Asianet Suvarna News Asianet Suvarna News

ರ‍್ಯಾಶ್ ಡ್ರೈವಿಂಗ್, ನಟಿ ಶಬಾನಾ ಅಜ್ಮಿ ಕಾರು ಚಾಲಕನ ವಿರುದ್ಧ ಕೇಸ್!

ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಹಾಗೂ ಪತಿ ಬಾಲಿವುಡ್ ಸಾಹಿತ್ಯ ರಚನೆಗಾರ ಜಾವೇದ್ ಅಕ್ತರ್ ಕಾರು ಇತ್ತೀಚೆಗೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಶಬನಾ ಅಜ್ಮಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪೊಲೀಸ್ ತನಿಖೆ ಆರಂಭಗೊಂಡಿದ್ದು, ನಿಯಮ ಉಲ್ಲಂಘಿಸಿದ್ದು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ.

Truck driver files FIR against Shabani Azmi car driver for rash driving in mumbai pune high way
Author
Bengaluru, First Published Jan 20, 2020, 6:39 PM IST
  • Facebook
  • Twitter
  • Whatsapp

ರಾಯ್‌ಘಡ್(ಜ.20): ಕಾರು ಅಪಘಾತದಲ್ಲಿ ಗಾಯಗೊಂಡ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಕಾರು ಅಪಘಾತಕ್ಕೆ ಕಾರಣವೇನು ಅನ್ನೋದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಬೆನ್ನಲ್ಲೇ ಟ್ರಕ್ ಚಾಲಕ ದೂರು ನೀಡಿದ್ದು, ಅಜ್ಮಿ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ರಾಯ್‌ಘಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೈವೇಯಲ್ಲಿ ಶಬನಾ ಅಜ್ಮಿ ಕಾರು ಅಪಘಾತವಾಗಿತ್ತು. ಟ್ರಕ್ ಹಿಂಬದಿಗೆ ಗುದ್ದಿದ ಪರಿಣಾಮ ಶಬಾನ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಳಿಕ ಟ್ರಕ್ ಚಾಲಕ ರಾಜೇಶ್ ಪಾಂಡುರಂಗ ಶಿಂದೆ ರಾಯ್‌ಘಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ ಎಂದು ಟ್ರಕ್ ಚಾಲಕ ಆರೋಪಿಸಿದ್ದಾನೆ.

ರಾಜೇಶ್ ದೂರು ಆಧರಿಸಿ, ಶಬನಾ ಕಾರು ಚಾಲಕ ಕಮಲೇಶ್ ಕಾಮತ್ ವಿರುದ್ದ ಸೆಕ್ಷನ್ 279 ಹಾಗೂ 337 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಅಪಘಾತದ ವೇಳೆ ಕಮಲೇಶ್ ಮದ್ಯ ಸೇವಿಸಿಲ್ಲ ಎಂಬುದು ದೃಢ ಪಟ್ಟಿದೆ. ಆದರೆ ರ್ಯಾಶ್ ಡ್ರೈವಿಂಗ್‌ನಿಂದ ಅಪಘಾತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಶಬನಾ ಅಜ್ಮಿಯವರ ಟಾಟಾ ಸಫಾರಿ ಟಾಪ್ ಮಾಡೆಲ್ VX ಕಾರು ಅಪಪಘಾತಕ್ಕೀಡಾಗಿದೆ. 2013ರಲ್ಲಿ ರಿಜಿಸ್ಟ್ರೇಶನ್ ಮಾಡಿಸಿರುವ ಈ ಕಾರು 7 ಹಳೇ ಕಾರಾಗಿದೆ. 2.2 ಲೀಟರ್, 4 ಸಿಲಿಂಡರ್ ಡಿಕೋರ್ ಟರ್ಬೋಚಾರ್ಜ್ ಡೀಸೆಲ್ ಎಂಜಿನ್ ಹೊಂದಿದ್ದು, 140 BHP ಪವರ್ ಹಾಗೂ 320 NM ಪೀಕ್ ಟಾರ್ಕ್ ಉತ್ಪಾದಿಸಲಬಲ್ಲ ಸಾಮರ್ಥ್ಯ ಹೊಂದಿದೆ.

Follow Us:
Download App:
  • android
  • ios