ಮಾರುತಿ ಸುಜುಕಿ ಎರ್ಟಿಗಾ ಕಾರು ಬಿಡುಗಡೆ-ಬೆಲೆ ಎಷ್ಟು?
ಮಾರುತಿ ಸುಜುಕಿ ನೂತನ ಎರ್ಟಿಗಾ ಕಾರು ಬಿಡುಗಡೆಯಾಗಿದೆ. ಈಗಾಲೇ ಬುಕಿಂಗ್ ಆರಂಭಿಸಿರುವ ಎರ್ಟಿಗಾ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿರುವ ಎರ್ಟಿಗಾ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮುಂಬೈ(ನ.21): ಮಾರುತಿ ಸುಜುಕಿ ಸಂಸ್ಥೆಯ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರು ಬಿಡುಗಡೆಯಾಗಿದೆ. ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ವೇರಿಯೆಂಟ್‌ಗಳಲ್ಲಿ ನೂತನ ಮಾರುತಿ ಎರ್ಟಿಗಾ ಬಿಡುಗಡೆಯಾಗಿದೆ. ನೂತನ ಎರ್ಟಿಗಾ ಕಾರಿನ ಬೆಲೆ 7.44 ಲಕ್ಷ ರೂಪಾಯಿಯಿಂದ 10.90 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ. ಎಎಂಟಿ ವೇರಿಯೆಂಟ್‌ಗಳಲ್ಲಿ Vxi ಹಾಗೂ Zxi ವೇರಿಯೆಂಟ್ ಲಭ್ಯವಿದೆ.
ನೂತನ ಎರ್ಟಿಗಾ ಕಾರು 4,395mm ಉದ್ದ, 1,735mm ಅಗಲ ಹಾಗೂ 1,690mm ಎತ್ತರ ಹೊಂದಿದೆ. 2,740mm ವೀಲ್ಹ್ ಬೇಸ್ ಹಾಗೂ 45 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಇನ್ನು 5 ಬಣ್ಣಗಳಲ್ಲಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸಿದೆ.
1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 103 bhp ಪೀಕ್ ಪವರ್, 38nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಇದಕ್ಕಿದೆ. ಇನ್ನು ಪೆಟ್ರೋಲ್ ಎಂಜಿನ್ SHVS ಮೈಲ್ಡ್ ಹೈಬ್ರಿಡ್ ಕಾರೂ ಲಭ್ಯವಿದೆ.
ಡೀಸೆಲ್ ಎಂಜಿನ್ ಎರ್ಟಿಗಾ 1.3 ಲೀಟರ್ DDIS 200 ಮೋಟಾರ್, 89bhp ಪೀಕ್ ಪವರ್ ಹಾಗೂ 200nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಡೀಸೆಲ್ ಎಂಜಿನ್ ಕಾರು ಪ್ರತಿ ಲೀಟರ್‌ಗೆ 25 ಲೀಟರ್ ಮೈಲೇಜ್ ನೀಡಲಿದೆ.