ಟ್ರಾಫಿಕ್ ದಂಡ ಕಟ್ಟದವರಿಗೆ ಅರೆಸ್ಟ್ ಶಾಕ್; ಪೊಲೀಸರ ಪ್ಲಾನ್‌ಗೆ ಬೆಚ್ಚಿ ಬಿದ್ದ ಸವಾರರು!

ಪೊಲೀಸರು ಇನ್ನೂ ಹಿಡಿದಿಲ್ಲ ಎಂದು ಆರಾಮಾಗಿ ಇದ್ದರೆ ಎಚ್ಚೆತ್ತುಕೊಳ್ಳಿ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಇ ಚಲನ್ ನೊಟೀಸ್ ಬಂದಿರುತ್ತೆ. ಇ ಚಲನ್ ಬಂದಿದ್ದೂ  ದಂಡ ಕಟ್ಟದಿದ್ದರೆ ಪೊಲೀಸರ ಅತಿಥಿಯಾಗುವ ಎಲ್ಲಾ ಸಾಧ್ಯತೆಗಳಿವೆ. 

Police request court to issue arrest warrant for those who not paid traffic fines

ಮುಂಬೈ(ನ.23): ಮೋಟಾರು ವಾಹನ ತಿದ್ದುಪಡಿ ಬಳಿಕ ವಾಹನ ಸವಾರರು ಟ್ರಾಫಿಕ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಪ್ಪಿ ತಪ್ಪಿ ಗೆರೆ ದಾಟಿದರೆ ದುಬಾರಿ ದಂಡ ಕೂಡ ಬೀಳುತ್ತೆ. ಇಷ್ಟಾದರೂ ಕೆಲವರು ಟ್ರಾಫಿಕ್ ನಿಯಮಕ್ಕೂ ನಮಗೂ ಸಂಬಂಧವಿಲ್ಲ ಅನ್ನೋವಂತೆ ವಾಹನ ಚಲಾಯಿಸುತ್ತಾರೆ. ಹೀಗೆ  ನಿಯಮ ಉಲ್ಲಂಘಿಸಿದವರ ವಿರುದ್ದ ಪೊಲೀಸರು ಇ ಚಲನ್ ಕಳುಹಿಸಿದ್ದಾರೆ. ಚಲನ್ ಪಡೆದಿರುವ ಸವಾರರ ಪೈಕಿ ಹಲವರು ದಂಡ ಪಾವತಿಸಿಲ್ಲ. ಹೀಗಾಗಿ ಇಂತವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. 

ಇದನ್ನೂ ಓದಿ: ಡಿ.1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ; ತಿಳಿದುಕೊಳ್ಳಿ ಡಿಜಿಟಲ್ ಟೋಲ್!

ಮುಂಬೈ ಪೊಲೀಸರು ಟ್ರಾಫಿಕ್ ದಂಡ ವಸೂಲಿಗೆ ಪರಿಣಾಮಕಾರಿಯಾದ ಪ್ಲಾನ್ ಮಾಡಿದ್ದಾರೆ. ಇ ಚಲನ್ ಮೂಲಕ ಪೊಲೀಸರಿಗೆ ಬರೋಬ್ಬರಿ 80 ಕೋಟಿ ರೂಪಾಯಿ ಬರಬೇಕಿದೆ. ಹಲವು ಬಾರಿ ಇ ಚಲನ್, ನೊಟೀಸ್ ನೀಡಿದರೂ ದಂಡ ಮಾತ್ರ ಕಟ್ಟುತಿಲ್ಲ. ಹೀಗಾಗಿ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ದಂಡ ಕಟ್ಟದವರ ವಿರುದ್ದ ಅರೆಸ್ಟ್ ವಾರೆಂಟ್ ಹೊರಡಿಸಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ಸವಾರರಿಗೆ ಶಾಕ್; ಪೊಲೀಸರಿಂದ ಹಾಫ್ ಹೆಲ್ಮೆಟ್ ಆಪರೇಷನ್!

ಕಳೆದ 3 ವರ್ಷಗಳಲ್ಲಿ ಇ ಚಲನ್ ನೀಡಿದ ಹಲವರು ದಂಡ ಕಟ್ಟಿಲ್ಲ. ಇದರ ಮೊತ್ತ 80 ಕೋಟಿ ರೂಪಾಯಿ. SMS ಹಾಗೂ ಲೆಟರ್, ನೊಟೀಸ್‌ಗೆ ಸ್ಪಂದನೆ ಸಿಗುತ್ತಿಲ್ಲ. ನಿಯಮ ಎಲ್ಲರಿಗೂ ಒಂದೇ. ಸಿಸಿಟಿವಿ ದೃಶ್ಯ ಆಧರಿಸಿ, ಪೊಲೀಸರು ಸೆರೆಹಿಡಿದ ಫೋಟೋ ಆಧಾರದಲ್ಲಿ ಇ ಚಲನ್ ಕಳುಹಿಸಲಾಗಿದೆ. ಆದರೆ ದಂಡ ಕಟ್ಟದೆ ತಿರುಗಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಂಬೈ ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಮಧುಕರ್ ಪಾಂಡೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios