ಜಿ.ಪಂ ಅಧ್ಯಕ್ಷೆ ಕಾರಿನ ಮೇಲೆ ಜೋಡಿ ನವಿಲುಗಳ ಸಂಚಾರ : ಶುಭದ ಸೂಚನೆ
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾರಿನ ಮೇಲೆ ಎರಡು ನವಿಲುಗಳು ಕುಳಿತಿದ್ದು, ಇದೊಂದು ಶುಭ ಸೂಚನೆ ಎನ್ನುವ ಚರ್ಚೆ ಆರಂಭವಾಗಿದೆ.
ಬಾಗಲಕೋಟೆ (ಅ.08): ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸರ್ಕಾರಿ ಕಾರಿನ ಮೇಲೆ ಜೋಡಿ ನವಿಲುಗಳು ಓಡಾಡಿವೆ.
ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ದಸರಾ ವೇಳೆ ಜೋಡಿ ನವಿಲು ಸರ್ಕಾರಿ ವಾಹನದ ಮೇಲೆ ಸಂಚರಿಸಿದ ಹಿನ್ನೆಲೆ ಇದು ಶುಭ ಸಂಕೇತ ಎನ್ನುವ ಚರ್ಚೆ ಆರಂಭವಾಗಿದೆ.
ಗಾಗಲಕೋಟೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಗ್ರಾಮಕ್ಕೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ತೋಟದ ಬಳಿ ವಾಹನ ನಿಲ್ಲಿಸಿದ್ದಾಗ ನವಿಲುಗಳು ವಾಹನದ ಮೇಲೆ ಹತ್ತಿ ನವಿಲುಗಳು ಓಡಾಗಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕುಳಿತಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಅಪಶಕುನವೆಂದು ಚರ್ಚೆಯಾಗಿತ್ತು. ಇದೀಗ ಬಾಗಲಕೋಟೆ ಜಿ.ಪಂ ಅಧ್ಯಕ್ಷೆ ಸರ್ಕಾರಿ ವಾಹನದ ಮೇಲೆ ಜೋಡು ನವಿಲುಗಳ ಓಡಾಟ ಶುಭ ಸಂಕೇತ ಅನ್ನೋ ಚರ್ಚೆ ನಡೆಯುತ್ತಿದೆ.