ಬೆಂಗಳೂರು ಮೂಲದ ಓಲಾ ಟ್ಯಾಕ್ಸಿ ಕ್ಯಾಬ್ ಈಗಾಲೇ ಲಂಡನ್‌ಗೆ ಕಾಲಿಟ್ಟಿದೆ. ಇದೀಗ ಇಂಗ್ಲೆಂಡ್‌ನ 3 ಪ್ರಮುಖ ನಗರಗಳಲ್ಲಿ ಓಲಾ ಸೇವೆ ಆರಂಭಗೊಳ್ಳುತ್ತಿದೆ. ಬೆಂಗಳೂರಿನಿಂದ ಲಂಡನ್ ತಲುಪಿದ ಓಲಾ ಇದೀಗ ವಿಶ್ವದ 250ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ.

ಲಂಡನ್(ಜ.31): ಓಲಾ ಟ್ಯಾಕ್ಸಿ ಸೇವೆ ಇದೀಗ ಲಂಡನ್‌ನಲ್ಲಿ ಸೇವೆ ಆರಂಭಿಸುತ್ತಿದೆ. ಫೆಬ್ರವರಿ 10 ರಿಂದ ಓಲಾ ಲಂಡನ್ ಸೇವೆ ಆರಂಭವಾಗಲಿದೆ ಎಂದು ಕಂಪನಿ ಘೋಷಿಸಿದೆ. ಈಗಾಗಲೇ 10,000 ಚಾಲಕರು ಒಲಾ ಜೊತೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಮಹಿಳಾ ಸುರಕ್ಷತೆ: ಓಲಾ, ಉಬರ್ ಸೇರಿದಂತೆ ಎಲ್ಲಾ ಕ್ಯಾಬ್‌ಗಳಿಗೆ ಹೊಸ ರೂಲ್!

ದಿನದ 24 ಗಂಟೆ ಒಲಾ ಸೇವೆ ಲಭ್ಯವಿರಲಿದೆ. ಪ್ರಯಾಣಿಕರಿಗೆ ದಿನದ 27 ಗಂಟೆಯೂ ಸಹಾಯ ವಾಣಿ ಸೇವೆ ಕೂಡ ಇರಲಿದೆ. ಇನ್ನು ಆ್ಯಪ್‌ನಲ್ಲಿ ತುರ್ತು ಬಟನ್ ಸೇರಿಸಲಾಗಿದೆ. ಪ್ರಯಾಣಿಕರಿಗೆ ಎಲ್ಲಾ ಅನುಕೂಲತೆ, ಆರಾಮದಾಯಕ ಪ್ರಯಾಣ ಹಾಗೂ ಸುರಕ್ಷತೆ ನೀಡಲಿದೆ ಎಂದು ಓಲಾ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ: ಓಲಾದಿಂದಲೂ ಸೆಲ್ಫ್ ಡ್ರೈವ್‌ ಕಾರು ಸೇವೆ

ಬರ್ಮಿಂಗ್‌ಹ್ಯಾಮ್, ಕವೆಂಟ್ರಿ ಹಾಗೂ ವಾರ್ವಿಕ ನಗರಗಳಲ್ಲಿ ಓಲಾ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಂಡನ್ ಸೇವೆ ಆರಂಭದೊಂದಿಗೆ ಓಲಾ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಒಟ್ಟು 250ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.