Asianet Suvarna News Asianet Suvarna News

ಬೆಸ್ಕಾಂಗೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ನಿಂದ 1400 ಕೋಟಿ ಸಾಲ

ಬೆಂಗಳೂರಲ್ಲಿ 7200 ಕಿ.ಮೀ. ಉದ್ದ ನೆಲದಡಿ ವಿದ್ಯುತ್‌ ತಂತಿ ಹಾಕಲು ಬಳಕೆ| 2800 ಕಿ.ಮೀ. ಉದ್ದ ಫೈಬರ್‌ ಆಪ್ಟಿಕ್‌ ಸಂವಹನ ಕೇಬಲ್‌ ಕೂಡ ಅಳವಡಿಕೆ| ಎಡಿಬಿ ಇತಿಹಾಸದಲ್ಲೇ ಮೊದಲ ಬಾರಿ ‘ಸರ್ಕಾರಿ-ಖಾಸಗಿ ಮಿಶ್ರ ಸಾಲ’| 

1400 Crore Loan from Asian Development Bank to BESCOM grg
Author
Bengaluru, First Published Dec 5, 2020, 8:20 AM IST

ಬೆಂಗಳೂರು(ಡಿ.05): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)ಗೆ ಸುಮಾರು 1400 ಕೋಟಿ ರು. (190 ದಶಲಕ್ಷ ಡಾಲರ್‌) ಸಾಲ ನೀಡಲು ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಒಪ್ಪಿಗೆ ನೀಡಿದೆ. ಬೆಂಗಳೂರು ನಗರದಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಿಸಲು, ಮುಖ್ಯವಾಗಿ ಕಂಬಗಳ ಮೇಲೆ ಎಳೆದಿರುವ ವಿದ್ಯುತ್‌ ತಂತಿಗಳನ್ನು ನೆಲದಡಿ ಎಳೆಯಲು ಈ ಸಾಲ ಬಳಕೆಯಾಗಲಿದೆ.

ಬೆಂಗಳೂರು ಸ್ಮಾರ್ಟ್‌ ಎನರ್ಜಿ ಎಫಿಶಿಯಂಟ್‌ ಪವರ್‌ ಡಿಸ್ಟ್ರಿಬ್ಯೂಷನ್‌ ಯೋಜನೆ ಜಾರಿಗೆ ಈ ಸಾಲಕ್ಕಾಗಿ ಬೆಸ್ಕಾಂ ಅರ್ಜಿ ಹಾಕಿತ್ತು. ಅದರಂತೆ ಸುಮಾರು 730 ಕೋಟಿ ರು.ಗಳ ಸಾರ್ವಭೌಮ ಸಾಲ ಮತ್ತು ಸುಮಾರು 670 ಕೋಟಿ ರು. ಮೊತ್ತದ ಸಾರ್ವಭೌಮ ಗ್ಯಾರಂಟಿ ರಹಿತ ಸಾಲವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿರುವುದಾಗಿ ಎಡಿಬಿ ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಎಡಿಬಿ ತನ್ನ ಇತಿಹಾಸದಲ್ಲೇ ಮೊದಲ ಬಾರಿ ಹೀಗೆ ಸಾರ್ವಭೌಮ ಸಾಲ ಮತ್ತು ಸಾರ್ವಭೌಮ ಗ್ಯಾರಂಟಿ ರಹಿತ ಸಾಲವನ್ನು ನೀಡುತ್ತಿದೆ. ಈ ಮಾದರಿಯ ಸಾಲವನ್ನು ಅದು ಪ್ರಾಯೋಗಿಕವಾಗಿ ಮೊದಲ ಬಾರಿ ಬೆಸ್ಕಾಂಗೆ ನೀಡಿದೆ. ಸಾರ್ವಭೌಮ ಸಾಲಕ್ಕೆ ಸರ್ಕಾರದ ಗ್ಯಾರಂಟಿಯಿರುತ್ತದೆ. ಸಾರ್ವಭೌಮ ಗ್ಯಾರಂಟಿ ರಹಿತ ಸಾಲಕ್ಕೆ ಸರ್ಕಾರದ ಗ್ಯಾರಂಟಿಯಿರುವುದಿಲ್ಲ ಮತ್ತು ಈ ಸಾಲ ನೇರವಾಗಿ ಬೆಸ್ಕಾಂ ಪರವಾಗಿ ನಿರ್ದಿಷ್ಟಯೋಜನೆಯನ್ನು ಕೈಗೊಳ್ಳುವ ಸಂಸ್ಥೆಗೆ ಹೋಗುತ್ತದೆ.

ಅಪ್‌ಡೇಟ್‌ ಆಗದ ಬೆಸ್ಕಾಂ ಸಾಫ್ಟ್‌ವೇರ್‌: ಜನರ ಪರದಾಟ

7800 ಕಿ.ಮೀ. ನೆಲದಡಿ ಕೇಬಲ್‌:

ಎಡಿಬಿಯಿಂದ ದೊರೆತ ಸಾಲವನ್ನು ಬೆಸ್ಕಾಂ ಮುಖ್ಯವಾಗಿ ಬೆಂಗಳೂರು ನಗರದಲ್ಲಿ 7800 ಕಿ.ಮೀ. ಉದ್ದ ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಸಲು ಬಳಕೆ ಮಾಡಲಿದೆ. ಜೊತೆಗೆ 2800 ಕಿ.ಮೀ. ಉದ್ದದಷ್ಟುಫೈಬರ್‌ ಆಪ್ಟಿಕ್‌ ಸಂವಹನ ಕೇಬಲ್‌ಗಳನ್ನೂ ಅಳವಡಿಸಲಿದೆ. ನೆಲದಡಿಯ ವಿದ್ಯುತ್‌ ಕೇಬಲ್‌ನಿಂದ ಜನರಿಗೆ ವಿದ್ಯುತ್ತಿನ ಅಪಾಯ ಕಡಿಮೆಯಾಗುವುದರ ಜೊತೆಗೆ ಬೆಸ್ಕಾಂಗೆ ವಿದ್ಯುತ್‌ ನಷ್ಟವೂ ಕಡಿಮೆಯಾಗಲಿದೆ ಮತ್ತು ನಗರ ಸೌಂದರ್ಯೀಕರಣಕ್ಕೆ ನೆರವಾಗಲಿದೆ. ಹಾಗೂ ಇದರಿಂದ ಬೆಸ್ಕಾಂನ ಕಾರ್ಯನಿರ್ವಣೆ ವೆಚ್ಚ ಕೂಡ ಕಡಿಮೆಯಾಗಲಿದೆ. ಇನ್ನು ಫೈಬರ್‌ ಆಪ್ಟಿಕ್‌ ಕೇಬಲ್‌ನಿಂದ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ, ವಿದ್ಯುತ್‌ ವಿತರಣೆ ಆಟೋಮೇಶನ್‌ ವ್ಯವಸ್ಥೆ, ವಿತರಣೆ ಗ್ರಿಡ್‌ ಹಾಗೂ ಇನ್ನಿತರ ಸಂವಹನ ಜಾಲಗಳು ಅಭಿವೃದ್ಧಿಗೊಳ್ಳಲಿವೆ. ಇದೇ ಯೋಜನೆಯಡಿ 1700 ಆಟೋಮೇಟೆಡ್‌ ರಿಂಗ್‌ ಮೇನ್‌ ಯುನಿಟ್‌ಗಳನ್ನು ಕೂಡ ಬೆಸ್ಕಾಂ ಅಳವಡಿಸಲಿದೆ.
 

Follow Us:
Download App:
  • android
  • ios