ಭಾರತದಲ್ಲಿ ಸ್ಮಾರ್ಟ್ ರಿಂಗ್‌ ಬೆಲೆ, ವೈಶಿಷ್ಟ್ಯಗಳು ಮತ್ತು ಟಾಪ್ ಬ್ರ್ಯಾಂಡ್‌ಗಳ ಬಗ್ಗೆ ತಿಳಿಯಿರಿ. Samsung Galaxy, Oura, Ultrahuman, boAt ಮತ್ತು Gabit ಬ್ರ್ಯಾಂಡ್‌ಗಳ ಸ್ಮಾರ್ಟ್ ರಿಂಗ್‌ಗಳ ಹೆಲ್ತ್ ಟ್ರ್ಯಾಕಿಂಗ್, ವಾಟರ್‌ಪ್ರೂಫ್, ಪೇಮೆಂಟ್ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಿ.

ಸ್ಮಾರ್ಟ್ ರಿಂಗ್ ಬೆಲೆ: ಚಿನ್ನದ ಉಂಗುರ ಯಾರ ಹತ್ರ ಇಲ್ಲ ಹೇಳಿ? ಆದ್ರೆ ಈಗ ಸ್ಮಾರ್ಟ್ ರಿಂಗ್‌ಗಳದ್ದೇ ಮಾತು. ಸ್ಪೆಷಲ್ ತಂತ್ರಜ್ಞಾನ ಮತ್ತು ಸೆನ್ಸರ್‌ಗಳಿಂದ ನಿಮ್ಮ ಎಲ್ಲಾ ಮಾಹಿತಿಯನ್ನೂ ರೆಕಾರ್ಡ್ ಮಾಡುತ್ತೆ. ಫೋನ್ ಕಂಟ್ರೋಲ್, ಕಾರ್ಡ್ ಇಲ್ಲದೆ ಪೇಮೆಂಟ್.. ಎಲ್ಲಾ ಸುಲಭ. ಐಫೋನ್, ಆಂಡ್ರಾಯ್ಡ್ ಎರಡರಲ್ಲೂ ಬಳಸಬಹುದು. ಫ್ಯಾಶನ್ ಡಿಸೈನ್, ಹೈಟೆಕ್ ತಂತ್ರಜ್ಞಾನ ಎಲ್ಲರಿಗೂ ಇಷ್ಟ ಆಗುತ್ತೆ. ಟಾಪ್ ೫ ಸ್ಮಾರ್ಟ್ ರಿಂಗ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ಸ್ಮಾರ್ಟ್ ರಿಂಗ್‌ಗಳ ವೈಶಿಷ್ಟ್ಯಗಳು

  • ಹೃದಯ ಬಡಿತ ಅಳೆಯುವ ಸೆನ್ಸರ್.
  • SpO2 ಸೆನ್ಸರ್: ರಕ್ತದ ಆಮ್ಲಜನಕದ ಮಟ್ಟ ಪರಿಶೀಲಿಸುತ್ತದೆ.
  • ಚರ್ಮದ ತಾಪಮಾನವನ್ನು ಅಳೆಯಬಹುದು.
  • 4-12 ದಿನಗಳ ಬ್ಯಾಟರಿ ಬಾಳಿಕೆ (ಮಾದರಿ ಮತ್ತು ಬಳಕೆಯನ್ನು ಅವಲಂಬಿಸಿ).
  • 50 ಮೀಟರ್‌ವರೆಗೆ ನೀರಿನಲ್ಲಿ ಬಳಸಬಹುದು.
  • ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಬಳಸಬಹುದು.
  • ಟಚ್‌ಲೆಸ್ ಪೇಮೆಂಟ್.

5 ಫೇಮಸ್ ಸ್ಮಾರ್ಟ್ ರಿಂಗ್‌ಗಳು

1) ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್

38,999 ರೂ ಬೆಲೆ ಹೊಂದಿದೆ. 7 ದಿನಗಳ ಬ್ಯಾಟರಿ ಬಾಳಿಕೆ, ವಾಟರ್‌ಪ್ರೂಫ್, ಸ್ಲೀಪ್ ಟ್ರ್ಯಾಕಿಂಗ್. ಟೈಟಾನಿಯಂ ಬಾಡಿ. ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಸಬಹುದು.

2) ಅಲ್ಟ್ರಾಹ್ಯೂಮನ್ ರಿಂಗ್ ಏರ್

28,999 ಬೆಲೆ ಹೊಂದಿದೆ. ಹೆಲ್ತ್ ಟ್ರ್ಯಾಕಿಂಗ್ ಮಾಡಲು ಬಯಸುವವರಿಗೆ ಒಳ್ಳೆಯದು. ವಾಟರ್‌ಪ್ರೂಫ್ ಆಗಿದೆ. 6 ಬಣ್ಣಗಳಲ್ಲಿ ಲಭ್ಯ.

೩) ಔರಾ ರಿಂಗ್ 4

35,000 ರೂ ಬೆಲೆ ಹೊಂದಿದೆ. ಟೈಟಾನಿಯಂ ಮೆಟಲ್ ಬಾಡಿ. ಫ್ಯಾನ್ಸಿ ಡಿಸೈನ್. ಹೆಲ್ತ್ ಅನಾಲಿಸಿಸ್, ಸ್ಲೀಪ್ ಟ್ರ್ಯಾಕಿಂಗ್, ಸ್ಟ್ರೆಸ್ ಟ್ರ್ಯಾಕಿಂಗ್. ಬೆಸ್ಟ್ ಪರ್ಫಾರ್ಮೆನ್ಸ್‌ಗೆ ಸಬ್‌ಸ್ಕ್ರಿಪ್ಶನ್ ಬೇಕು.

4) ಗ್ಯಾಬಿಟ್ ಸ್ಮಾರ್ಟ್ ರಿಂಗ್

13,100 ಬೆಲೆ ಹೊಂದಿದೆ. 5 ದಿನಗಳ ಬ್ಯಾಟರಿ ಬಾಳಿಕೆ. 50 ಮೀಟರ್ ವಾಟರ್‌ಪ್ರೂಫ್. spo2, ಪೆಡೋಮೀಟರ್, ಕ್ಯಾಲೋರಿ ಕೌಂಟ್.

5) ಬೋಟ್ ಸ್ಮಾರ್ಟ್ ರಿಂಗ್ ಆಕ್ಟಿವ್

2999 ಬೆಲೆ ಹೊಂದಿದೆ. 7 ದಿನಗಳ ಬ್ಯಾಟರಿ ಬಾಳಿಕೆ. 50 ಮೀಟರ್ ವಾಟರ್‌ಪ್ರೂಫ್. ಸ್ಲೀಪ್ ಟ್ರ್ಯಾಕಿಂಗ್. ಕಾಲೇಜು ವಿದ್ಯಾರ್ಥಿಗಳಿಗೆ ಒಳ್ಳೆಯ ಆಯ್ಕೆ.