ಕೈನೆಟಿಕ್ ಸಂಸ್ಛೆ ಇದೀಗ ಭಾರತದಲ್ಲಿ ನೂತನ 7 ಬೈಕ್‌ಗಳನ್ನ ಬಿಡುದಗಡೆ ಮಾಡಿದೆ. ಸೂಪರ್‌ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಕೈನೆಟಿಕ್ ಬಿಡುಗಡೆ ಮಾಡಿರುವ ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ.

ಮುಂಬೈ(ಅ.14): ಮೊಟೊರಾಯಲ್ ಕೈನೆಟಿಕ್ ಕಂಪನಿ ಹಾಗು ಪ್ರತಿಷ್ಠಿತ ನಾರ್ಟನ್, ಹ್ಯೊಸಂಗ್, MV ಆಗಸ್ಟ, FB ಮೊಂಡಿಯಲ್ ಹಾಗೂ SWM ಸೇರಿದಂತೆ ಒಟ್ಟು 5 ಕಂಪೆನಿಗಳ ಜೊತೆಗೂಡಿ ನೂತನ 7 ಸೂಪರ್ ಬೈಕ್ ಬಿಡುಗಡೆ ಮಾಡಿದೆ. 

MV ಆಗಸ್ಟ್ ಬ್ರೂಟೇಲ್ 800 RR, ನಾರ್ಟನ್ ಕಮಾಂಡೋ ಹಾಗೂ ಡೋಮಿನೇಟರ್, SWM ಸೂಪರ್‌ಡ್ಯುಯೆಲ್, FB ಮೊಂಡಿಯಲ್ HPS 300, ಹ್ಯೊಸಂಗ್ ಎಕ್ವೈಲಾ 650 ಪ್ರೊ ಹಾಗೂ ಜಿಟಿ 250R ಬೈಕ್‌ಗಳು ಬಿಡುಗಡೆಯಾಗಿದೆ. ಈ ಎಲ್ಲಾ ಬೈಕ್‌ಗಳನ್ನ ಮಹಾರಾಷ್ಟ್ರದ ಅಹಮ್ಮದ್‌ನಗರ್‌ದಲ್ಲಿರೋ ಕೈನೆಟಿಕ್ ಜೋಡಣಾ ಘಟಕದಲ್ಲಿ ತಯಾರಿಸಲಾಗಿದೆ.

ಭಾರತದಲ್ಲಿ ಪ್ರಮುಖ ನಗರಗಳ 6 ಡೀಲರ್‌ಶಿಪ್‌ಗಳಲ್ಲಿ ಈ ಸೂಪರ್‌ ಬೈಕ್‌ಗಳು ಲಭ್ಯವಿದೆ. ಮುಂದಿನ 4 ವರ್ಷಗಳಲ್ಲಿ 13,000 ಸೂಪರ್ ಬೈಕ್ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದೆ. 

ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಕೈನಿಕೆಟ್ ಆದಾಯ 1,000 ಕೋಟಿ ರೂಪಾಯಿ. ಇದೀಗ ನೂತನ ಬೈಕ್ ಬಿಡುಗಡೆಯಿಂದ ಮೊಟರಾಯಲ್ ಕೈನಿಟಿಕ್ 75 ಕೋಟಿಯಿಂದ 100 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿದೆ.