Asianet Suvarna News Asianet Suvarna News

ಕಾರಿನೊಳಗೆ ಹತ್ತಿ ಮಕ್ಕಳ ಆಟ, ಡೋರ್ ಜ್ಯಾಮ್ ಆಗಿ ಮಕ್ಕಳಿಬ್ಬರ ದಾರುಣ ಸಾವು!

 ಕಾರು ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಅಪಾಯಕಾರಿ ಕೂಡ ಹೌದು. ಮಕ್ಕಳಿರುವಲ್ಲಿ ಕಾರು ಡ್ರೈವಿಂಗ್, ಕಾರು ಪಾರ್ಕಿಂಗ್ ಅತ್ಯಂತ ಎಚ್ಚರದಿಂದ ಮಾಡಬೇಕು. ಇದೀಗ ಅಮಾಯಕ ಮಕ್ಕಳಿಬ್ಬರು ಕಾರಿನೊಳಗೆ ಲಾಕ್‌ ಆಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

Two children die of suffocation after getting locked in damaged car tamil nadu
Author
Bengaluru, First Published Jul 25, 2020, 8:14 PM IST

ತಮಿಳುನಾಡು(ಜು.25): ಮಕ್ಕಳ ಕುರಿತು ವಿಶೇಷ ಗಮನ ಅಗತ್ಯ. ಅಂಬೆಗಾಲಿಡುತ್ತಾ ಆಡುವ ಮಕ್ಕಳಿಂದ ಹಿಡಿದು ಶಾಲೆಗೆ ತೆರಳು ಮಕ್ಕಳ ಕುರಿತು ಹೆಚ್ಚಿನ ಗಮನ ಹರಿಸಬೇಕು. ಸದ್ಯ ಶಾಲೆಗಳಿಗೆ ರಜೆ ಇರುವ ಕಾರಣ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಕಾರಿನೊಳಗೆ ಲಾಕ್‌ ಆಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಲ್ಲಾಕುರಿಚಿ ಜಿಲ್ಲಿಯೆಲ್ಲಿ ನಡೆದಿದೆ.

4 ವರ್ಷದ ಇ ರಾಜೇಶ್ವರಿ ಹಾಗೂ 7 ವರ್ಷದ ಎ ವನಿತಾ ಅನ್ನೋ ಇಬ್ಬರು ಹೆಣ್ಣುಮಕ್ಕಳು ಎಂದಿನಂತೆ ಆಟಕ್ಕೆ ತೆರಳಿದ್ದಾರೆ. ಇವರಿಬ್ಬರು ಆತ್ಮೀಯ ಗೆಳೆತಿಯರಾಗಿದ್ದ ಕಾರಣ ಜೊತೆಯಾಗಿ ಆಟವಾಡುತ್ತಿದ್ದರು. ಇವರ ಪೋಷಕರು ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಪೋಷಕರು ಕೆಲಸಕ್ಕೆ ತೆರಳಿದ ಬಳಿಕ ಮಕ್ಕಳು ಆಟ ಶುರುಮಾಡಿದ್ದಾರೆ.

ಮಕ್ಕಳ ಮನೆ ಸನಿಹದಲ್ಲಿ ಅಪಘಾತಕ್ಕೀಡಾದ ಕಾರನ್ನು ಪಾರ್ಕ್ ಮಾಡಿ ನಿಲ್ಲಿಸಲಾಗಿತ್ತು. 2 ವರ್ಷಗಳಿಂದ ಕಾರು ನಿಂತಿಲ್ಲೇ ನಿಂತಿತ್ತು. ಆಟವಾಡುತ್ತಿದ್ದ ಈ ಮಕ್ಕಳಿಬ್ಬರು ಹೇಗೋ ಕಾರಿನ ಒಳ ಹೊಕ್ಕಿದ್ದಾರೆ. ಕೆಲ ಹೊತ್ತಲ್ಲೇ ಕಾರಿನ ಡೋಲ್ ಲಾಕ್ ಆಗಿದೆ. ಅಪಘಾತ ಕಾರಾದ ಕಾರಣ ಡೋರ್ ಕೂಡ ಜ್ಯಾಮ್ ಆಗಿದೆ. ಹೀಗಾಗಿ ಮಕ್ಕಳು ಕಾರಿನ ಡೋರ್ ತೆರೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಕಾರಿನಿಂದ ಹೊರ ಬರಲಾರದೆ ಸತತ 2 ಗಂಟೆ ಒದ್ದಾಡಿದ ಇಬ್ಬರು ಮಕ್ಕಳು ಪ್ರಜ್ಞೆ ತಪ್ಪಿದ್ದಾರೆ. ಸತತ 1 ಗಂಟೆ ಮಕ್ಕಳು ಕಾರಿನಿಂದ ಹೊರಬರಲು ಯತ್ನಿಸಿದ್ದಾರೆ.

ಈದೇ ದಾರಿಯಲ್ಲಿ ಸಾಗುತ್ತಿದ್ದ  ವ್ಯಕ್ತಿ ಮಕ್ಕಳ ಪ್ರಜ್ಞಾಹೀನ ಸ್ಥಿತಿಯಲ್ಲಿರುವದನ್ನು ಗಮನಿಸಿ ತಕ್ಷಣ ನೆರವಿಗೆ ಧಾವಿಸಿದ್ದಾರೆ. ಕಾರಿನ ಡೋರ್ ತೆಗೆದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕಾರಿನಲ್ಲೇ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರಿನೊಳಗೆ ಮಕ್ಕಳ ಸಿಲುಕಿಕೊಂಡ ಹಲವು ಘಟನೆಗಳು ನಡೆದಿದೆ. ಹೀಗಾಗಿ ತೀವ್ರ ಎಚ್ಚರ ವಹಿಸುವುದು ಅಗತ್ಯ. 

Follow Us:
Download App:
  • android
  • ios