ನವದೆಹಲಿ(ಜೂ.10): ನಗರಗಳಲ್ಲಿ ಕಾರು ಹೊಂದಿರುವ ಬಹುತೇಕರು ಕಚೇರಿಗೆ ಹಾಗೂ ಇತರ ಕೆಲಸಗಳಿಗೆ ದ್ವಿಚಕ್ರ ವಾಹನವನ್ನೇ ಬಳಸುತ್ತಾರೆ. ಟ್ರಾಫಿಕ್, ನಗರದ ಡ್ರೈವಿಂಗ್ ಕಿರಿಕಿರಿ ಸೇರಿದಂತೆ ಅನೇಕ ಕಾರಣಗಳಿಂದ ತಮ್ಮ ಕಾರುಗಳನ್ನು ತೆಗೆಯುವುದೇ ಇಲ್ಲ. ಕಾರು ನಿಂತಲ್ಲೇ ನಿಲ್ಲಿಸಿದರೂ ಪ್ರತಿ ವರ್ಷ ಇನ್ಶುರೆನ್ಸ್ ಕಟ್ಟಲೇ ಬೇಕು. ದುಬಾರಿ ಇನ್ಸುರೆನ್ಸ್ ಹಲವರಿಗೆ ತಲೆನೋವಾಗಿ ಪರಿಣಿಸಿತ್ತು. ಇದೀಗ ಹೆಚ್ಚಾಗಿ ಬಳಸದ ಕಾರು ಅಥವಾ ವಾಹನ ಮಾಲೀಕರಿಗೆ ಹೊಸ ಇನ್ಶುರೆನ್ಸ್ ಲಭ್ಯವಿದೆ.

ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!.

ನೂತನ ವಾಹನ ಇನ್ಶುರೆನ್ಸ್ ಪ್ರಕಾರ, ನಿಮ್ಮ ಕಾರು ಎಷ್ಟು ಕಿಲೋಮೀಟರ್ ಪ್ರಯಾಣಿಸುತ್ತದೆ, ಅಷ್ಟು ಪಾವತಿಸಿದರೆ ಸಾಕು. ಇದರಿಂದ ಹಣವೂ ಉಳಿತಾಯವಾಗಲಿದೆ. ನೂತನ ಇನ್ಶುರೆನ್ಸ್ ಖರೀದಿಸಿದರೆ, ಇದರೊಂದಿಗೆ ಡಿಜಿಟಲ್ ಡಿವೈಸ್ ಕೂಡ ಸಿಗಲಿದೆ. ಇದನ್ನು ಕಾರಿಗೆ ಅಳವಡಿಸಲಾಗುತ್ತಿದೆ. ಬಳಿಕ ಈ ಡಿವೈಸ್‌ನ್ನು ಮೊಬೈಲ್ ಆ್ಯಪ್ ಮೂಲಕ ಕನೆಕ್ಟ್ ಮಾಡಲಾಗುತ್ತದೆ.

BS6 ಎಮಿಶನ್ ಜೊತೆ ಮತ್ತೊಂದು ನಿಯಮ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ!.

ಕಾರಿಗೆ ಅಳವಡಿಸಲಾಗಿರುವ ಡಿವೈಸ್, ಕಾರು ಎಷ್ಟು ಕಿಲೋಮೀಟರ್ ಪ್ರಯಾಣ ಮಾಡುತ್ತದೆ, ಕಾರಿನ ಲೈವ್ ವೇಗ, ಸರಾಸರಿ ವೇಗ, ಡ್ರೈವರ್ ಕಾರು ಚಲಾಯಿಸುತ್ತಿರವ ರೀತಿ(ಗರಿಷ್ಠ ವೇಗ, ದಿಢೀರ್ ಬ್ರೇಕ್) ವಾಹನ ಎಂಜಿನ್ ಸೇರಿದಂತೆ ಇತರ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಲಿದೆ. 

ಈ ಇನ್ಶುರೆನ್ಸ್ ಪಾಲಿಸಿ ಖರೀದಿಸುವ ಗ್ರಾಹಕರಿಗೆ ಹಲವು ಆಯ್ಕೆಗಳಿವೆ. ವರ್ಷಕ್ಕೆ 2,500 ರಿಂದ 5,000 ಕಿ.ಮೀ. 7,500 ಕಿ.ಮೀ, 10,000 ಕಿ.ಮೀ, 20,000 ಕಿ.ಮೀ ಪಾಲಿಸಿ ಆಯ್ಕೆಗಳಿವೆ. ನಿಮ್ಮ ಕಾರು ವರ್ಷದಲ್ಲಿ ಎಷ್ಟು ಕಿ.ಮೀ ಚಲಿಸುತ್ತದೆ ಎಂಬ ಅಂದಾಜಿನಲ್ಲಿ ಈ ಆಯ್ಕೆಗಳಲ್ಲಿ ಸೂಕ್ತವಾದದನ್ನು ಆಯ್ಕೆ ಮಾಡಬಹುದು. ಒಂದು ವೇಳೆ ಆಯ್ಕೆ ಮಾಡಿದ ಪಾಲಿಸಿ ಅವದಿಗೂ ಮೊದಲೇ ಹೆಚ್ಚಿನ ಕಿ.ಮೀ ಪ್ರಯಾಣಿಸಿದರೆ, ಕಿ.ಮೀ ಟಾಪ್ ಅಪ್ ರಿಚಾರ್ಜ್ ಆಯ್ಕೆಯೂ ಲಭ್ಯವಿದೆ. ಹೆಚ್ಚವರಿಯಾಗಿ 1,000 ಕಿ.ಮೀ, ಅಥವಾ 2,000 ಕಿ.ಮೀ ರೀಚಾರ್ಜ್ ಮಾಡಿಕೊಳ್ಳಬಹುದು.

ಬೆಂಗಳೂರಿಗರಿಗೆ ಟಾಟಾ ಮೋಟಾರ್ಸ್ ಭರ್ಜರಿ ಆಫರ್, ಕಾರು ಖರೀದಿ ಈಗ ಸುಲಭ!

ವರ್ಷಕ್ಕೆ ನಿಮ್ಮ ಕಾರು ಎಷ್ಟು ಕಿ.ಮೀ ಪ್ರಯಾಣ ಮಾಡಲಿದೆ ಅನ್ನೋ ಸರಾಸರಿ ಮೇಲೆ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ. ಕಿ.ಮೀ ತಕ್ಕಂತೆ ಇನ್ಶುರೆನ್ಸ್ ಪಾಲಿಸಿ ಹಣ ನಿಗಧಿ ಮಾಡಲಾಗಿರುತ್ತದೆ. ಇನ್ನು ಈ ಪಾಸಿಯಲ್ಲಿ ಝೀರೋ ಡಿಪ್ರಿಸಿಯೇಶನ್, ಬಂಪರ್ ಟು ಬಂಪರ್, ಅಡೀಶನಲ್ ಕವರೇಜ್‌ಗಳಾದ ಮಾಲೀಕ ಹಾಗೂ ಡ್ರೈವರ್‌ಗೆ 15 ಲಕ್ಷ ರೂಪಾಯಿ ಕವರ್ ಸೇರಿದಂತೆ ಇತರ ಪಾಲಿಸಿಗಳಲ್ಲಿರುವಂತ ಎಲ್ಲಾ ಸೌಲಭ್ಯಗಳು ಸಿಗಲಿದೆ.ನೂತನ ಪಾಲಿಲಿಯನ್ನು ಭಾರತದಲ್ಲಿ ಟಾಟಾ AIG ಪರಿಚಯಿಸಿದೆ.