ಸೈಕಲ್ ತುಳಿದು ಆಫೀಸ್‌ಗೆ ಹೋದರೆ ಆರೋಗ್ಯವೂ ವೃದ್ಧಿಯಾಗುತ್ತೆ, ಮಾಲಿನ್ಯವೂ ಕಡಿಮೆಯಾಗುತ್ತೆ. ಇದರ ಜೊತೆಗೆ ಹೊಸ ಯೋಜನೆಯೊಂದು ಜಾರಿಗೆ ಬಂದಿದೆ. ಸೈಕಲ್ ತುಳಿದು ಆಫೀಸ್‌ಗೆ ಹೋದರೆ ತೆರಿಗೆಯನ್ನು ಕಂಪನಿ ಪಾವತಿಸಲಿದೆ.
ನೆದರ್ಲೆಂಡ್(ಮಾ.12): ಸೈಕಲ್ ಸವಾರಿ ಮಾಡಿದರೆ ಆರೋಗ್ಯ ವೃದ್ಧಿಸುತ್ತೆ, ಜೊತೆಗೆ ಮಾಲಿನ್ಯ, ಟ್ರಾಫಿಕ್ ಸಮಸ್ಯೆಗಳು ಮುಕ್ತವಾಗುತ್ತೆ. ಆದರೆ ನಗರ ಪ್ರದೇಶವಾಗಲಿ, ಹಳ್ಳಿಯಾಗಲಿ ಸೈಕಲ್ ಮೇಲೆ ಆಫೀಸ್‌ಗೆ ಹೋಗುವವರು ಬೆರಳೆಣಿಕೆ ಮಂದಿ. ಇದೀಗ ಸೈಕಲ್ ತುಳಿದು ಆಫೀಸ್‌ಗೆ ಬಂದರೆ ತೆರಿಗೆ ಉಚಿತ ಅನ್ನೋ ಹೊಸ ನಿಯಮವನ್ನು ನೆದರ್ಲೆಂಡ್‌ನಲ್ಲಿ ಜಾರಿಗೆ ತರಲಾಗಿದೆ.
ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಯಮಹಾ MT-15 ಬೈಕ್!
ವಿಶ್ವದಲ್ಲಿ ಗರಿಷ್ಠ ಸೈಕಲ್ ಬಳಕೆ ಮಾಡುವ ದೇಶ ನೆದರ್ಲೆಂಡ್. ಇಲ್ಲಿ ಬೈಕ್, ಕಾರಿಗಿಂತ ಜನರು ಸೈಕಲ್ ಉಪಯೋಗಿಸುತ್ತಾರೆ. ಇಲ್ಲಿನ ಜನಸಂಖ್ಯೆಗಿಂತ ಹೆಚ್ಚು ಸೈಕಲ್‌ಗಳಿವೆ. ಜನರು ತಮ್ಮ ಯಾವುದೇ ಕೆಲಸ ಅಥವಾ ಲಾಂಗ್ ರೈಡ್, ಮಸ್ತಿಗೂ ಸೈಕಲನ್ನೇ ಹೆಚ್ಚಾಗಿ ಬಳಸುತ್ತಾರೆ. ಇದೀಗ ಇಲ್ಲಿ ಸೈಕಲ್ ತುಳಿದು ಆಫೀಸ್‌ಗೆ ಬಂದರೆ ಅವರ ತೆರಿಗೆಯನ್ನು ಕಂಪನಿ ಕಟ್ಟಲಿದೆ.
ಇದನ್ನೂ ಓದಿ: ಹಿರೋ Xtreme 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ!
ಸೈಕಲ್ ತುಳಿದು ಆಫೀಸ್‌ಗೆ ಬರುವ ಉದ್ಯೋಗಿಗಳಿಗೆ ಪ್ರತಿ ಕಿ.ಮೀಗೆ 16 ರೂಪಾಯಿಯನ್ನು ಕಂಪನಿ ನೀಡಲಿದೆ. ಅಂದರೆ ನಿಮ್ಮ ಆದಾಯದಲ್ಲಿನ ತೆರಿಗೆಯ 16 ರೂಪಾಯಿಯನ್ನು ಕಂಪನಿ ಪಾವತಿಸಲಿದೆ. ಒಂದು ಷರತ್ತು ಇದೆ. ಆಫೀಸ್ ಬಳಕೆಗೆ ಉಪಯೋಗಿಸಿದರೆ ಮಾತ್ರ ಕಂಪನಿ ಹಣ ಪಾವತಿಸಲಿದೆ. ಇತರ ವೈಯುಕ್ತಿಕ ಉಪಯೋಗಕ್ಕಾಗಿ ಸೈಕಲ್ ಬಳಸಿದರೆ ಕಂಪನಿ ಹಣ ಪಾವತಿಸುವುದಿಲ್ಲ.
ಇದನ್ನೂ ಓದಿ: ಪಲ್ಸರ್, R15ಗೆ ಪೈಪೋಟಿ - ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್!
ಯುಕೆ, ಬೆಲ್ಜಿಯಂಗಳಲ್ಲಿ ಸೈಕಲ್ ತುಳಿದ ಆಫೀಸ್‌ಗೆ ಹೋದರೆ ಹಲವು ರಿಯಾತಿಗಳಿವೆ. ಇಷ್ಟೇ ಅಲ್ಲ ಸೈಕಲ್ ಖರೀದಿಸಿದರೆ ತೆರಿಗೆ ಉಚಿತ ಸೇರಿದಂತೆ ಹಲವು ಯೋಜನೆಗಳಿವೆ. ಕರ್ನಾಟಕದ ನಗರ ಪ್ರದೇಶಗಳಲ್ಲಿ ಜನರು ಸೈಕಲ್ ಬಳಸುವುದು ಕಡಿಮೆ. ಆದರೆ ಮೈಸೂರಿನಲ್ಲಿ ಹೆಚ್ಚು ಸೈಕಲ್‌ಗಳು ಕಾಣಸಿಗುತ್ತವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 12, 2019, 5:04 PM IST