ಮೋದಿ ಸಂವಾದದಲ್ಲಿ ಮುರುನಾಳ ಗ್ರಾಪಂ ಸಿಬ್ಬಂದಿ, ಸದಸ್ಯರು ಭಾಗಿ
‘ದೇಶದ ಗ್ರಾಮ ಪಂಚಾಯ್ತಿಗಳ ಮೂಲಕ ಮಹಿಳಾ ಸಬಲೀಕರಣ’ದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯತಿ ಸದಸ್ಯರ ಜೊತೆ ವರ್ಚ್ಯೂಯಲ್ ಮೀಟಿಂಗ್ ನಡೆಸಿದ ಬಾಗಲಕೋಟೆ ರೈತರು ಪಾಲ್ಗೊಂಡರು.
ಬಾಗಲಕೋಟೆ (ಆ.13): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘ದೇಶದ ಗ್ರಾಮ ಪಂಚಾಯ್ತಿಗಳ ಮೂಲಕ ಮಹಿಳಾ ಸಬಲೀಕರಣ’ದ ಕುರಿತು ನಡೆಸಿದ ವರ್ಚುವಲ್ ಸಂವಾದದಲ್ಲಿ ಬಾಗಲಕೋಟೆ ತಾಲೂಕಿನ ಮುರುನಾಳ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಇವರು ಮಹಿಳಾ ಸಬಲೀಕರಣ, ಸಂಜೀವಿನಿ ಯೋಜನೆ ಕುರಿತು ಮಾಹಿತಿಯನ್ನು ಪ್ರಧಾನಿಗಳ ಜೊತೆ ಹಂಚಿಕೊಂಡರು. ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದ ಸಂವಾದದಲ್ಲಿ ಬಾಗಲಕೋಟೆ ಜಿಲ್ಲಾ ಯೋಜನಾ ನಿರ್ದೇಶಕರು ಸಹ ಉಪಸ್ಥಿತರಿದ್ದರು.
ಎನ್‌ಇಪಿಗೆ 1 ವರ್ಷ: ಶಿಕ್ಷಣ ತಜ್ಞರೊಂದಿಗೆ ಇಂದು ಮೋದಿ ಸಂವಾದ
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಜು.29ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಕ್ಷೇತ್ರದ ನೀತಿ ನಿರೂಪಕರೊಂದಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು.
ವಿಶ್ವಸಂಸ್ಥೆ ಸಭೆಯಲ್ಲಿ ಇತಿಹಾಸ ಸೃಷ್ಟಿಸಿದ ಮೋದಿ
ಇದೇ ವೇಳೆ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆ ನೀಡುವ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕೋರ್ಸ್ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು.
ಗ್ರೇಡ್ 1 ವಿದ್ಯಾರ್ಥಿಗಳಿಗಾಗಿ 3 ತಿಂಗಳ ನಾಟಕ ಆಧಾರಿತ ಶಾಲಾ ತಯಾರಿ ‘ವಿದ್ಯಾ ಪ್ರವೇಶ’, ಎರಡನೇ ಹಂತದಲ್ಲಿ ಭಾರತೀಯ ಸಂಕೇತ ಭಾಷೆ ಮತ್ತು ಎನ್‌ಸಿಇಆರ್‌ಟಿ ಅಭಿವೃದ್ಧಿಪಡಿಸಿರುವ ಶಿಕ್ಷಕರ ತರಬೇತಿ ಸಮಗ್ರ ಕಾರ‍್ಯಕ್ರಮ ನಿಷಿತಾ 2.0 ಕೋರ್ಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.