Asianet Suvarna News Asianet Suvarna News

ಲಾಕ್‌ಡೌನ್ ನಡುವೆ ಪೊರ್ಶೆ ಕಾರಿನಲ್ಲಿ ಸುತ್ತಾಟ, ಬಸ್ಕಿ ಹೊಡೆಸಿದ ಪೊಲೀಸ್!

ವೀಕ್‌ಎಂಡ್, ರಜಾ ದಿನಗಳಲ್ಲಿ ಹೈವೇ, ನಗರದ ಹೊರವಲಯಗಳಲ್ಲಿ ಸದ್ದು ಮಾಡುವ ದುಬಾರಿ, ಐಷಾರಾಮಿ, ಸ್ಪೋರ್ಟ್ಸ್ ಕಾರುಗಳು ಇದೀಗ ಲಾಕ್‌ಡೌನ್ ಕಾರಣ ಅನಿವಾರ್ಯವಾಗಿ ಮನೆಯಲ್ಲಿ ನಿಂತಿದೆ. ಕೋಟಿ ಕೋಟಿ ಮೌಲ್ಯದ ಕಾರನ್ನು ಹಾಗೇ ನಿಲ್ಲಿಸಿದರೆ ಮಾಲೀಕನ ಮನಸ್ಸು ಕೇಳಬೇಕಲ್ಲ. ಹೀಗೆ ಪೊರ್ಶೆ ಕಾರು ಮಾಲೀಕ ಲಾಕ್‌ಡೌನ್ ನಡುವೆ ಕಾರು ತೆಗೆದು ಒಂದು ರೌಂಡ್ ಹೊರಟಿದ್ದಾನೆ. ಆದರೆ ಪೊಲೀಸರಿಗೆ ಕೈಗೆ ಸಿಕ್ಕಿ ಹೈರಾಣಾಗಿದ್ದಾನೆ.
 

Porsche car owner finned sit ups by indore police for not wearing mask
Author
Bengaluru, First Published Apr 27, 2020, 2:52 PM IST | Last Updated Apr 27, 2020, 2:54 PM IST

ಇಂದೋರ್(ಏ.27): ಕೋಟಿ ಕೋಟಿ ರೂಪಾಯಿ ಕಾರು, ಫುಲ್ ಟ್ಯಾಂಕ್ ಪೆಟ್ರೋಲ್ ಇನ್ನೇನು ಬೇಕು. ಕಾರು ಸ್ಟಾರ್ಟ್ ಮಾಡಿ ಒಂದು ರೌಂಡ್ ಹೊಡೆಯದಿದ್ದರೆ ಹೇಗೆ. ಆದರೆ ಲಾಕ್‌ಡೌನ್ ಕಾರಣ ಕಾರಿನ ಮೌಲ್ಯ ಎಷ್ಟೇ ಇದ್ದರೂ ಹೊರಗೆ ತೆಗೆಯುವಂತಿಲ್ಲ. ಆದರೆ ದುಬಾರಿ ಮೌಲ್ಯದ ಕಾರು ಖರೀದಿಸಿದ ಮಾಲೀಕ ಮನಸ್ಸು ಕೇಳಬೇಕಲ್ಲ. ಒಂದು ರೌಂಡ್ ಹೊಡದೇ ಬಿಡೋಣ ಎಂದು ಇಂಧೋರ್‌ನ ಪೋರ್ಶೆ ಕಾರು ಮಾಲೀಕ ನಿರ್ಧರಿಸಿದ್ದಾನೆ.

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!

ತುಂಬಾ ದಿನಗಳಿಂದ ಕೇವಲ ಸ್ಟಾರ್ಟ್ ಮಾಡುತ್ತಿದ್ದ ಪೋರ್ಶೆ ಮಾಲೀಕ ಒಂದು ರೌಂಡ್ ಹೊಡೆಯಲು ನಿರ್ಧರಿಸಿ ಕಾರು ತೆಗೆದುಕೊಂಡು ಮುಖ್ಯರಸ್ತೆಗೆ ತಿರುಗಿಸಿದ್ದಾನೆ. ಗಸ್ತು ತಿರುಗುತ್ತಿದ್ದ ಪೊಲೀಸರು ಪೊರ್ಶೆ ಕಾರು ತಡೆದು ನಿಲ್ಲಿಸಿದ್ದಾರೆ. ಪೊರ್ಶೆ ಮಾಲೀಕನಿಗೆ ಮುಳುವಾಗಿದ್ದು ಮಾಸ್ಕ್. ಮಾಲೀಕ ಮಾಸ್ಕ್ ಧರಿಸದೆ ಕಾರು ಚಾಲನೆ ಮಾಡಿಕೊಂಡು ಮುಖ್ಯರಸ್ತೆಗೆ ಹೋಗಿದ್ದಾನೆ. ಪೊಲೀಸರು ಮಾಲೀಕನ ಕಾರಿನಿಂದ ಕೆಳಗಿಳಿಸಿ ಮಾಸ್ಕ್ ಎಲ್ಲಿ ಎಂದಿದ್ದಾರೆ. ಆತನ ಬಳಿ ಉತ್ತರ ಇರಲಿಲ್ಲ.

ಬಳಿಕ ಲಾಕ್‌ಡೌನ್ ಪಾಸ್ ಕೇಳಿದ್ದಾರೆ. ಅದೂ ಕೂಡ ಇಲ್ಲ. ಹೀಗಾಗಿ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ನಡು ರಸ್ತೆಯಲ್ಲಿ ಪೊರ್ಶೆ ಕಾರಿನ ಮಾಲೀಕ ಬಸ್ಕಿ ಹೊಡೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನ ಪೊರ್ಶೆ ಕಾರಿನ ಆನ್‌ರೋಡ್ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ. ಪೊರ್ಶೆ 718 ಬಾಕ್ಸ್‌ಸ್ಟರ್ ಕಾರು 2.0 ಲೀಟರ್, 4 ಸಿಲಿಂಡರ್, ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 

 

300 PS ಪವರ್ 380 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0 ಯಿಂದ 100 ಕಿ.ಮೀಗೆ ಇದು 4.7 ಸೆಕೆಂಡ್ ತೆಗುದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ 275 ಕಿ.ಮೀ ಪ್ರತಿ ಗಂಟೆಗೆ.

Latest Videos
Follow Us:
Download App:
  • android
  • ios