20 ವರ್ಷ ರಾಜನಂತೆ ಮೆರೆದ ಸುಜುಕಿ ಹಯಬುಸಾ ಬೈಕ್ ವಿದಾಯ!

ಸುಜುಕಿ ಹಯಬುಸಾ ಬೈಕ್ ಖರೀದಿ ಇನ್ಮುಂದೆ ಸಾಧ್ಯವಿಲ್ಲ. ಕಾರಣ ಸುಜುಕಿ ಹಯಬುಸಾ ಬೈಕ್ ಗುಡ್ ಬೈ ಹೇಳುತ್ತಿದೆ. ಅಷ್ಟಕ್ಕೂ ಈ ದುಬಾರಿ ಬೈಕ್ ದಿಢೀರ್ ನಿರ್ಮಾಣ ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ ವಿವರ.

Suzuki to discontinue the expensive Hayabusa Bike

ಬೆಂಗಳೂರು(ಡಿ.9): ಯುವಕರ ನಿದ್ದೆಗೆಡಿಸಿದ ದುಬಾರಿ ಬೈಕ್ ಸುಜುಕಿ ಹಯಬುಸಾ ಇದೀಗ ಗುಡ್ ಬೈ ಹೇಳುತ್ತಿದೆ. 20 ವರ್ಷ ರಾಜನಂತೆ ಮೆರೆದ ಹಯಬುಸಾ ಬೈಕ್ ಇದೀಗ ನಿರ್ಮಾಣ ಸ್ಥಗಿತಗೊಳ್ಳುತ್ತಿದೆ. ಇನ್ಮುಂದೆ ಹಯಬುಸಾ ಬೈಕ್ ಖರೀದಿ ಸಾಧ್ಯವಿಲ್ಲ.

Suzuki to discontinue the expensive Hayabusa Bike

1998ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಹಯಬುಸಾ ಬೈಕ್ 200mph ಸ್ಪೀಡ್ ಮೂಲಕ ಎಲ್ಲರ ಗಮನಸೆಳೆದಿತ್ತು. 1340 ಸಿಸಿ, ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿರುವ ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬಿಡುಗಡೆಯಾದ ಮೇಲೆ ಹಯಬುಸಾ ಡಿಸೈನ್ ಬದಲಾಯಿಸಿಲ್ಲ. 

Suzuki to discontinue the expensive Hayabusa Bike

ಸುದೀರ್ಘ ವರ್ಷ ಬೈಕ್ ಮಾರುಕಟ್ಟೆ ಆಳಿದ ಸುಜುಕಿ ಹಯಬುಸಾ ಇದೀಗ ಎಮಿಶನ್ ನಿಯಮ ಪಾಲನೆಯಲ್ಲಿ ವಿಫಲವಾಗಿದೆ. ಯುರೋಪ್‌ನಲ್ಲಿ ಈಗಾಗಲೇ ಹಯಬುಸಾ ಮಾರಾಟ ನಿಷೇಧಿಸಲಾಗಿದೆ. ಅಮೇರಿಕಾದಲ್ಲಿ 2019ರಿಂದ ಹಯಬುಸಾ ಖರೀದಿಸಲು ಸಾಧ್ಯವಿಲ್ಲ.

Suzuki to discontinue the expensive Hayabusa Bike

2016ರಲ್ಲೇ ಹಯಬುಸಾ ನಿರ್ಮಾಣ ನಿಲ್ಲಿಸಿದೆ. ಇರೋ ಸ್ಟಾಕ್ ಬೈಕ್ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ 2 ವರ್ಷ ಅವದಿ ಮುಗಿದಿದೆ. ಹೀಗಾಗಿ ಸುಜುಕಿ ಹಯಬುಸಾ ನಿರ್ಮಾಣ ಮಾತ್ರವಲ್ಲ, ಮಾರಾಟ ಕೂಡ ಇಲ್ಲ. ಈ ಬೈಕ್ ಬೆಲೆ ಬರೋಬ್ಬರಿ 13.65 ಲಕ್ಷ ರೂಪಾಯಿ.

Latest Videos
Follow Us:
Download App:
  • android
  • ios