Xiaomi ಮೊಬೈಲ್ ಕಂಪನಿಯಿಂದ ಇ-ಬೈಕ್ ಬಿಡುಗಡೆ- 80KM ಮೈಲೇಜ್!
Xiaomi ಕಂಪನಿ ಕಡಿಮೆ ಬೆಲೆಗೆ ಇ ಬೈಕ್ ಬಿಡುಗಡೆ ಮಾಜಿದೆ. Xiaomi ಫೋನ್ ರೀತಿಯಲ್ಲೇ ಇದೀಗ ಇ ಬೈಕ್ ಕೂಡ ಆಟೋಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಸಾಧ್ಯತೆ ಹೆಚ್ಚಿದೆ. ಈ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.
ಚೀನಾ(ಏ.10): ಚೀನಾದ Xiaomi ಮೊಬೈಲ್ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಈ ಚೀನಾ ಮೊಬೈಲ್ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಹಿಮೋ C20 ಇ-ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಪ್ರಯಾಣ ಮಾಡಬಹುದು.
ಇದನ್ನೂ ಓದಿ: FAW ಕಾರು ಕಂಪನಿ ಜೊತೆ ಕೈ ಜೋಡಿಸಿದ Xiaomi-ಬೆಲೆ ಮತ್ತಷ್ಟು ಅಗ್ಗ!
Xiaomi ಕಂಪನಿ ಸ್ಮಾರ್ಟ್ ಫೋನ್‌ಗಳಿಗೆ ಹೆಸರುವಾಸಿ. ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Xiaomi ಟಿವಿ ಸೇರಿದಂತೆ ಹಲವು ವಸ್ತುಗಳು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸದ್ಯ ಚೀನಾದಲ್ಲಿ ಹಿಮೋ C20 ಇ-ಬೈಕ್ ಬಿಡುಗಡೆ ಮಾಡಲಾಗಿದೆ. ಈ ಬೈಕ್ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ. ಇದರ ಬೆಲೆ 26,000 ರೂಪಾಯಿ ಮಾತ್ರ.
ಇದನ್ನೂ ಓದಿ: ABS ತಂತ್ರಜ್ಞಾನದ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಪಟ್ಟಿ ಬಿಡುಗಡೆ!
ಬ್ಯಾಟರಿ ಸಂಪೂರ್ಣ ಚಾರ್ಜ್‌ಗೆ 6 ಗಂಟೆ ಸಮಯ ತೆಗೆದುಕೊಳ್ಳುತ್ತೆ. ಇದರಲ್ಲಿ ಕ್ವಿಕ್ ಚಾರ್ಜ್ ಕೂಡ ಲಭ್ಯವಿದೆ. 36V 10Ah ಲೀಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 6 ಸ್ಪೀಡ್ ಗೇರ್ ಶಿಫ್ಟ್ ಸೌಲಭ್ಯ ಕೂಡ ಇದೆ. ಇ ಬೈಕ್ ಕೂಡ 21 ಕೆ.ಜಿ. ಶೀಘ್ರದಲ್ಲೇ Xiaomi ಇ ಬೈಕ್ ಭಾರತಕ್ಕೆ ಕಾಲಿಡಲಿದೆ.