ಬೆಂಗಳೂರು(ನ.04): ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಕಾರುಗಳು ಯಶಸ್ವಿಯಾಗಿದೆ. ಅದರಲ್ಲೂ ಸಣ್ಣ ಕಾರಾದ ಮಾರುತಿ ಆಲ್ಟೋ ಹೊಸ ಸಂಚಲನ ಮೂಡಿಸಿದೆ. ಇದೀಗ ನೆಕ್ಸ್ಟ್ ಜನರೇಶನ್ ಆಲ್ಟೋ ಕಾರು ತಯಾರಿಸಲು ಮಾರುತಿ ಮುಂದಾಗಿದೆ.

ನೆಕ್ಸ್ಟ್ ಜನರೇಶನ್ ಆಲ್ಟೋ ಕಾರು ಹಲವು ವಿಶೇಷತೆಯಿಂದ ಕೂಡಿದೆ. ಇದು 660 ಸಿಸಿ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಹೀಗಾಗಿ ಈ ಕಾರು ಬರೋಬ್ಬರಿ 30 ಕಿ.ಮೀ ಮೈಲೇಜ್ ನೀಡಲಿದೆ. ಇಷ್ಟು ಮೈಲೇಜ್ ನೀಡಬಲ್ಲ ಯಾವುದೇ ಕಾರು ಸದ್ಯ ಮಾರುಕಟ್ಟೆಯಲ್ಲಿಲ್ಲ.

ಸದ್ಯ ಇರೋ ಆಲ್ಟೋ ಕಾರು 24 ಕಿ.ಮೀ ಮೈಲೇಜ್ ಪ್ರತಿ ಲೀಟರ್‌ಗೆ ನೀಡುತ್ತಿದೆ. ಇದೆ ಗರಿಷ್ಠವಾಗಿತ್ತು. ಇದೀಗ ಈ ಎಲ್ಲಾ ದಾಖಲೆಗಳನ್ನ ಅಳಿಸಿ ಹಾಕಲು ಮಾರುತಿ ಮುಂದಾಗಿದೆ. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ಈ ಕಾರು ಬಿಎಸ್ 6 ಎಂಜಿನ್. ಹೀಗಾಗಿ ಮಾಲಿನ್ಯ ರಹಿತವಾಗಿರಲಿದೆ.

2020ರ ವೇಳೆಗೆ ನೆಕ್ಸ್ಟ್ ಜೆನ್ ಆಲ್ಟೋ ಕಾರು ಬಿಡುಗಡೆಯಾಗಲಿದೆ. ಸದ್ಯ ಆಲ್ಟೋ ಕಾರಿನ ಬೆಲೆ 2.5 ಲಕ್ಷ ರೂಪಾಯಿಂದ ಪ್ರಾರಂಭವಾಗಲಿದೆ. ಹೀಗಾಗಿ ನೂತನ ಕಾರಿನ ಬೆಲೆಯೂ ಹೆಚ್ಚಿನ ವ್ಯತ್ಯಾಸವಾಗೋ ಸಾಧ್ಯತೆ ಇಲ್ಲ. ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಕಂಗಾಲಾಗಿರುವ ಕಾರು ಮಾಲೀಕರಿಗೆ ಇದೀಗ ನೂತನ ಆಲ್ಟೋ ಹೊಸ ಆಶಾಕಿರಣವಾಗಲಿದೆ.