Asianet Suvarna News Asianet Suvarna News

Tata Nexon EV Max ಮೇ 11 ರಂದು ಖರೀದಿಗೆ ಲಭ್ಯ:‌ ಬೆಲೆ ಎಷ್ಟು? ವಿನ್ಯಾಸ ಹೇಗಿದೆ?

ಭಾರತದ ವಾಹನ ತಯಾರಕ ಟಾಟಾ ತನ್ನ ಮುಂಬರುವ Nexon EV ಮ್ಯಾಕ್ಸ್‌ನ ಒಂದು ನೋಟವನ್ನು ತೋರಿಸುವ ಕೆಲವು ಟೀಸರ್ ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಟಾಟಾ ಮೋಟಾರ್ಸ್‌ನ ದೀರ್ಘ-ಶ್ರೇಣಿಯ Nexon EV ಭಾರತದಲ್ಲಿ ಮೇ 11 ರಂದು ಮಾರಾಟಕ್ಕೆ ಲಭ್ಯವಿರುತ್ತದೆ.
 

Tata Motors long range Nexon EV sale in India on May 11 price design specifications mnj
Author
Bengaluru, First Published May 7, 2022, 4:03 PM IST

Tata Nexon EV Max: ಸುದೀರ್ಘ ಕಾಯುವಿಕೆಯ ನಂತರ, ಟಾಟಾ ಮೋಟಾರ್ಸ್‌ನ ದೀರ್ಘ-ಶ್ರೇಣಿಯ Nexon EV ಮ್ಯಾಕ್ಸ್ ಅಂತಿಮವಾಗಿ ಮೇ 11 ರಂದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಹೊಸ ಕಾರಿಗೆ ನೆಕ್ಸಾನ್ ಇವಿ ಮ್ಯಾಕ್ಸ್ ಎಂದು ಹೆಸರಿಡಲಾಗಿದೆ.  ನವೀಕರಿಸಿದ ಪವರ್‌ಟ್ರೇನ್ ಮತ್ತು ಬ್ಯಾಟರಿಯು ಪ್ರಸ್ತುತ ಎಲೆಕ್ಟ್ರಿಕ್ ಕಾರ್‌ಗಿಂತ ಹೆಚ್ಚು ದೂರವನ್ನು ಕ್ರಮಿಸಲು ಅನುವು ಮಾಡಿಕೊಡುವುದು ಈ ಕಾರಿನ ಪ್ರಮುಖ ವೈಶಿಷ್ಟ್ಯ. ಆದರೆ ದೀರ್ಘ ಶ್ರೇಣಿಯ ಹೊರತಾಗಿ, ಕಾರು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಕಾರಿನಲ್ಲಿರುವ ಇತರ ಹೊಸ ವೈಶಿಷ್ಟ್ಯಗಳು ಮತ್ತು ಅದರ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ.

ಕಂಪನಿಯಿಂದ Tata Nexon EV Max  ಟೀಸರ್ ಬಿಡುಗಡೆ: ದೇಶೀಯ ಆಟೋ ದೈತ್ಯ ಇತ್ತೀಚೆಗೆ ಮುಂಬರುವ ದೀರ್ಘ-ಶ್ರೇಣಿಯ Nexon EV ಯ ಹೊಸ ಟೀಸರನ್ನು ಬಿಡುಗಡೆ ಮಾಡಿದೆ, ಇದು ಹೊಸ ಪಾರ್ಕಿಂಗ್ ಮೋಡನ್ನು ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಅಲ್ಲದೆ, ರೋಟರಿ ಗೇರ್ ಬದಲಿಗೆ, P-R-N-D ಅನ್ನು ಪ್ರದರ್ಶಿಸುವ ಹೊಸ ಡಿಸ್ಪ್ಲೇ ಇರುತ್ತದೆ. ಡಿಸ್ಪ್ಲೇ ಹತ್ತಿರ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB) ಮತ್ತು ಆಟೋ ಹೋಲ್ಡ್ಗಾಗಿ ಟಾಗಲ್ಗಳನ್ನು ಇರಿಸಲಾಗುತ್ತದೆ. 

ಇದನ್ನೂ ಓದಿ: ಮಾರುತಿ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ: ವಿತರಣೆಗೆ ಕಾಯುತ್ತಿದ್ದಾರೆ 1.29 ಲಕ್ಷ ಗ್ರಾಹಕರು

ಎಸ್‌ಯುವಿನಲ್ಲಿ ಹವಾಮಾನ ನಿಯಂತ್ರಣ ನಾಬ್ಸ್ ಅಡಿಯಲ್ಲಿ ಹಿಲ್ ಡಿಸೆಂಟ್ ಕಂಟ್ರೋಲ್ ಬಟನ್ ಸಹ ನೀಡಲಾಗಿದೆ. ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಅಡ್ಜಸ್ಟೇಬಲ್ ರಿಜನರೇಟಿವ್ ಬ್ರೇಕಿಂಗನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟೀಸರ್ ಇಪಿಬಿ ಪಕ್ಕದಲ್ಲಿರುವ ಬ್ಯಾಟರಿ ಐಕಾನ್‌ನೊಂದಿಗೆ ಎರಡು ಬಟನ್‌ಗಳನ್ನು ಸಹ ಸೂಚಿಸುತ್ತದೆ.

Tata Nexon EV Max ಫೀಚರ್ಸ್:‌ ಅಸ್ತಿತ್ವದಲ್ಲಿರುವ 30.1 kWh ಪ್ಯಾಕ್‌ಗೆ ಹೋಲಿಸಿದರೆ ಹೊಸ ಕಾರು ದೊಡ್ಡ 40kWh ಬ್ಯಾಟರಿ ಪ್ಯಾಕನ್ನು ಹೊಂದುವ ನಿರೀಕ್ಷೆಯಿದೆ. ಈ ಹೊಸ ಪ್ಯಾಕ್ ಹೆಚ್ಚು ಶಕ್ತಿಶಾಲಿ 136PS ಎಲೆಕ್ಟ್ರಿಕ್ ಮೋಟರ್‌ಗಾಗಿ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಒಟ್ಟಾಗಿ, ಇದು ಎಸ್‌ಯುವಿಯ 312km ARAI-ಶ್ರೇಣಿಯನ್ನು ಸುಧಾರಿಸುವ ನಿರೀಕ್ಷೆಯಿದೆ.

ಬಾಹ್ಯ ನೋಟದಲ್ಲಿ, ಎಸ್‌ಯುವಿ ಪ್ರಸ್ತುತ ಕಾರಿನಂತೆ ಕಾಣಲಿದೆ. ಆದಾಗ್ಯೂ, ಇದು ಮಾರ್ಪಡಿಸಿದ 5-ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಹಿಂಭಾಗದ ಡಿಸ್ಕ್ ಬ್ರೇಕನ್ನು ಬಳಸಬಹುದು. ಇದರ ಅಧಿಕೃತ ಬುಕಿಂಗ್ ಮೇ 11 ರಂದು ಪ್ರಾರಂಭವಾಗಲಿದೆ. ಇದರ ಬೆಲೆ 17 ರಿಂದ 20 ಲಕ್ಷ ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. 

Follow Us:
Download App:
  • android
  • ios