ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮುಂದಾದ RR ಗ್ಲೋಬಲ್ !

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಆಟೋಮೊಬೈಲ್ ಕಂಪನಿಗಳು ವ್ಯವಹಾರ ವಿಸ್ತರಿಸಿ ನಷ್ಟ ಸರಿದೂಗಿಸಲು ಮುಂದಾಗಿದೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ RR ಗ್ಲೋಬಲ್ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಭಾರತದಲ್ಲಿ 5 ವೇರಿಯೆಂಟ್ ಎಲೆಕ್ಟ್ರಿಕ್  ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

RR Global paln to launch  electric scooter in India

ನವದೆಹಲಿ(ಜೂ.14): ಅತೀ ದೊಡ್ಡ ಎಲೆಕ್ಟ್ರಿಕಲ್ ಇಂಡಸ್ಟ್ರಿ  RR ಗ್ಲೋಬಲ್ ಭಾರತದಲ್ಲಿ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. BGAUSS ಬ್ರ್ಯಾಂಡ್ ಅಡಿಯಲ್ಲಿ RR ಗ್ಲೋಬಲ್ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ.   RR ಗ್ಲೋಬಲ್ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ನಿರ್ವಹಣೆ ವೆಚ್ಚ, ಫಾಸ್ಟ್ ಚಾರ್ಜಿಂಗ್, ಆಕರ್ಷಕ ಬೆಲೆ ಹೊಂದಿರಲಿದೆ ಎಂದು ಕಂಪನಿ ಹೇಳಿದೆ.

ಮೇಡ್ ಇನ್ ಇಂಡಿಯಾ ಜೆಮೊಪೈ ಮಿಸೋ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆ!...

ಮೊದಲ ಹಂತದಲ್ಲಿ  RR ಗ್ಲೋಬಲ್ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಒಟ್ಟು 5 ವೆರಿಯೆಂಟ್‌ಗಳಲ್ಲಿ ನೂತನ ಸ್ಕೂಟರ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಪುಣೆಯಲ್ಲಿರುವ ಚಕನ್ ಘಟಕದಲ್ಲಿ  RR ಗ್ಲೋಬಲ್ ಸ್ಕೂಟರ್ ಜೋಡಣೆ ಮಾಡಲಿದೆ. ಚಕನ್ ಘಟಕದಲ್ಲಿ ವರ್ಷಕ್ಕೆ 80,000 ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!.

ಭಾರತದ ಬಹುತೇಕ ನಗರಗಳಲ್ಲಿ RR ಗ್ಲೋಬಲ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ. ಇದಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಭವಿಷ್ಯದ ಸಾರಿಗೆ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನದತ್ತ ಕಂಪನಿ ಚಿತ್ತ ಹರಿಸಿದೆ. ಭಾರತದಲ್ಲಿ ಬೇಡಿಕೆಗೆ ಅನುಗುಣವಾಗಿ ನೂತನ ಸ್ಕೂಟರ್ ಬಿಡುಗಡೆಯಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಾಬ್ರ ಹೇಳಿದ್ದಾರೆ.

Latest Videos
Follow Us:
Download App:
  • android
  • ios