Asianet Suvarna News Asianet Suvarna News

ಮೇಡ್ ಇನ್ ಇಂಡಿಯಾ ಸಿಟ್ರೊಯೆನ್ C5 ಏರ್‌ಕ್ರಾಸ್ ಕಾರು ಉತ್ಪಾದನೆ ಆರಂಭ!

ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಿಂದ ಇದೀಗ ಹಲವು ವಿದೇಶಿ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಆರಂಭಿಸಿದೆ. ಇದೀಗ ಫ್ರೆಂಚ್ ಆಟೋಮೇಕರ್ ಗ್ರೂಪ್ PSA ಮೇಡ್ ಇನ್ ಇಂಡಿಯಾ ಸಿಟ್ರೊಯೆನ್ C5 ಏರ್‌ಕ್ರಾಸ್ ಮೊದಲ ಕಾರು ಉತ್ಪಾದನೆಯಾಗಿ ಹೊರಬಂದಿದೆ. ನೂತನ ಕಾರು ಬಿಡುಗಡೆ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Made in India french automaker citroen c5 aircross first car rolls out
Author
Bengaluru, First Published Jul 31, 2020, 2:27 PM IST

ನವದೆಹಲಿ(ಜು.31):  ಫ್ರೆಂಚ್ ಆಟೋಮೇಕರ್ PSA ಗ್ರೂಪ್ ಅಧಿಕೃತವಾಗಿ ಭಾರತದಲ್ಲಿ ವ್ಯವಹಾರ ಆರಂಭಿಸಿದೆ. ಕಳೆದೆರಡು ವರ್ಷದಿಂದ ಭಾರತದಲ್ಲಿ ಕಾರು ಬಿಡಗಡೆಗೆ ಚಿಂತಿಸಿದ್ದ PSA ಗ್ರೂಪ್ ಇದೀಗ ತನ್ನು ಸಿಟ್ರೊಯೆನ್ C5 ಏರ್‌ಕ್ರಾಸ್ ಮೊದಲ ಕಾರು ಉತ್ಪಾದನೆಯಾಗಿ ಹೊರಬಂದಿದೆ. ಇಷ್ಟೇ ಅಲ್ಲ ಟ್ರಯಲ್ ಉತ್ಪಾದನೆ ಕೂಡ ಆರಂಭಗೊಂಡಿದೆ. Made in India french automaker citroen c5 aircross first car rolls out

ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ, ತಿಂಗಳಿಗೆ 1,500 ರೂ! 

PSA ಗ್ರೂಪ್ ಪ್ಲಾನ್ ಪ್ರಕಾರ ಸೆಪ್ಟೆಂಬರ್‌ ತಿಂಗಳಲ್ಲಿ ಕಾರು ಬಿಡುಗಡೆಯಾಗಬೇಕಿತ್ತು. ಆದರೆ ಮಾರ್ಚ್ ತಿಂಗಳಿಂದ ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ, ಲಾಕ್‌ಡೌನ್ ಆರಂಭಗೊಂಡಿತ್ತು. ಹೀಗಾಗಿ PSA ಕಂಪನಿಯ ಕಾರು ಉತ್ಪಾದನೆ ಸ್ಥಗಿತಗೊಂಡಿತು. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಸಿಟ್ರೊಯೆನ್ C5 ಏರ್‌ಕ್ರಾಸ್ SUV ಕಾರು ಬಿಡುಗಡೆಗೆ ತಯಾರಿ ಮಾಡುತ್ತಿದೆ. 

Made in India french automaker citroen c5 aircross first car rolls out

ತಮಿಳುನಾಡಿನ ತಿರುವಳ್ಳೂರ್ ಘಟಕದಲ್ಲಿ PSA ಗ್ರೂಪ್ ಉತ್ಪಾದನೆ ಕಾರ್ಯ ಆರಂಭಿಸಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಸಿಟ್ರೊಯೆನ್ C5 ಏರ್‌ಕ್ರಾಸ್ SUV ಕಾರಿನ ಬೆಲೆ 30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2.0 ಲೀಟರ್, 5 ಸಿಲಿಂಡರ್, ಟರ್ಬೋ ಡೀಸೆಲ್ ಎಂಜಿನ್ ಹೊಂದಿದ್ದು, 180hp ಪವರ್ ಸಾಮರ್ಥ್ಯ ಹೊದಿದೆ. 

ಆಹಮ್ಮದಾಬಾದ್‌ನಲ್ಲಿ ಮೊದಲ ಶೋ ರೂಂ ಆರಂಭಿಸಲು ಸಿದ್ದತೆ ನಡೆಸಿದ್ದ ಕಂಪನಿಗೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತ ನೀಡಿತು. ಹೀಗಾಗಿ ಶೋ ರೂಂ ಆರಂಭ ಕಾರ್ಯ ಕೂಡ ಸ್ಥಗಿತಗೊಂಡಿತು. ಭಾರತದಲ್ಲಿ ಆರಂಭಿಕ ಹಂತದಲ್ಲಿ 10 ರಿಂದ 15 ಶೋ ರೂಂ ಆರಂಭಿಸಲು ಪ್ಲಾನ್ ಮಾಡಿದೆ.
 

Follow Us:
Download App:
  • android
  • ios