ಮಾರುತಿ ಎಲೆಕ್ಟ್ರಿಕಲ್ ಕಾರು ಫೀಲ್ಡ್ ಟೆಸ್ಟ್ ಆರಂಭ-ಶೀಘ್ರದಲ್ಲೇ ಬಿಡುಗಡೆ!

ಮಾರುತಿ ಸುಜುಕಿ ನೂತನ ಎಲೆಕ್ಟ್ರಿಕಲ್ ಕಾರಿನ ರೋಡ್ ಟೆಸ್ಟ್ ಆರಂಭಗೊಂಡಿದೆ. 50 ಎಲೆಕ್ಟ್ರಿಕಲ್ ಕಾರುಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಭಾರತದಲ್ಲೇ ತಯಾರಾಗಿರುವ ಮಾರುತಿ ಸುಜುಕಿ ಎಲೆಕ್ಟ್ರಿಕಲ್ ಕಾರಿನ ವಿಶೇಷತೆ ಏನು? ಇಲ್ಲಿದೆ.

Maruti Suzuki flags off Electric Vehicles for field testing

ನವದೆಹಲಿ(ಅ.10): ಭವಿಷ್ಯ ಕಾರು ಎಂದೇ ಬಿಂಬಿತವಾಗಿರು ಎಲೆಕ್ಟ್ರಿಕಲ್ ಕಾರು ನಿರ್ಮಾಣಕ್ಕೆ ಭಾರತದಲ್ಲಿ ಹೆಚ್ಚು ಉತ್ತೇಜನ ಸಿಗುತ್ತಿದೆ. ಇದೀಗ ಮಾರುತಿ ಸುಜುಕಿ ಗುರುಗಾಂವ್ ಘಟಕದಲ್ಲಿ ನಿರ್ಮಾಣವಾದ ಎಲೆಕ್ಟ್ರಿಕಲ್ ಕಾರು ರೋಡ್ ಟೆಸ್ಟ್‌ಗೆ ಚಾಲನೆ ನೀಡಲಾಗಿದೆ.

ಭಾರತೀಯ ರಸ್ತೆ, ವಾತಾವಾರಣ ಸೇರಿದಂತೆ ಹಲವು ಪರೀಕ್ಷೆಗಳಿಗೆ ಮಾರುತಿ ಸುಜುಕಿ ಎಲೆಕ್ಟ್ರಿಕಲ್ ಕಾರು ಒಳಪಡಲಿದೆ. 50 ಎಲೆಕ್ಟ್ರಿಕಲ್ ಕಾರುಗಳನ್ನ ರೋಡ್ ಟೆಸ್ಟ್‌ಗಾಗಿ ಬಿಡಲಾಗಿದೆ.

2020ರ ವೇಳೆ ಮಾರುತಿ ಸುಜುಕಿ ಎಲೆಕ್ಟ್ರಿಕಲ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.  ಕಳೆದ ಸೆಪ್ಟಂಬರ್‌ನಲ್ಲಿ ನಡೆದ MOVE ಸಮ್ಮಿಟ್‌ನಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕಲ್ ಕಾರು ಪರಿಚಯಿಸಿತ್ತು.  

Latest Videos
Follow Us:
Download App:
  • android
  • ios