Tesla Car Blown Up: ರಿಪೇರಿ ವೆಚ್ಚ ದುಬಾರಿ ಎಂದು 30ಕೆಜಿ ಡೈನಮೈಟ್ ಬಳಸಿ ಕಾರನ್ನೇ ಸ್ಫೋಟಿಸಿದ ವ್ಯಕ್ತಿ!
ಟೆಸ್ಲಾ ಸೇವೆಯಿಂದ ಅತೃಪ್ತಿ ಹೊಂದಿದ್ದ ಫಿನ್‌ಲ್ಯಾಂಡ್‌ನ ವ್ಯಕ್ತಿಯೊಬ್ಬರು 66 ಪೌಂಡ್ (30 ಕೆಜಿ) ಡೈನಮೈಟ್ ಬಳಸಿ ತಮ್ಮ ಕಾರನ್ನು ಸ್ಫೋಟಿಸಿದ್ದಾರೆ.
Auto Desk: ಸಾಮಾನ್ಯವಾಗಿ, ನಾವು ಕಂಪನಿಯ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ಅತೃಪ್ತರಾದಾಗ, ನಾವು ಅದರ ಬಗ್ಗೆ ಗ್ರಾಹಕರ ವೇದಿಕೆಯಲ್ಲಿ (Customer Care) ದೂರು ನೀಡುತ್ತೇವೆ ಅಥವಾ ಮರುಪಾವತಿಗೆ ಒತ್ತಾಯಿಸುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ, ಮಾರಾಟಗಾರರ ಸೇವೆಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ನಾವು ಪ್ರತಿಜ್ಞೆ ಮಾಡುತ್ತೇವೆ. ಆದರೆ ಟೆಸ್ಲಾ ಅವರ ಸೇವೆಯಿಂದ (Tesla Service) ಅತೃಪ್ತಿ ಹೊಂದಿದ್ದ ಫಿನ್‌ಲ್ಯಾಂಡ್‌ನ (Finland) ವ್ಯಕ್ತಿಯೊಬ್ಬರು ತಮ್ಮ ನಿರಾಶೆಯನ್ನು ಬೇರೆಯದ್ದೇ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಟುಮಾಸ್ ಕ್ಯಾಟೈನೆನ್ (Tuomas Katainen) ತಮ್ಮ 2013 ಟೆಸ್ಲಾ ಮಾಡೆಲ್ ಎಸ್ (Tesla Model ಅನ್ನು 66 ಪೌಂಡ್ (30 ಕೆಜಿ) ಡೈನಮೈಟ್‌ನೊಂದಿಗೆ ಸಜ್ಜುಗೊಳಿಸಿ ಮತ್ತು ಡ್ರೈವರ್ ಸೀಟಿನಲ್ಲಿ ಬ್ಲೋ-ಅಪ್ ಎಲೋನ್ ಮಸ್ಕ್ ಗೊಂಬೆಯನ್ನು ಇರಿಸಿ ಕಾರನ್ನು ಸ್ಫೋಟಿಸಿದ್ದಾರೆ.
ಟೆಸ್ಲಾ ಕಾರನ್ನು ಸ್ಫೋಟಿಸಿದ ವಿಶ್ವದ ಮೊದಲ ವ್ಯಕ್ತಿ!
ಕೆಲವು ದಿನಗಳ ಹಿಂದೆ ಕ್ಯಾಟೈನೆನ್ ತನ್ನ ಎಲೆಕ್ಟ್ರಿಕ್ ಕಾರು (Electric Car) ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ಆದರೆ ಮತ್ತು ಸಂಪೂರ್ಣ ಬ್ಯಾಟರಿ ಪ್ಯಾಕ್ (Battery Pack) ಅನ್ನು ಬದಲಿಸಲು ಕನಿಷ್ಠ € 20,000 (ಸುಮಾರು 17 ಲಕ್ಷ) ವೆಚ್ಚವಾಗುತ್ತದೆ ಎಂದು ಟೆಸ್ಲಾ ತಿಳಿಸಿತ್ತು. ಕಾರು ಸುಮಾರು ಎಂಟು ವರ್ಷ ಹಳೆಯದಾದ ಕಾರಣ, ಅದಕ್ಕೆ ಯಾವುದೇ ವಾರಂಟಿ ಲಭ್ಯವಿರಲಿಲ್ಲ ಮತ್ತು ಕಾರು ರಪೇರಿ ಮಾಡಲು ಇತರ ವೆಚ್ಚಗಳು ಸಹ ಭರಿಸಬೇಕಾಗಿತ್ತು. ಹಾಗಾಗಿ, ಕಾರನ್ನು