ಬೆಂಗಳೂರು(ಸೆ.18): ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಂಪನಿಗಳು ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಕಿಯಾ ಮೋಟಾರ್ಸ್ ಸರದಿ. ಕಿಯಾ ತನ್ನ ನೂತನ ಸೊನೆಟ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ 6.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.

ಕಿಯಾ ಸೊನೆಟ್ ಕಾರಿನ ಮೈಲೇಜ್ ಬಹಿರಂಗ; ಹ್ಯುಂಡೈ ವೆನ್ಯೂಗಿಂತ ಉತ್ತಮ!

ಕಿಯಾ ಸೊನೆಟ್ ಕಾರಿನಲ್ಲಿ 3 ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.0 ಟರ್ಬೋ ಪೆಟ್ರೋಲ್ ಎಂಜಿನ್, 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಕಾರು ಲಭ್ಯವಿದೆ. ಆಂಧ್ರ ಪ್ರದೇಶದ ಅನಂತಪುರಂ ಘಟಕದಲ್ಲಿ ಕಾರು ನಿರ್ಮಾವಾಗಿದ್ದು, ದೇಶಾದ್ಯಂತ ಒಂದೇ ಬೆಲೆ ನಿಗದಿಪಡಿಸಲಾಗಿದೆ.

ಕಿಯಾ ಸೊನೆಟ್ SUV ಬುಕಿಂಗ್: ಮೊದಲ ದಿನವೇ ದಾಖಲೆ ಬರೆದ ಕಾರು!

ಅನಂತಪುರಂ ಘಟಕದಲ್ಲಿ ನಿರ್ಮಾಣವಾಗುವ ಸೊನೆಟ್ ಕಾರು ಭಾರತ, ಏಷ್ಯಾ, ಲ್ಯಾಟಿನ್ ಅಮೆರಿಕ, ಮಿಡ್ಲ್ ಆಸ್ಟ್, ಆಫ್ರಿಕಾ ಸೇರಿದಂತೆ  70 ರಾಷ್ಟ್ರಗಳಿಗೆ ರಫ್ತಾಗಲಿದೆ. ಸೊನೆಟ್ ಕಾರಿಗೆ ಈಗಾಗಲೇ 25,000 ಬುಕಿಂಗ್ ಸ್ವೀಕರಿಸಲಾಗಿದೆ. ಸೊನೆಟ್ ಕಾರಿನಲ್ಲಿ  HTE, HTK, HTK+, HTX, and HTX+ ಹಾಗೂ GTX+ ಎಂಬ 5  ವೇರಿಯೆಂಟ್ , ಅಡಿಶನಲ್ ಜಿಟಿ ಟ್ರಿಮ್ ವೇರಿಯೆಂಟ್ ಲಭ್ಯವಿದೆ. 

6.71 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 11.99 ಲಕ್ಷ ರೂಪಾಯಿ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಆಗಿವೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.