ಬೆಂಗಳೂರು(ಸೆ.18): ಭಾರತದ ಪ್ರಮುಖ ನಟ, ಗಾಯಕ ಮತ್ತು ಯೂತ್ ಐಕಾನ್ ಶ್ರೀ ಆಯುಷ್ಮಾನ್ ಖುರಾನಾ ಅವರನ್ನು ಹೊಸ ಟೊಯೋಟಾ ಅರ್ಬನ್ ಕ್ರೂಸರ್ ನ ಬ್ರಾಂಡ್ ಅಂಬಾಸಿಡರ್ ಆಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್  ಘೋಷಿಸಿದೆ. ಹಬ್ಬದ ದಿನಗಳಲ್ಲಿ  ಬುಕಿಂಗ್ ಪ್ರಾರಂಭವಾಗುವುದರೊಂದಿಗೆ, ಟೊಯೋಟಾದ SUV ಅರ್ಬನ್‌ ಕ್ರೂಸರ್ ಕಾರು ದೇಶಾದ್ಯಂತದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ.

ಅರ್ಬನ್ ಕ್ರೂಸರ್ SUV ಕಾರು ಬುಕ್ ಮಾಡಿದ ಗ್ರಾಹಕರಿಗೆ ಸ್ಪೆಷಲ್ ಪ್ಯಾಕೇಜ್!.

ಬ್ರ್ಯಾಂಡ್ ನ ಗೌರವ ಚಿತ್ರಣಕ್ಕೆ  ಆಯುಷ್ಮಾನ್ ಖುರಾನಾ ಟೊಯೋಟಾ ಅರ್ಬನ್ ಕ್ರೂಸರ್‌‌ನ  ಮಹತ್ವಾಕಾಂಕ್ಷೆಯ ಗುಣಲಕ್ಷಣಗಳ ಮೂಲ ಮೌಲ್ಯವನ್ನು ಸಾರುವ ನೈಜ ವ್ಯಕ್ತಿತ್ವ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತನ್ನ ಛಾಪು ಮೂಡಿಸಿದ ಅವರು ಧೈರ್ಯಶಾಲಿ ಮತ್ತು ಪ್ರಾಯೋಗಿಕ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ.
 
ಆಯುಷ್ಮಾನ್ ಖುರಾನಾ ಸ್ವಯಂ ನಿರ್ಮಿತ ನಟನ ಉದಾಹರಣೆಯಾಗಿದ್ದಾರೆ. ಅವರು ಬಹುಮುಖ ಪ್ರತಿಭೆ ಮತ್ತು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಗೌರವಿಸಲ್ಪಡುತ್ತಾರೆ. ಅವರ ಕಥೆ ಅನೇಕ ಯುವಕರಿಗೆ ಸ್ಫೂರ್ತಿಯಾಗಿದೆ ಮತ್ತು ಹೊಚ್ಚ ಹೊಸ ಅರ್ಬನ್ ಕ್ರೂಸರ್ನ ಉತ್ಸಾಹವನ್ನು ಪ್ರತಿಧ್ವನಿಸುತ್ತದೆ. ಟೊಯೋಟಾ ಬ್ರಾಂಡ್ ಆಗಿ ಇದೇ ರೀತಿಯ ಕಥೆಯನ್ನು ಹೊಂದಿದೆ - ನಾವು ವಿಶ್ವದ ಅತಿದೊಡ್ಡ, ಅತ್ಯಂತ ಗೌರವಾನ್ವಿತ ವಾಹನ ಕಂಪನಿಗಳಲ್ಲಿ ಒಂದಾಗಿದ್ದೇವೆ ಎಂದು  ಟಿಕೆಎಂನ ಮಾರಾಟ ಮತ್ತು ಸೇವೆಯ ಹಿರಿಯ ಉಪಾಧ್ಯಕ್ಷ  ನವೀನ್ ಸೋನಿ ಹೇಳಿದರು.

ಮೌಲ್ಯಯುತವಾದ ನಮ್ಮ ಗ್ರಾಹಕರೊಂದಿಗೆ ನಿಜವಾದ ಸಂಪರ್ಕ ಹೊಂದಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುತ್ತ ನಾವು ಹೊಸತನವನ್ನು ಹೊಂದಿದ್ದೇವೆ. ಹೊಚ್ಚ ಹೊಸ ಅರ್ಬನ್ ಕ್ರೂಸರ್ ತಮ್ಮ ಜೀವನದ ಆರಂಭಿಕ ಹಂತದಲ್ಲಿ ಟೊಯೋಟಾ ಎಸ್‌ಯುವಿ ಹೊಂದಲು ಆಶಿಸುವವರಿಗೆ ಅಂತಹ ಒಂದು ಮೌಲ್ಯಯುತ ಕೊಡುಗೆಯಾಗಿದೆ.

ಆಯುಷ್ಮಾನ್ ಖುರಾನಾ ಅವರನ್ನು ನಮ್ಮ ಬ್ರಾಂಡ್ ರಾಯಭಾರಿಯಾಗಿ ಘೋಷಿಸಲು ನಾವು ತುಂಬಾ ಸಂತಸಪಟ್ಟಿದ್ದೇವೆ. ಇವರ ಸಹಯೋಗದೊಂದಿಗೆ ನಾವು ಗ್ರಾಹಕರದೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ನಾವು ನಂಬಿದ್ದೇವೆ ಎಂದರು.
 
ಜನರು ನನ್ನ ಪ್ರಯಾಣದ ಬಗ್ಗೆ, ಮನರಂಜನಾ ಉದ್ಯಮದಲ್ಲಿ ನಾನು ಗಳಿಸಿದ ಪ್ರೀತಿ ಮತ್ತು ಗೌರವದ ಬಗ್ಗೆ ಕೇಳಿದಾಗ, ನಾನು ಯಾವಾಗಲೂ ಹೇಳುತ್ತೇನೆ 'ಗೌರವವು ನಾನು ಮಾಡಿದ ಕಾರ್ಯದ ಫಲಿತಾಂಶವಾಗಿದೆ '. ಆದ್ದರಿಂದ, ಅರ್ಬನ್ ಕ್ರೂಸರ್ನ ಮಂತ್ರವಾದ ‘ಗೌರವ’ ಎಂಬ ಕಲ್ಪನೆಯನ್ನು ನಾನು ಪ್ರೀತಿಸುತ್ತೇನೆ. ಟೊಯೋಟಾ ಅರ್ಬನ್ ಕ್ರೂಸರ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಯುವ ನಗರ ಎಸ್‌ಯುವಿ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು  ಆಯುಷ್ಮಾನ್ ಖುರಾನಾ ಹೇಳಿದರು