ಕಾರಿನಲ್ಲಿ ಡ್ರೈವ್ ಮಾಡಲೇಬೇಕಾದ ಭಾರತದ ಟಾಪ್ 5 ರಸ್ತೆಗಳು!
ಕಾರಿನಲ್ಲಿ ಲಾಂಗ್ ಡ್ರೈವ್ ಹೊಸ ಅನುಭವ ನೀಡುವುದು ಖಚಿತ. ಇಷ್ಟೇ ಅಲ್ಲ ಒತ್ತಡದ ಬದುಕಿಗೆ ಲಾಂಗ್ ಡ್ರೈವ್ ಹೊಸ ಚೈತನ್ಯ ನೀಡಲಿದೆ. ಹೀಗೆ ಲಾಂಗ್ ಡ್ರೈವ್ ಮಾಡಲು ಅತ್ಯುತ್ತಮ 5 ರಸ್ತೆಗಳ ವಿವರ ಇಲ್ಲಿದೆ.
ಬೆಂಗಳೂರು(ನ.12): ಲಾಂಗ್ ಡ್ರೈವ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಒಂದೆರಡು ದಿನ ರಜಾ ಇದ್ದರೆ ಮುಗೀತು. ಲಾಂಗ್ ಡ್ರೈವ್ ಹೊರಟೆ ಬಿಡುವ ಕಾಲವಿದು. ಹೀಗೆ ಲಾಂಗ್ ಡ್ರೈವ್ ಹೋಗಲೇ ಬೇಕಾದ ಭಾರತದ ಟಾಪ್ 5 ರಸ್ತೆಗಳ ವಿವರ ಇಲ್ಲಿದೆ.
1 ಮನಾಲಿ to ಲೇಹ್ ಹೈವೇ
ಮನಾಲಿಯಿಂದ ಲೇಹ್ ವರೆಗಿನ ಹೈವೇ ಡ್ರೈವಿಂಗ್ ನಿಮಗೆ ಅಹ್ಲಾದಕರ ಅನುಭವ ನೀಡಲಿದೆ. ರಸ್ತೆಗಳ ಎರಡು ಬದಿಗಳಲ್ಲಿನ ಪ್ರಕೃತಿಯ ಸುಂದರ ನೋಟ ನಿಮ್ಮ ಆಯಾಸವನ್ನೇ ದೂರ ಮಾಡುತ್ತೆ. ಒಟ್ಟು ಕಿ.ಮೀ 479. ಸಮುದ್ರ ಮಟ್ಟಕ್ಕಿಂತ 4-5 ಕಿ.ಮೀ ಎತ್ತರದಲ್ಲಿದೆ. ಹೀಗಾಗಿ 5 ತಿಂಗಳು ಮಾತ್ರ ಈ ದಾರಿ ತೆರೆದಿರುತ್ತೆ. ಇಲ್ಲಿ ಡ್ರೈವ್ ಮಾಡಲು ಅಕ್ಟೋಬರ್ ಸೂಕ್ತ ಸಮಯ.
2 ಮುಂಬೈ to ಪುಣೆ ಎಕ್ಸ್‌ಪ್ರೆಸ್ ಹೈವೇ
ಮುಂಬೈ -ಪುಣೆ ಎಕ್ಸ್‌ಪ್ರೆಸ್ ಹೈವೇ ಒಟ್ಟು 93 ಕಿ.ಮೀ ಉದ್ದವಿದೆ. ಲೋನವಾಲ ಮೂಲಕ ಹಾದುಹೋಗುವ ಈ ಹೈವೇ ಬೆಟ್ಟ ಗುಡ್ಡಗಳಿಂದ ತುಂಬಿಕೊಂಡಿದೆ. ಮಳೆಗಾಲದಲ್ಲಿ ಹಲವು ಜಲಪಾತಗಳು ಸೃಷ್ಟಿಯಾಗಿರುತ್ತೆ. ಹೀಗಾಗಿ ಸೆಪ್ಟೆಂಬರ್‌ನಿಂದ ಡಿಸೆಂಬರ್ ಈ ರಸ್ತೆ ಜರ್ನಿ ಉತ್ತಮವಾಗಿದೆ.
3 ಗುವ್ಹಾಟಿ to ತವಾಂಗ್
ನಾರ್ಥ್ ಈಸ್ಟ್ ಕಡೆಗಿನ ಡ್ರೈವ್ ಹೆಚ್ಚು ಥ್ರಿಲ್ ನೀಡುತ್ತೆ. ಜೊತೆಗೆ ಅಷ್ಟೇ ಸವಾಲು ಕೂಡ. ಯಾಕೆಂದರ್ ಸಂಪೂರ್ಣ ಹಿಲ್ ಸ್ಟೇಶನ್ ರೋಡ್ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಡ್ರೈವ್ ಮಾಡಲು ಮತ್ತಷ್ಟು ಉತ್ಸಾಹ ನೀಡುತ್ತೆ. ಒಟ್ಟು 520 ಕಿ.ಮೀ ಉದ್ದದ ಈ ದಾರಿಯಲ್ಲಿ ವೇಗಕ್ಕಿಂತ ನಿಧಾನವೇ ಉತ್ತಮ.
4 ಪುರಿ to ಕೋನಾರ್ಕ್ (NH-203)
ಪುರಿಯಿಂದ ಕೋನಾರ್ಕ್ NH ರಸ್ತೆ ಪ್ರಯಾಣ ಕೇವಲ 36 ಕಿ.ಮೀ. ಆದರೆ ಇಲ್ಲಿನ ಸಹಜ ಸೌಂದರ್ಯ, ಪ್ರಕೃತಿಯ ಸೊಬಗು ನಿಜಕ್ಕೂ ಅದ್ಬುತ.
5 ಬೆಂಗಳೂರು to ಬಂಡೀಪುರ ಅರಣ್ಯ
ಸನ್‌ರೂಫ್ ಹೊಂದಿರುವ ಕಾರಿನಲ್ಲಿ ಬೆಂಗಳೂರಿನಿಂದ ಬಂಡೀಪುರ ಅರಣ್ಯದ ಪ್ರಯಾಣ ಅತ್ಯುತ್ತ. ಭಾರತದ ಅತ್ಯುತ್ತ ಅರಣ್ಯ ವಲಯದ ಡ್ರೈವ್‌ಗೆ ಬಂಡೀಪುರ ಅರಣ್ಯ ಹೆಸರುವಾಸಿ. 235 ಕಿ.ಮೀ ದಾರಿ ರೋಚಕ ಅನುಭವ ನೀಡಲಿದೆ. ಇದೇ ದಾರಿಯಲ್ಲಿ ಮೈಸೂರಿನಿಂದ ಊಟಿವರೆಗಿನ ಪ್ರಯಾಣ ಕೂಡ ಉತ್ತಮವಾಗಿದೆ.