ಬೆಂಗಳೂರು(ಏ.19): ಕೊರೋನಾ ಸಂಕಷ್ಟದ ಕಾರಣ ಭಾರತದಲ್ಲಿ ಲಾಕ್‌ಡೌನ ಮೇ.3ರ ವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ಕೆಲ ಆಟೋಮೊಬೈಲ್ ಕಂಪನಿಗಳು ಆನ್‌ಲೈನ್ ಮೂಲಕ ವ್ಯವಹಾರ ಆರಂಭಿಸಿದೆ. ಈಗಾಗಲೇ ಹೀರೋ ಮೋಟಾರ್ಸ್ ಆನ್‌ಲೈನ್ ಬುಕಿಂಗ್ ಆರಂಭಿಸಿದೆ. ಇದೀಗ ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಆನ್‌ಲೈನ್ ಬುಕಿಂಗ್ ಆರಂಭಿಸಿದೆ. ಇಷ್ಟೇ ಅಲ್ಲ ಉಚಿತ ಬುಕಿಂಗ್ ಆಫರ್ ನೀಡಿದೆ.

ಲಾಕ್‌ಡೌನ್ ನಡುವೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಆಫರ್, ಆನ್‌ಲೈನ್ ಮೂಲಕ ವ್ಯವಹಾರ!

ಲಾಕ್‌ಡೌನ್ ಆಫರ್ ಮೂಲಕ ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡುವ ಗ್ರಾಹಕರು ಯಾವುದೇ ಹಣ ಪಾವತಿಸಬೇಕಿಲ್ಲ. ಉಚಿತವಾಗಿ ಸ್ಕೂಟರ್ ಬುಕ್ ಮಾಡಿಬಹುದು. ಇನ್ನು ಲಾಕ್‌ಡೌನ್ ಮುಗಿದ ಬೆನ್ನಲ್ಲೇ ಸ್ಕೂಟರ್ ಬುಕ್ ಮಾಡಿದ ಗ್ರಾಹಕರಿಗೆ ಡೆಲಿವರಿಯಾಗಲಿದೆ. ಡೆಲಿವರಿ ವೇಳೆ ಹಣ ಪಾವತಿ ಮಾಡಿದರೆ ಸಾಕು. ವಿನೂತನ ಆಫರ್ ಲಾಕ್‌ಡೌನ್ ವೇಳೆ ಜಾರಿಯಲ್ಲಿರಲಿದೆ.

ದೇಶದಲ್ಲಿರುವ 200 ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಔಟ್‌ಲೆಟ್‌ಗಳಲ್ಲಿ ಆ ಆಫರ್ ಲಭ್ಯವಿದೆ. ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಆ್ಯಂಪರ್ ಸ್ಕೂಟರ್ ಲಭ್ಯವಿದೆ. ಆ್ಯಂಪರ್ ಸ್ಕೂಟರ್‌ಗಳಲ್ಲಿ 1.2KW ಡಿಸಿ ಮೋಟಾರ್ ಹಾಗೂ 1.8kwH ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಸಂಪೂರ್ಣ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡಲಿದೆ.

ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್!.

ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 67,000 ರೂಪಾಯಿಯಿಂದ(ಎಕ್ಸ್ ಶೋ ರೂಂ, ಬೆಂಗಳೂರು) ಆರಂಭವಾಗಲಿದೆ. ಈ ಸ್ಕೂಟರ್ ಗರಿಷ್ಠ ವೇಗ 50 ಕಿ.ಮೀ ಪ್ರತಿ ಗಂಟೆಗೆ ನೀಡಲಿದೆ.