ನವದೆಹಲಿ(ಡಿ.31):  ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ 125 ಸಿಸಿ ಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಬೈಕ್ ಸುರಕ್ಷತೆಯ ಭಾಗವಾಗಿ ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಅಳವಡಿಸಿಕೊಳ್ಳಬೇಕು. ಇದೀಗ ಎಲ್ಲಾ ಬೈಕ್ ಕಂಪೆನಿಗಳು ಡೆಡ್ ಲೈನ್‌ಗೂ ಮೊದಲು ABS ಅಳವಡಿಸುತ್ತಿದೆ.

ಇದನ್ನೂ ಓದಿ: ದೆಹಲಿ ಪರಿಸ್ಥಿತಿ ಗಂಭೀರ-ಸಮ ಬೆಸ ಸಂಖ್ಯೆ ವಾಹನ ಸ್ಕೀಮ್ ಜಾರಿ ಸಾಧ್ಯತೆ!

ವೆಸ್ಪಾ ಹಾಗೂ  ಎಪ್ರಿಲಿಯಾ ಸ್ಕೂಟರ್ ಇದೀಗ ABS, CBS ತಂತ್ರಜ್ಞಾನ ಅಳವಡಿಸಿಕೊಂಡಿದೆ. ಈ ಮೂಲಕ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ. ನೂತನ ಸ್ಕೂಟರ್ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರಿಂದ ಬೆಲೆಯಲ್ಲೂ ಏರಿಕೆಯಾಗಿದೆ. 

ಇದನ್ನೂ ಓದಿ: ಕಾರಿಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಜಾಸ್ತಿ-ಬರೋಬ್ಬರಿ 132 ಕೋಟಿ!

ವೆಸ್ಪಾ VXL 150 ABS ಬೆಲೆ ಈಗ 98,000 ರೂಪಾಯಿ. ವೆಸ್ಪಾ SXL 150 ABS ಬೆಲೆ Rs 1.03 ಲಕ್ಷ, ವೆಸ್ಪಾ SXL 150 Red ಬೆಲೆ Rs 1.04 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಎಪ್ರಿಲಿಯಾ SR 150 ABS ಬೆಲೆ 81,000 ರೂಪಾಯಿ, ಎಪ್ರಿಲಿಯಾ SR 150 Carbon ABS ಬೆಲೆ Rs 83,000 ರೂಪಾಯಿ, ಎಪ್ರಿಲಿಯಾ SR 150 Race ABS ಬೆಲೆ Rs 90,000 ರೂಪಾಯಿ ಏರಿಕೆಯಾಗಿದೆ.