ಬಾಗಲಕೋಟೆ(ನ.14): ಲಂಚ ಪಡೆಯುವ ವೇಳೆ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ನಡೆದಿದೆ. ಜಿಲ್ಲಾಸ್ಪತ್ರೆ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮುಂಡೋಡಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. 

ಸಂಜಯ್ ಜಿಂಗಾಡಿ ಎಂಬುವರಿಂದ ವೈದ್ಯಕೀಯ ವೆಚ್ಚಕ್ಕಾಗಿ ಅರ್ಹತಾ ಪ್ರಮಾಣ ಪತ್ರಕ್ಕೆ ಸುರೇಶ್ ಮುಂಡೋಡಗಿ  10 ಸಾವಿರ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಂಜಯ್ ಜಿಂಗಾಡಿ ಅವರು ಅರ್ಹತಾ ಪ್ರಮಾಣ ಪತ್ರ ಪಡದುಕೊಳ್ಳಲು ಸುರೇಶ್ ಮುಂಡೋಡಗಿ ಅವರಿಗೆ 10 ಸಾವಿರ ರು. ನೀಡುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚ ಸಮೇತ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮುಂಡೋಡಗಿ ಅವರನ್ನ ಹಿಡಿದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.