ಯಶಸ್ವಿ ಹಾರಾಟ ನಡೆಸಿದ ವಿಶ್ವದ ಅತೀ ದೊಡ್ಡ ವಿಮಾನ| ಆಗಸದಲ್ಲಿ ಎರಡುವರೆ ಗಂಟೆ ಹಾರಾಟ ನಡೆಸಿದ ಸ್ಟ್ರಾಟೋಲಾಂಚ್| ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪೌಲ್ ಆಲೆನ್ ಕನಸಿನ ಕೂಸು ಸ್ಟ್ರಾಟೋಲಾಂಚ್| ಪೌಲ್ ಆಲೆನ್ ಮರಣದ ಬಳಿಕ ಹಾರಾಟ ನಡೆಸಿದ ಸ್ಟ್ರಾಟೋಲಾಂಚ್| ಏಕ ಕಾಲಕ್ಕೆ ಮೂರು ರಾಕೆಟ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ| ಫುಟ್ಬಾಲ್ ಮೈದಾನಕ್ಕಿಂತ ದೊಡ್ಡ ರೆಕ್ಕೆ ಹೊಂದಿರುವ ಸ್ಟ್ರಾಟೋಲಾಂಚ್|

ಕ್ಯಾಲಿಫೋರ್ನಿಯಾ(ಏ.14): ವಿಶ್ವದ ಅತೀ ದೊಡ್ಡ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟ್ರಾಟೋಲಾಂಚ್, ಇದೇ ಮೊದಲ ಬಾರಿಗೆ ಯಶಸ್ವಿ ಹಾರಾಟ ನಡೆಸಿದೆ.

ಕ್ಯಾಲಿಫೋರ್ನಿಯಾ ಮರಳುಗಾಡಿನಲ್ಲಿರುವ ಮೊಜಾವೆ ಏರ್‌ಪೋರ್ಟ್‌ನಿಂದ ಹಾರಾಟ ಆರಂಭಿಸಿದ ಸ್ಟ್ರಾಟೋಲಾಂಚ್, ಸುಮಾರು ಎರಡುವರೆ ಗಂಟೆಗಳ ಕಾಲ ಯಶಸ್ವಿ ಹಾರಾಟ ನಡೆಸಿತು.

ಅವಳಿ ದೇಹ ಹೊಂದಿರುವ ಸ್ಟ್ರಾಟೋಲಾಂಚ್ ವಿಮಾನದಲ್ಲಿ ಒಟ್ಟು 28 ಚಕ್ರಗಳಿದ್ದು, ಆರು 747 ಜೆಟ್ ಇಂಜಿನ್ ನ್ನು ಒಡಲಲ್ಲಿಟ್ಟುಕೊಂಡಿದೆ. ಇದರ ರೆಕ್ಕೆ ಫುಟ್ಬಾಲ್ ಮೈದಾನಕ್ಕಿಂತ ದೊಡ್ಡದಿರುವುದು ವಿಶೇಷ.

Scroll to load tweet…

ಒಟ್ಟು ಮೂರು ರಾಕೆಟ್‌ಗಳನ್ನು ಏಕಕಾಲಕ್ಕೆ ಹೊತ್ತೊಯ್ಯಬಲ್ಲ ಸ್ಟ್ರಾಟೋಲಾಂಚ್, ಆಗಸದಲ್ಲೇ ಮೂರೂ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಬಲ್ಲ ಸಾಮರ್ಥ್ಯ ಹೊಂದಿದೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪೌಲ್ ಆಲೆನ್ ಅವರ ಕನಸಿನ ಕೂಸಾದ ಸ್ಟ್ರಾಟೋಲಾಂಚ್ ವಿಮಾನ ಅವರ ಮರಣದ ನಂತರ ಹಾರಾಟ ನಡೆಸಿದ್ದು ಮಾತ್ರ ವಿಷಾದನೀಯ.