ನೂತನ ಮಹೀಂದ್ರ ಬೊಲೆರೊ ಲಾಂಚ್-ಗ್ರಾಹರಿಗೆ ಬಂಪರ್ ಆಫರ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 5:01 PM IST
Mahindra Bolero Pick Up launched in India with exciting offers
Highlights

ಮಹೀಂದ್ರ ಮೋಟಾರ್ಸ್ ನೂತನ ಬೊಲೆರೊ ಪಿಕ್ ಅಪ್ ಜೀಪ್ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಬೊಲೆರೊ ಪಿಕ್ ಅಪ್ ಖರೀದಿಸೋ ಗ್ರಾಹಕರಿಗೆ ಹಬ್ಬದ ಪ್ರಯುಕ್ತ ಬಂಪರ್ ಆಫರ್ ಘೋಷಿಸಿದೆ. 
 

ಬೆಂಗಳೂರು(ಅ.11):  ಭಾರತದಲ್ಲಿ ಮಹೀಂದ್ರ ಬೊಲೆರೊ ಪಿಕ್ ಅಪ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇದೀದ ಮಹೀಂದ್ರ ನೂತನ ಬೊಲೆರೊ ಪಿಕ್ ಅಪ್ ಜೀಪ್ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ನೂತನ ಬೊಲೆರೊ ಖರೀದಿಸೋ ಗ್ರಾಹಕರಿಗೆ ಬಂಪರ ಆಫರ್ ನೀಡಿದೆ.

ಹಬ್ಬದ ಪ್ರಯುಕ್ತ ಮಹೀಂದ್ರ ಬೊಲೆರೊ 1.3ಟಿ ವೇರಿಯೆಂಟ್ ಬೆಲೆ 6.66 ಲಕ್ಷ ರೂಪಾಯಿ ಹಾಗೂ 1.7ಟಿ ವೇರಿಯೆಂಟ್ 6.68 ಲಕ್ಷ(ಎಕ್ಸ್ ಶೋ ರೂಂ)ರೂಪಾಯಿಂದ ಆರಂಭಗೊಳ್ಳಲಿದೆ. ಎಲ್ಲಾ ವೇರಿಯೆಂಟ್ ಜೀಪ್ 2.5 ಲೀಟರ್ ಡೀಸೆಲ್ ಇಂಜಿನ್ ಹೊಂದಿದೆ.

ಹೊರ ಹಾಗೂ ಒಳವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಹಳೇ ಬೊಲೆರೊಗಿಂತ ನೂತನ ಬೊಲೆರೊ ಹೆಚ್ಚು ಆಕರ್ಷವಾಗಿದೆ. ಡಬಲ್ ಬೇರಿಂಗ್ ಆಕ್ಸಲ್, 9 ಲೀಫ್ ಸ್ಪ್ರಿಂಗ್ ಸಸ್ಪೆನ್ಶನ್, 15 ಇಂಚಿನ ಟೈಯರ್ ಹೊಂದಿದೆ. ಇಷ್ಟೇ ಅಲ್ಲ 1 ಲಕ್ಷ ಕೀಮಿ ವರೆಗೂ ಯಾವುದೇ ಸರ್ವೀಸ್ ಇರುವುದಿಲ್ಲ.

ಪ್ರತೀ ಲೀಟರ್‌ಗೆ 14 ಲೀಟರ್ ಮೈಲೇಜ್ ನೀಡಲಿದೆ ಎಂದು ಮಹೀಂದ್ರ ಹೇಳಿದೆ. ಇಷ್ಟೇ ಅಲ್ಲ ನೂತನ ಬೊಲೆರೊ ಖರೀದಿಸೋ ಗ್ರಾಹಕರಿಗೆ 2 ವರ್ಷ ಉಚಿತ ಮೈಂಟೈನೆನ್ಸ್ ಸರ್ವೀಸ್ ಹಾಗೂ 4 ವರ್ಷಗಳ ಬಳಿಕ ಬೈ ಬ್ಯಾಕ್ ಗ್ಯಾರೆಂಟಿ ಕೂಡ ನೀಡುತ್ತಿದೆ.

loader