ಬಾಗಲಕೋಟೆ ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ರದ್ದು!

ಜಿಲ್ಲಾಡಳಿತ ಹೊರಡಿಸಿರುವ ಪ್ರಕಟಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ| ಜಿಲ್ಲಾಡಳಿತದ ಕಠಿಣ ಕ್ರಮದ ಎಚ್ಚರಿಕೆಗೆ ಸ್ಪಂದಿಸಿರುವ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರು| ಸೆಪ್ಟಂಬರ್‌ನಲ್ಲಿ 851 ಹಾಗೂ ಅಕ್ಟೋಬರ್‌ 18ರ ವರೆಗೆ 1138 ಬಿಪಿಎಲ್‌ ಪಡಿತರ ಚೀಟಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ| 

BPL Card Cancel in Bagalkot District

ಬಾಗಲಕೋಟೆ(ಅ.19): ಆರ್ಥಿಕವಾಗಿ ಸದೃಢವಾಗಿರುವವರೂ ಸಹ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಪಡಿತರ ಚೀಟಿ ಹಿಂದಿರುಗಿಸುವಂತೆ  ಜಿಲ್ಲಾಡಳಿತ ಹೊರಡಿಸಿರುವ ಪ್ರಕಟಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲಾಡಳಿತದ ಕಠಿಣ ಕ್ರಮದ ಎಚ್ಚರಿಕೆಗೆ ಸ್ಪಂದಿಸಿರುವ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರು ಸೆಪ್ಟಂಬರ್‌ನಲ್ಲಿ 851 ಹಾಗೂ ಅಕ್ಟೋಬರ್‌ 18ರ ವರೆಗೆ 1138 ಬಿಪಿಎಲ್‌ ಪಡಿತರ ಚೀಟಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ಬಾಗಲಕೋಟೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಅವರಿ ತಿಳಿಸಿದ್ದಾರೆ.

ಇದಲ್ಲದೆ ಜಿಲ್ಲಾಡಳಿತ ಮತ್ತಷ್ಟುಬೇರೆ ಬೇರೆ ಪ್ರಕರಣಗಳಲ್ಲಿಯೂ ಸಹ ಪಡಿತರ ಚೀಟಿ ರದ್ದು ಪಡಿಸುವ ಕಾರ್ಯ ಮುಂದುವರಿಸಿದ್ದು ಒಟ್ಟು ಈವರೆಗೆ 1989 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios