ಭಾರತದಲ್ಲಿ ಓಟ ನಿಲ್ಲಿಸಿದ ನಿಸಾನ್ ಟೆರಾನೋ-ಕಾರಣವೇನು?
ನಿಸಾನ್ ಕಾರು ಕಂಪನಿಯ ಟೆರಾನೋ ಕಾರು ಭಾರತದಲ್ಲಿ ತನ್ನ ಓಟ ನಿಲ್ಲಿಸಿದೆ. ರೆನಾಲ್ಟ್ ಡಸ್ಟರ್‌ಗೆ ಪೈಪೋಟಿ ನೀಡಲು ರಸ್ತೆಗಿಳಿದ ಕಾರು ದಿಢೀರ್ ನಿರ್ಮಾಣ ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ.
ನವದೆಹಲಿ(ಅ.10): ಕಳೆದ 5 ವರ್ಷಗಳ ಹಿಂದೆ ಭಾರತದ ರಸ್ತೆಗಿಳಿದ ನಿಸಾನ್ ಟೆರಾನೋ SUV ಕಾರು ಇದೀಗ ಭಾರತದಲ್ಲಿ ರಸ್ತೆಯಲ್ಲಿ ಓಟ ನಿಲ್ಲಿಸಿದೆ. ರೆನಾಲ್ಟ್ ಡಸ್ಟರ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸಿದ ಟೆರಾನೋ ಇನ್ಮುಂದೆ ಭಾರತದಲ್ಲಿ ಲಭ್ಯವಿಲ್ಲ.
ಮಾರಾಟಾ ಹಾಗೂ ಬೇಡಿಕೆ ಇಲ್ಲದ ಕಾರಣಕ್ಕಾಗಿ ಭಾರತದಲ್ಲಿ ನಿಸಾನ್ ಟೆರಾನೋ ಕಾರಿನ ನಿರ್ಮಾಣ ಸ್ಥಗಿತಗೊಳಿಸಿದೆ. 2017ರಲ್ಲಿ ಟೆರಾನೋ ಫೇಸ್‌ಲಿಫ್ಟ್ ಬಿಡುಗಡೆ ಮಾಡಿತ್ತು. ಹೆಚ್ಚುವರಿ ಫೀಚರ್ಸ್‌ಗಳನ್ನೂ ನೀಡಿತ್ತು. ಆದರೆ ಮಾರಾಟದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.
ಮಾರಾಟದಲ್ಲಿಗಣನೀಯ ಕುಸಿತ ಕಂಡಿರುವ ಕಾರಣ ನಿಸಾನ್ ಟೆರಾನೋ ಕಾರು ಭಾರತದಲ್ಲಿ ಇನ್ಮುಂದೆ ಲಭ್ಯವಿಲ್ಲ. ಶೀಘ್ರದಲ್ಲಿ ನಿಸಾನ್ ಕಿಕ್ಸ್ SUV ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ 10 ರಿಂದ 14 ಲಕ್ಷ (ಎಕ್ಸ್ ಶೋ ರೂಂ) ಮೌಲ್ಯದ ಟೆರಾನೋ ಕಾರುನ್ನ ಸ್ಥಗಿತಗೊಳಿಸಲಾಗಿದೆ.