ನವದೆಹಲಿ[ಜು.16]: ಹೆಲ್ಮೆಟ್‌ ಹಾಕಿಕೊಳ್ರಪ್ಪಾ ಅಂಥ ಎಷ್ಟು ಸಾರಿ ಹೇಳಿದರೂ ಕೇಳಿದರೂ ಬೈಕ್‌ ಸವಾರರಿಗೆ ಪಾಠ ಕಲಿಸಲು ಉತ್ತರಪ್ರದೇಶದ ಅಧಿಕಾರಿಗಳು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

ಇನ್ನು ಮುಂದೆ ಹೆಲ್ಮೆಟ್‌ ಹಾಕಿಕೊಳ್ಳದ ಬೈಕ್‌ ಸವಾರರಿಗೆ ಲಖನೌ- ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಎಷ್ಟುಕೇಳಿದರೂ ಕೇಳೋದಿಲ್ಲ. ಆದರೆ ನಮಗೆ ಜನರ ಪ್ರಾಣ ಮುಖ್ಯ. ಹೀಗಾಗಿ ಹೆಲ್ಮೆಟ್‌ ಇರದಿದ್ರೆ ಎಕ್ಸ್‌ಪ್ರೆಸ್‌ವೇ ಪ್ರವೇಶವೂ ಕೊಡಲಲ್ಲ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಈ ಹೆದ್ದಾರಿ ಒಟ್ಟು 302 ಕಿ.ಮೀ ಉದ್ದವಿದೆ.