ಬೆಂಗಳೂರು(ಡಿ.9): ಸೌತ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ. ಇದೀಗ ಶಿಘ್ರದಲ್ಲೇ SUV ಕಾರು ಬಿಡುಗಡೆ ಮುಂದಾಗಿದೆ. ಮಾರುತಿ ಬ್ರಿಜಾ, ಫೋರ್ಟ್ ಇಕೋ ಸ್ಪೋರ್ಟ್, ಸೇರಿದಂತೆ ಭಾರತದ ಮಿಡ್ ಸೆಗ್ಮೆಂಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ತನ್ನ ಎಸ್‌ಪಿ ಕಾನ್ಸಪ್ಟ್ SUV ಕಾರು ಬಿಡುಗಡೆ ಮಾಡಲಿದೆ.

2019ರ ಮೇ ತಿಂಗಳಲ್ಲಿ ಭಾರತದಲ್ಲಿ ಕಿಯಾ SUV ಕಾರು ಬಿಡುಗಡೆಯಾಗಲಿದೆ. ನೂತನ ಕಿಯಾ SUV ಕಾರಿಗೆ ಟಸ್ಕರ್ ಎಂದು ಹೆಸರಿಡಲು ನಿರ್ಧರಿಸಿದೆ.  ಈಗಾಗಲೇ ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನ ಕಿಯಾ SUV ಕಾರು ಯಶಸ್ವಿಯಾಗಿ ಪೂರೈಸಿದೆ.

ಸಹೋದರ ಸಂಸ್ಥೆ ಹ್ಯುಂಡೈ ಕ್ರೆಟಾ ಕಾರಿನಿಂದ ಸ್ಪೂರ್ತಿ ಪಡೆದು ನೂತನ ಕಿಯಾ ಟಸ್ಕರ್ SUV ಕಾರು ತಯಾರಿಸಲಾಗಿದೆ. ಎಮಿಶನ್ ನಿಯಮ ಪಾಲಿಸಿರುವ ಕಿಯಾ BS-VI ಸ್ಟೇಜ್ ಹೊಂದಿದೆ.  1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

ನೂತನ ಕಿಯಾ ಟಸ್ಕರ್ SUV ಕಾರು 115 ps ಪವರ್ ಹಾಗೂ 250nm ಟಾರ್ಕ್ ಉತ್ಪಾದಿಸಲಿದೆ.  ಆದರೆ ಇದರ ಬೆಲೆ ಬಹಿರಂಗಪಡಿಸಿಲ್ಲ. ಆದರೆ ಬ್ರಿಜಾ ಹಾಗೂ ಇಕೋಸ್ಪೋರ್ಟ್ ಕಾರುಗಳಿಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗ್ತಿದೆ.