ಉತ್ಪಾದನೆ ಆರಂಭಿಸಿದ ಮಾರುತಿ ಸುಜುಕಿ; ಶೀಘ್ರದಲ್ಲೇ S ಪ್ರೆಸ್ಸೋ CNG ಕಾರು ಬಿಡುಗಡೆ!

ಲಾಕ್‌ಡೌನ್ ಸಡಿಲಿಕೆ ಕಾರಣ ಆಟೋಮೊಬೈಲ್ ಕ್ಷೇತ್ರ ಕಾರ್ಯರಂಭಗೊಂಡಿದೆ. ಇದೀಗ ಮಾರುತಿ ಸುಜುಕಿ ಉತ್ಪಾದನೆ ಆರಂಭಗೊಂಡಿದೆ. ಹೀಗಾಗಿ ಶೀಘ್ರದಲ್ಲೇ ಮಾರುತಿ ಸುಜುಕಿ S ಪ್ರೆಸ್ಸೋ CNG ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.

Maruti suzuki set to launch s presso cng version car

ನವದೆಹಲಿ(ಮೇ.26): ಮೈಕ್ರೋ SUV ಕಾರಾದ  S ಪ್ರೆಸ್ಸೋ  ಬಿಡುಗಡೆ ಮಾಡಿ ಯಶಸ್ಸು ಸಾಧಿಸಿರುವ ಮಾರುತಿ ಸುಜುಕಿ ಇದೀಗ CNG ವೇರಿಯೆಂಟ್ ಬಿಡುಗಡೆ ಮಾಡುತ್ತಿದೆ. ಲಾಕ್‌ಡೌನ್ ಸಡಿಲಿಕೆ ಕಾರಣ ಮಾರುತಿ ಸುಜುಕಿ ಉತ್ಪಾದನಾ ಘಟಕ ಆರಂಭಗೊಂಡಿದೆ. ಹೀಗಾಗಿ ಸ್ಥಗಿತಗೊಂಡಿದ್ದ ಮಾರುತಿ ಕಾರುಗಳ ಬಿಡುಗಡೆ ಚುರುಕುಗೊಂಡಿದೆ. ಇದೀಗ S ಪ್ರೆಸ್ಸೋ CNG ಕಾರು ಮಾರುಕಟ್ಟೆ ಪ್ರವೇಶಿಲು ಸಜ್ಜಾಗಿದೆ.

Maruti suzuki set to launch s presso cng version car

ಮಾರುತಿ S ಪ್ರೆಸ್ಸೋ BS6 ಕಾರಿನ ಬೆಲೆ 4.07 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದೀಗ S ಪ್ರೆಸ್ಸೋ CNG ವಾಹನ ಬೆಲೆ ಕೊಂಚ ಬದಲಾಗಲಿದೆ. LXi, LXi(O), VXi ಹಾಗೂ VXi(O) ವೇರಿಯೆಂಟ್‌ಗಳಲ್ಲಿ ನೂತನ ಕಾರು ಲಭ್ಯವಿದೆ. ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,  ಆ್ಯಪಲ್ ಕಾರ್ ಪ್ಲೇ ಸಪೋರ್ಟ್ ಮಾಡಲಿದೆ.

Maruti suzuki set to launch s presso cng version car

ನೂತನ ಕಾರು 1 ಲೀಟರ್ ಕೆ ಸೀರಿಸ್ ಎಂಜಿನ್ ಹೊಂದಿದೆ.  S ಪ್ರೆಸ್ಸೋ  ಪೆಟ್ರೋಲ್ ಕಾರಿನಲ್ಲೂ ಇದೇ ಎಂಜಿನ್ ಬಳಸಲಾಗಿದೆ.  ಪೆಟ್ರೋಲ್ ವೆರಿಯೆಂಟ್ ಕಾರಿನಲ್ಲಿ 5 ಸ್ಪೀಡ್ ಹಾಗೂ AMT ಟ್ಸಾನ್ಸ್‌ಮಿಶನ್ ಹೊಂದಿದೆ. ನೂತನ ಕಾರು ಪೆಟ್ರೋಲ್ ಹಾಗೂ  CNG ವರ್ಶನ್ ಆಗಿರಲಿದೆ. 
 

Latest Videos
Follow Us:
Download App:
  • android
  • ios