ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!
ಟಾಟಾ ನೆಕ್ಸಾನ್ ಕಾರು ಭಾರತದ ಅತ್ಯಂತ ಸುರಕ್ಷತೆಯ ಕಾರು ಎಂದೇ ಗುರುತಿಸಿಕೊಂಡಿದೆ. ಇದೀಗ ಇದೇ ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುತ್ತಿದೆ. ಹೊಸ ಕಾರು ಬಿಡುಗಡೆ ದಿನಾಂಕವೂ ನಿಗದಿಯಾಗಿದೆ.
ನವದೆಹಲಿ(ನ.12): ಟಾಟಾ ಮೋಟಾರ್ಸ್ ಎರಡು ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ಮಾಡಿದೆ. 2020ರಲ್ಲಿ ಟಾಟಾ ನೆಕ್ಸಾನ್ ಹಾಗೂ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಹೇಳಿದ್ದ ಟಾಟಾ ಇದೀಗ ಮುಂಚಿತವಾಗಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಮುಂದಿನ ತಿಂಗಳು ಪರಿಚಯಿಸಲು ಮುಂದಾಗಿದೆ.
ಇದನ್ನೂ ಓದಿ: ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಡಿಸೆಂಬರ್ ತಿಂಗಳಲ್ಲಿ ಭಾರತದ ರಸ್ತೆಯಲ್ಲಿ ಓಡಾಟ ಮಾಡಲಿದೆ. ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹಲವು ರಸ್ತೆಗಳಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಝಿಪಟ್ರಾನ್ ಟೆಕ್ನಾಲಜಿ ಹೊಂದಿರುವ ನೂತನ ಟಾಟಾ ನೆಕ್ಸಾನ್ ಕಾರು ಹಲವು ವಿಶೇಷತೆಗಳನ್ನೂ ಒಳಗೊಂಡಿದೆ.
ಇದನ್ನೂ ಓದಿ: ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್!
ಟಾಟಾ ನೆಕ್ಸಾನ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿ.ಮಿ ಪ್ರಯಾಣದ ರೇಂಜ್ ನೀಡಲಿದೆ. ಕಾರಿನ ಬ್ಯಾಟರಿ ಹಾಗೂ ಮೋಟಾರು ವಾರೆಂಟಿ ಬರೋಬ್ಬರಿ 8 ವರ್ಷ ನೀಡಲಾಗಿದೆ. ಈ ಕಾರಿನ ಬೆಲೆ 15 ರಿಂದ 17 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 2019ರ ಡಿಸೆಂಬರ್‌ನಲ್ಲಿ ಕಾರು ಮಿಡಿಯಾ ಡ್ರೈವ್ ಆರಂಭಿಸಲಿದೆ. ಇನ್ನು 2020ರ ಜನವರಿ- ಫೆಬ್ರವರಿಯಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.