Asianet Suvarna News Asianet Suvarna News

ಸುಲಭ ಚಾರ್ಜಿಂಗ್, ABSಬ್ರೇಕ್, ನೂತನ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ-ಬೆಲೆ ಎಷ್ಟು?

ನವದೆಹಲಿ ಮೂಲದ ಒಕಿನಾವ ರಿಡ್ಜ್ ಸ್ಕೂಟರ್ ಬಿಡುಗಡೆಯಾಗಿದೆ. ಮೊಬೈಲ್ ರೀತಿ ಸುಲಭ ಚಾರ್ಜಿಂಗ್, ಒಂದು ಬಾರಿ ಚಾರ್ಜ್‌ಗೆ 120 ಕೀಮಿ ಪ್ರಯಾಣ,  ABSಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.

Okinawa Ridge With Lithium Ion Battery Launched In India
Author
Bengaluru, First Published Oct 11, 2018, 12:43 PM IST

ನವದೆಹಲಿ(ಅ.11): ಗುರುಗಾಂವ್ ಮೂಲದ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಒಕಿನಾವ ನೂತನ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಿದೆ. ಒಕಿನಾವ್ ರಿಡ್ಜ್  ಪ್ಲಸ್ ಎಲೆಕ್ಟ್ರಿಕಲ್ ಬೈಕ್ ಇದೀಗ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 

Okinawa Ridge With Lithium Ion Battery Launched In India

ಲೀಥಿಯಂ ಹಾಗೂ ಇಯಾನ್ ಬ್ಯಾಟರಿ ಹೊಂದಿರುವ ಈ ಒಕಿನಾವ ರಿಡ್ಜ್ ಪ್ಲಸ್ ಸ್ಕೂಟರ್ ಬೆಲೆ 64,999 ರೂಪಾಯಿ(ಎಕ್ಸ್ ಶೋ ರೂಂ, ದಹೆಲಿ).  800 ವ್ಯಾಟ್, BLDC ವಾಟರ್ ಫ್ರೂಫ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 120 ಕೀಮಿ ಕ್ರಮಿಸಲಿದೆ.

Okinawa Ridge With Lithium Ion Battery Launched In India

ಒಕಿನಾವ ಸ್ಟಾಂಡರ್ಸ್ ಸ್ಕೂಟರ್ ಬೇಸ್ ಬೆಲೆಗಿಂತ 21,00 ರೂಪಾಯಿ ಆಧಿಕವಾಗಿದೆ.  ವಿಶೇಷ ಅಂದರೆ ಈ ಸ್ಕೂಟರ್ ಬ್ಯಾಟರಿಯನ್ನ ಹೊರ ತೆಗೆದು ಕೂಡ ಚಾರ್ಜ್ ಮಾಡಬಹುದು. ಆಫೀಸ್‌ನಲ್ಲಿ ಅಥವಾ ಮನೆ ಒಳಗಡೆ ಸ್ಕೂಟರ್ ಬ್ಯಾಟರಿ ಕೊಂಡೊಯ್ದು ಚಾರ್ಜ್ ಮಾಡಬಹುದಾಗಿದೆ.

Okinawa Ridge With Lithium Ion Battery Launched In India

ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್ ಸ್ಕೂಟರ್‌ಗೆ ಹೋಲಿಸಿದರೆ ಒಕಿನಾವ ಆಕರ್ಷಕ ವಿನ್ಯಾಸ ಹೊಂದಿದೆ. ಎರಡು ಬಣ್ಣಗಳಲ್ಲಿ ಈ ಎಲೆಕ್ಟ್ರಿಕಲ್ ಸ್ಕೂಟರ್ ಲಭ್ಯವಿದೆ. ಇದರ ಗರಿಷ್ಠ ವೇಗ 55 ಕೀಮಿ ಪ್ರತಿ ಗಂಟೆಗೆ. 

Okinawa Ridge With Lithium Ion Battery Launched In India

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್(ABS) ಹೊಂದಿದೆ. ಕಳ್ಳತನ ಅಲರಾಮ್, ಕೀ ಲೆಸ್ ಎಂಟ್ರಿ, ಸೆಂಟ್ರಲ್ ಲಾಂಕಿಂಗ್ ಸೌಲಭ್ಯ ಹೊಂದಿದೆ. 

Okinawa Ridge With Lithium Ion Battery Launched In India

Follow Us:
Download App:
  • android
  • ios