನಲ್ಲಿ ಜಾಣರಿದ್ರೆ, ಇನ್ನೂ ಕೆಲವರು ಕಲಿಕೆಯಲ್ಲಿ ಹಿಂದುಳಿದ ಮೇಷ್ಟ್ರು ಕೈಯಲ್ಲಿ ಬೈಗುಳ ತಿಂದವರು. ಆದರೆ ಇವತ್ತು ಅವರೆಲ್ಲಾ ಒಂದಿಲ್ಲೊಂದು ಹುದ್ದೆಯಲ್ಲಿದ್ದು, ಜೀವನದ ಜವಾಬ್ದಾರಿ ಹೊತ್ತವರಾಗಿದ್ದಾರೆ.

ಆ ಸ್ನೇಹಿತರಲ್ಲಿ ಕೆಲವರು ದೇಶ ರಕ್ಷಣೆ ಮಾಡುವ ಸೈನಿಕರಾಗಿದ್ದರೆ, ಇನ್ನೂ ಕೆಲವರು ದೇಶದ ಮೂಲೆ ಮೂಲೆಯಲ್ಲಿ ವಿವಿಧ ಕ್ವೇತ್ರಗಳಲ್ಲಿ ದುಡಿಯುತ್ತಿದ್ದಾರೆ.

"

ಇವರೆಲ್ಲಾ 16 ವರ್ಷಗಳ ಬಳಿಕ ಒಂದೆಡೆ ಸೇರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮರು ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ  ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸ್ನೇಹಿತರೆಲ್ಲಾ ಇಂದು ಒಂದೆಡೆ ಸೇರುವ ಮೂಲಕ ಹಳೆಯ ನೆನೆಪುಗಳನ್ನ ಮೆಲುಕು ಹಾಕಿದರು. 

"

ಒಟ್ಟಿನಲ್ಲಿ 16 ವರ್ಷಗಳ ಬಳಿಕ ತಮ್ಮ ಶಾಲಾ ದಿನಗಳ ಸವಿಸವಿ ನೆನಪನ್ನು ಸವಿದ ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹಸಮ್ಮಿಲನದ ಹೆಸರಿನಲ್ಲಿ ಸಮಾವೇಶ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡು ತಮ್ಗೆ ಕಲಿಸಿ ಗುರುಗಳಿಗೆ ಗುರುವಂದನೆ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ.