ಮೇಡ್ ಇನ್ ಇಂಡಿಯಾ; ದುಬಾರಿ ಲೆಕ್ಸಾಸ್ ಕಾರು ಬಿಡುಗಡೆ!

 ಜಪಾನ್ ಆಟೋಮೊಬೈಲ್ ಕಂಪನಿ ಲೆಕ್ಸಾಸ್ ಭಾರತದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದೆ. ಇಷ್ಟು ದಿನ ಬಿಡಿ ಭಾಗಗಳನ್ನು ಆಮದು ಮಾಡಿ ಭಾರತದಲ್ಲಿ ಜೋಡಣೆ ಮಾಡಿ ಲೆಕ್ಸಾಸ್ ಕಾರು ವಿತರಿಸಲಾಗುತ್ತಿತ್ತು. ಇದೀಗ ಭಾರತದಲ್ಲೇ ನಿರ್ಮಾಣವಾದ ಲೆಕ್ಸಾಸ್ ಕಾರು ಬಿಡುಗಡೆಯಾಗಿದೆ. ಕಾರಿನ ಬಲೆ ಹಾಗೂ ವಿಶೇಷತೆ ಇಲ್ಲಿದೆ. 

Made In India luxury lexus car launched

ನವದೆಹಲಿ(ಜ.31): ಟೊಯೊಟಾ ಮೋಟಾರ್ಸ್ ಮಾಲೀಕತ್ವದ ದುಬಾರಿ ಲೆಕ್ಸಾಸ್ ಕಂಪನಿ ES 300h ಸೆಡಾನ್,NX 300h ಕ್ರಾಸ್ ಓವರ್ ಹಾಗೂ LC 500h ಗ್ರ್ಯಾಂಡ್ ಟೌರರ್ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲೇ ಉತ್ಪಾದನೆಯಾಗಿರುವ  ಲೆಕ್ಸಾಸ್ ES 300h ಕಾರು ಫೆಬ್ರವರಿಯಿಂದ ಮಾರಾಟಕ್ಕೆ ಲಭ್ಯವಿದೆ. 

ಇದನ್ನೂ ಓದಿ: HDK ರೇಂಜ್ ರೋವರ್ ಬದಲು ಲೆಕ್ಸಸ್ ಕಾರು ಬಳಕೆ- ಇಲ್ಲಿದೆ 3 ಕೋಟಿ ಕಾರಿನ ವಿಶೇಷತೆ?

ಲೆಕ್ಸಾಸ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
ಲೆಕ್ಸಾಸ್ ES 300h Exquisite = 51,90,000 ರೂ
ಲೆಕ್ಸಾಸ್ ES 300h Luxury = 56,95,000 ರೂ
ಲೆಕ್ಸಾಸ್ NX 300h Exquisite = 54,90,000
ಲೆಕ್ಸಾಸ್ NX 300h Luxury = 59,90,000
ಲೆಕ್ಸಾಸ್NX 300h F Sport = 60,60,000
ಲೆಕ್ಸಾಸ್ LC 500h = 1,96,00,000

NX 300h ಕಾರು 2.5-ಲೀಟರ್, 4 ಸಿಲಿಂಡರ್ ಹೊಂದಿದ್ದು, 194bhp ಪವರ್ ಹಾಗೂ 210Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  ES 300h ಕಾರು 2.5- ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಸೆಡಾನ್ ಕಾರು  218bhp  ಪವರ್ ಹಾಗೂ  221Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಹುರಾಕ್ಯಾನ್ Evo RWD ಬಿಡುಗಡೆ, ಬೆಂಗ್ಳೂರಲ್ಲಿ ಸಿಗಲಿದೆ ಕಾರು!

ಲೆಕ್ಸಾಸ್ LC 500h ಕಾರು ಭಾರತದಲ್ಲಿ  3.5-ಲೀಟರ್, V6 eಎಂಜಿನ್ ಹೊಂದಿದೆ. ಇತರೆಡೆ  5.0-ಲೀಟರ್ NA V8 ಎಂಜಿನ್ ಹೊಂದಿದೆ. ಲೆಕ್ಸಾಸ್ ಕಾರು ಔಟ್‌ಲೆಟ್ ಸದ್ಯ ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿದೆ. ಶೀಘ್ರದಲ್ಲೇ  ಚಂಡಿಗಢ, ಹೈದರಾಬಾದ್, ಕೊಚ್ಚಿ ಹಾಗೂ ಚೆನ್ನೈನಲ್ಲಿ ಔಟ್‌ಲೆಟ್ ಆರಂಭವಾಗಲಿದೆ.
 

Latest Videos
Follow Us:
Download App:
  • android
  • ios