FY 2018-19: ಬಹು ಬೇಡಿಕೆಯೆ ಮಾರುತಿ ಸೆಲೆರಿಯೋ ಕಾರು ಹೊಸ ದಾಖಲೆ!
ಮಾರುತಿ ಸುಜುಕಿ ಸೆಲೆರಿಯೋ ಕಾರು ಬಹುಜನರ ಕಾರು ಕನಸು ನನಸು ಮಾಡಿದೆ. ಫ್ಯಾಮಿಲಿ, ಆಫೀಸ್, ನಗರದ ಟ್ರಾಫಿಕ್ ಸೇರಿದಂತೆ ಎಲ್ಲಾ ಕಂಡೀಷನ್‌ಗೆ ಸೆಲೆರಿಯೋ ಕಾರು ಸೂಕ್ತ. ಇದೀಗ ಈ ಕಾರು ದಾಖಲೆ ಬರೆದಿದೆ.
ನವದೆಹಲಿ(ಏ.12): ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಸೆಲೆರಿಯೋ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಕಡಿಮೆ ಬೆಲೆಗೆ ಸಿಗೋ ಫ್ಯಾಮಿಲಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 2019-19ರ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಸೆಲೆರಿಯೋ ಕಾರು ದಾಖಲೆ ಬರೆದಿದೆ. ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಕಾರುಗಳು ಮಾರಾಟವಾಗಿದೆ.
ಇದನ್ನೂ ಓದಿ: ಮಾರುತಿ ಅಲ್ಟೋ K10 ಕಾರು ಬಿಡುಗಡೆ- ಹೆಚ್ಚು ಸುರಕ್ಷತೆ, ಕಡಿಮೆ ಬೆಲೆ!
ಆರ್ಥಿಕ ವರ್ಷ 2018-19ರಲ್ಲಿ ಮಾರುತಿ ಸೆಲೆರಿಯೋ ಕಾರು ಮಾರಾಟದಲ್ಲಿ ಶೇಕಡ 10 ರಷ್ಟು ಏರಿಕೆ ಕಂಡಿದೆ. ಒಟ್ಟು 1,03,734 ಕಾರುಗಳು ಮಾರಾಟವಾಗಿದೆ. ಈ ಮೂಲಕ ಗರಿಷ್ಠ ಮಾರಾಟವಾದ ಸಣ್ಣ ಕಾರು ಅನ್ನೋ ದಾಖಲೆ ಬರೆದಿದೆ. ಸೆಲೆರಿಯೋ AGS ವೇರಿಯೆಂಟ್ ಕಾರುಗಳು ಶೇಕಡಾ 31 ರಷ್ಟು ಕಾರು ಮಾರಾಟವಾದರೆ, ZXI ವೇರಿಯೆಂಟ್ ಕಾರು ಶೇಕಡಾ 52 ರಷ್ಟು ಮಾರಾಟವಾಗಿದೆ. CNG ವೇರಿಯೆಂಟ್ 20 ಶೇಕಡಾ ಕಾರು ಮಾರಾಟವಾಗಿದೆ.
ಇದನ್ನೂ ಓದಿ: ಇಕೋ ಸ್ಪೋರ್ಟ್, ಮಹೀಂದ್ರ ಹಿಂದಿಕ್ಕಿದ ಟಾಟಾ ನೆಕ್ಸಾನ್!
ನೂತನ ಸುಜುಕಿ ಸೆಲೆರಿಯೋ ಕಾರಿನಲ್ಲಿ ಗರಿಷ್ಠ ಸುರಕ್ಷತಾ ಫೀಚರ್ಸ್ ಅಳವಡಿಸಲಾಗಿದೆ. ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), ಡ್ರೈವರ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮರ, ಡ್ರೈವರ್ ಹಾಗೂ ಕೋ ಡ್ರೈವರ್ ಸೀಟ್ ಬೆಲ್ಟ್ ಅಲರ್ಟ್, ಸ್ಪೀಡ್ ಅಲರ್ಟ್ ಫೀಚರ್ಸ್ ಅಳವಡಿಸಲಾಗಿದೆ. ಸೆಲೆರಿಯೋ ಕಾರಿನ ಬೆಲೆ 4.78 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ.