ನಮ್ಮಲ್ಲಿ ಹೆಚ್ಚೆಂದರೆ ನಮ್ಮ ಡ್ರೆಸ್ಸಿಗೆ ತಕ್ಕಂತೆ ವಾಚ್, ಚಪ್ಪಲ್ ಅಥವಾ ಇತರ ಒರ್ನಮೆಂಟ್ಸ್ ಇರುತ್ತೆ. ಆದರೆ ಇಲ್ಲೊಬ್ಬ ಸಿಂಗ್ ತನ್ನಲ್ಲಿರುವ ಟರ್ಬನ್ ಕಲರ್‌ಗೆ ಮ್ಯಾಚಿಂಗ್ ಕಾರುಗಳನ್ನ ಹೊಂದಿದ್ದಾನೆ. ಈ ಸಿಂಗ್ ಯಾರು? ಈತನ ಲಕ್ಸುರಿ ಲೈಫ್ ಹೇಗಿದೆ.
ಲಂಡನ್(ನ.12): ಹುಡುಗರಾದರೆ ಡ್ರೆಸ್‌ಗೆ ತಕ್ಕಂತೆ ಮ್ಯಾಚಿಂಗ್ ವಾಚ್, ಇನ್ನು ಹುಡುಗಿಯರಾದರೆ ಮ್ಯಾಚಿಂಗ್ ಬಳೆ, ಒಲೆ, ಹೇರ್‌ಬ್ಯಾಂಡ್, ನೈಲ್ ಪಾಲಿಶ್, ಲಿಪ್ ಸ್ಟಿಕ್ ಹೇಗೆ ಪಟ್ಟಿ ಬೆಳೆಯುತ್ತೆ. ಇನ್ನೂ ಲಕ್ಸುರಿ ಲೈಫ್ ಅಂದ್ರೆ, ವ್ಯಾನಿಟಿ ಬ್ಯಾಗ್, ಮೊಬೈಲ್ ಪೌಚ್ ಸೇರಿದಂತೆ ಇತರ ವಸ್ತುಗಳು ಮ್ಯಾಚಿಂಗ್ ಸೇರಿಕೊಳ್ಳುತ್ತವೆ. ಆದರೆ ಇಲ್ಲೊಬ್ಬ ಸಿಂಗ್ ತನ್ನಲ್ಲಿ ಎಚ್ಚು ಬಣ್ಣದ ಟರ್ಬನ್ ಇದೆಯೋ ಅಷ್ಟು ಬಣ್ಣದ ಕಾರುಗಳನ್ನ ಹೊಂದಿದ್ದಾನೆ.
ಲಂಡನ್ ಮೂಲದ ಈ ಕುಬೇರನ ಹೆಸರು ರುಬೇನ್ ಸಿಂಗ್. ಲಂಡನ್‌ನ ಶ್ರೀಮಂತ ಉದ್ಯಮಿಯಾಗಿರುವ ರುಬೇನ್ ಸಿಂಗ್, ಬ್ರಿಟೀಷ್ ಬಿಲ್ ಗೇಟ್ಸ್ ಎಂದೇ ಹೆಸರುವಾಸಿ. ಇಷ್ಟೇ ಅಲ್ಲ ಈತನ ಟರ್ಬನ್ ಕಲರ್‌ನಲ್ಲಿರುವ ಕಾರುಗಳು ಸಾಮಾನ್ಯ ಕಾರುಗಳಲ್ಲ, ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು.

ಇಂಗ್ಲೀಷ್ ಪ್ರಜೆಯೊಬ್ಬ, ರುಬೇನ್ ಸಿಂಗ್ ಟರ್ಬನ್ ನೋಡಿ ಬ್ಯಾಂಡೇಜ್ ಎಂದು ಕರೆದಿದ್ದ. ಇದರಿಂದ ಕೆರಳಿದ ರುಬೇನ್ ಸಿಂಗ್, ಟರ್ಬನ್ ನನ್ನ ಹೆಮ್ಮೆ, ನನ್ನ ಸಂಸ್ಕೃತಿ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ನನ್ನಲ್ಲಿರುವ ಟರ್ಬನ್ ಬಣ್ಣದ ರೋಲ್ಸ್ ರಾಯ್ಸ್ ಕಾರಿನಲ್ಲಿ ನಾನು ಪ್ರಯಾಣಿಸುತ್ತೇನೆ ಎಂದು ಚಾಲೆಂಜ್ ಮಾಡಿದ್ದ.
ಚಾಲೆಂಜ್ ಬಳಿಕ ರುಬೇನ್ ಸಿಂಗ್, ತನ್ನಲ್ಲಿರುವ ಪ್ರಮುಖ ಬಣ್ಣಗಳ ರೋಲ್ಸ್ ರಾಯ್ ಕಾರು ಖರೀದಿಸಿ ಇಂಗ್ಲೀಷ್ ಪ್ರಜೆಗೆ ತಿರುಗೇಟು ನೀಡಿದ್ದರು. ಈ ಮೂಲಕ ಭಾರತೀಯರ ಮನಗೆದ್ದಿದ್ದರು.

ರೋಲ್ಸ್ ರಾಯ್ಸ್ ಕಾರಿನ ಬೆಲೆ ಬರೋಬ್ಬರಿ 10 ಕೋಟಿಗೂ ಅಧಿಕ. ಇಂತಹ 10 ರೋಲ್ಸ್ ರಾಯ್ಸ್ ಕಾರುಗಳು ರುಬೇನ್ ಸಿಂಗ್ ಬಳಿ ಇದೆ. ಅದಕ್ಕೆ ಹೇಳುವುದು ಸಿಂಗ್ ಈಸ್ ಕಿಂಗ್.

