ನವದೆಹಲಿ(ಮಾ.05): ಐಪಿಎಲ್ ಟೂರ್ನಿಗೆ ಬಿಸಿಸಿಐ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. 8 ತಂಡಗಳು ಈಗಾಗಲೇ ತರಬೇತಿ ಶಿಬಿರ ಆಯೋಜಿಸಿ ಯುವ ಕ್ರಿಕೆಟಿಗರನ್ನ ಸಜ್ಜುಗೊಳಿಸುತ್ತಿದೆ. ಇತ್ತ ಟಾಟಾ ಮೋಟಾರ್ಸ್ ಕೂಡ ಐಪಿಲ್ ಟೂರ್ನಿಯನ್ನು ಎದುರು ನೋಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಟಾಟಾ ಮೋಟಾರ್ಸ್ ಅಧಿಕೃತ ಪಾರ್ಟ್ನರ್. ಟಾಟಾ ಮೋಟಾರ್ಸ್ ನೂತನ ಹ್ಯಾರಿಯರ್ SUV ಕಾರು ಪ್ರತಿ ಕ್ರೀಡಾಂಗಣದಲ್ಲೂ ಪ್ರದರ್ಶನಕ್ಕೆ ಇಡಲು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಷ್ಟೇ ಅಲ್ಲ ಹ್ಯಾರಿಯರ್ ಸೂಪರ್ ಸ್ಟೈಕ್ ಪ್ರಶಸ್ತಿ ಕೂಡ ನೀಡಲಿದೆ.

 

 

ಇದನ್ನೂ ಓದಿ: ಟಾಟಾ ಹ್ಯಾರಿಯರ್ SUV - ನೂತನ ಕಾರಿನ ವಿಶೇಷತೆ ಏನು?

ಪಂದ್ಯದಲ್ಲಿ ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್ ಹ್ಯಾರಿಯರ್ ಸೂಪರ್ ಸ್ಟ್ರೈಕ್ ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ.  ವರ್ಣರಂಜಿತ ಐಪಿಎಲ್  ಟೂರ್ನಿ ಹಲವು ಕಂಪನಿಗಳ ಬ್ರ್ಯಾಂಡ್ ನೇಮ್ ಪ್ರಮೋಶನ್‌ಗೆ ವೇದಿಕೆ ಕಲ್ಪಿಸುತ್ತದೆ. ಇದೀಗ ಈ ಅವಕಾಶವನ್ನ ಟಾಟಾ ಮೋಟಾರ್ಸ್ ಬಳಸಿಕೊಂಡಿದೆ.