ಸ್ಫೋಟಿಸಲು ನಿರ್ಧರಿಸಿದ್ದೇನೆ ಎಂದು ಕಟೈನೆನ್ ಹೇಳಿದ್ದಾರೆ. ಸ್ಫೋಟದಲ್ಲಿ ಕಾರು ಸಂಪೂರ್ಣವಾಗಿ ನಾಶವಾಗಿದ್ದು, ಸ್ಫೋಟದ ಫಲಿತಾಂಶದಿಂದ ಮಾಲೀಕರು ತೃಪ್ತರಾಗಿದ್ದಾರೆ. "ಬಹುಶಃ ನಾನು ಟೆಸ್ಲಾ ಕಾರನ್ನು ಸ್ಫೋಟಿಸಿದ ವಿಶ್ವದ ಮೊದಲ ವ್ಯಕ್ತಿ ಎಂದು" ಕ್ಯಾಟೈನೆನ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಪೊಮ್ಮಿಜಟ್ಕಾಟ್‌ನ (Pommijatkat) ಸಿಬ್ಬಂದಿ ಕೆಲವು ಸ್ವಯಂಸೇವಕರ ಸಹಾಯದಿಂದ ಇದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೀವನ್ನು ಡಿಸೆಂಬರ್ 17 ಭಾನುವಾರದಂದು ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಮುಂದಿನ ಸೀಟ್‌ನಲ್ಲಿ ಟೆಸ್ಲಾ ಸಿಇಓ ಎಲೋನ್ ಮಸ್ಕ್ (Elon Musk) ಗೊಂಬೆ ಇಟ್ಟಿರಿವುದು ನೀವು ನೋಡಬಹುದು. ಜತಗೆ ಕಾರಿನ ಸುತ್ತ 30ಕೆಜಿ ಡೈನಮೈಟ್ ಜೋಡಿಸಿರುವುದು ವಿಡಿಯೋದಲ್ಲಿ ತೋರಿಸಲಾಗಿದೆ. ವೀಡಿಯೊವನ್ನು ನೀವು ಇಲ್ಲಿ ವೀಕ್ಷಿಸಬಹದು.
"ನಾನು ಆ ಟೆಸ್ಲಾವನ್ನು ಖರೀದಿಸಿದಾಗ, ಮೊದಲ 1,500 ಕಿಮೀ ಚೆನ್ನಾಗಿ ಓಡಿತ್ತು. ಇದು ಅತ್ಯುತ್ತಮ ಕಾರು ಆಗಿತ್ತು. ನಂತರ ದೋಷಗಳು ಕಾಣ ತೊಡಗಿದವು. ಹಾಗಾಗಿ ನನ್ನ ಕಾರನ್ನು ಸರ್ವೀಸ್ ಸ್ಟೇಷನ್‌ಗೆ ಕೊಂಡೊಯ್ಯಲು ಟೌ ಟ್ರಕ್‌ಗೆ (Tow Truck) ಹೇಳಿದೆ. ಸುಮಾರು ಒಂದು ತಿಂಗಳ ಕಾಲ ಕಾರು ಡೀಲರ್‌ನ ವರ್ಕ್‌ಶಾಪ್‌ನಲ್ಲಿತ್ತು ಮತ್ತು ಅಂತಿಮವಾಗಿ ನನ್ನ ಕಾರಿಗೆ ಅವರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ಕರೆ ಬಂತು. ಇಡೀ ಬ್ಯಾಟರಿ ಸೆಲ್ ಅನ್ನು ಬದಲಾಯಿಸುವುದು ಒಂದೇ ಆಯ್ಕೆಯಾಗಿದೆ, ”ಎಂದು ಮಾಲೀಕರು ತಮ್ಮ ಬಿಳಿ ಟೆಸ್ಲಾವನ್ನು ಹಿನ್ನೆಲೆಯನ್ನು ಹೇಳಿದ್ದಾರೆ.
"ಇದು ನನಗೆ ಕನಿಷ್ಠ 20,000 ಯುರೋಗಳಷ್ಟು ವೆಚ್ಚವಾಗುತ್ತದೆ. ಆದ್ದರಿಂದ, ನಾನು ನನ್ನ ಕಾರನ್ನು ತೆಗೆದುಕೊಳ್ಳಲು ಬರುತ್ತಿದ್ದೇನೆ ಎಂದು ನಾನು ಅವರಿಗೆ ಹೇಳಿದೆ. ಮತ್ತು ಈಗ ನಾನು ಇಡೀ ಕಾರನ್ನು ಸ್ಫೋಟಿಸಲಿದ್ದೇನೆ ಏಕೆಂದರೆ ಸ್ಪಷ್ಟವಾಗಿ ಯಾವುದೇ ಗ್ಯಾರಂಟಿ (Guarantee) ಅಥವಾ ಯಾವುದೂ ಇರಲಿಲ್ಲ, ”ಎಂದು ಅವರು ಕ್ಯಾಟೈನೆನ್ ವಿವರಿಸಿದ್ದಾರೆ